ಬುಧವಾರ, ಜನವರಿ 20, 2021
26 °C

ತಮ್ಮನನ್ನು ಬಾವಿಗೆ ತಳ್ಳಿ, ಅಣ್ಣನೂ ಬಾವಿಗೆ ಹಾರಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ: ಮಾನಸಿಕ ಅಸ್ವಸ್ಥ ಅಣ್ಣ ತಮ್ಮನನ್ನು ಬಾವಿಗೆ ತಳ್ಳಿ, ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಭೂಸನೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಭೂಸನೂರು ಗ್ರಾಮದ ಸುನೀಲ ತುಳಸಿರಾಮ ಮರಾಠ (17) ಹಾಗೂ ಶೇಖರ ತುಳಸಿರಾಮ (12) ಮೃತಪಟ್ಟವರು. ಸಂಜೆ ಮನೆಯಲ್ಲಿ ಯಾರೂ ಇಲ್ಲದಿರುವಾಗ ಅಣ್ಣನು ತಮ್ಮನಿಗೆ ಬಹಿರ್ದೆಸೆಗೆ ಕರೆದುಕೊಂಡು ಹೋಗಿದ್ದಾನೆ. ಮಾನಸಿಕ ಅಸ್ವಸ್ಥನಾದ ಅಣ್ಣನು ತಮ್ಮನನ್ನು ಬಾವಿಗೆ ತಳ್ಳಿ, ತಾನೂ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿಯಾದರೂ ಮಕ್ಕಳು ಮನೆಗೆ ಬಂದಿಲ್ಲ ಎಂದು ಗಾಬರಿಗೊಂಡ ತಂದೆ, ತಾಯಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು. ಸಂಶಯದಿಂದ ಸಮೀಪದ ಹೊಲಕ್ಕೆ ಹೋದಾಗ ಅಲ್ಲಿನ ಬಾವಿಯಲ್ಲಿ ಬೆಳಿಗ್ಗೆ ತಮ್ಮನ ಶವ ಪತ್ತೆಯಾಗಿದೆ.

ನಿಂಬರ್ಗಾ ಪಿಎಸ್ಐ ಸುವರ್ಣಾ ಮಲಶೆಟ್ಟಿ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸೋಮವಾರ ಮಧ್ಯಾಹ್ನ ಅಣ್ಣನ ಶವ ಪತ್ತೆ ಮಾಡಿದರು. ಮೃತ ಸುನೀಲ ಕೂಲಿ ಕೆಲಸ ಮಾಡುತ್ತಿದ್ದರೆ, ಶೇಖರ 6ನೇ ತರಗತಿಯಲ್ಲಿ ಓದುತ್ತಿದ್ದನು. ಮೃತ ಸಹೋದರರಿಗೆ ತಂದೆ, ತಾಯಿ ಹಾಗೂ ಹಿರಿಯ ಸಹೋದರ ಮತ್ತು ಸಹೋದರಿ ಇದ್ದಾರೆ.

ನಿಂಬರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು