ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಮಾಜ ಕಟ್ಟಲು ಹೋರಾಟದ ಹಾದಿ ಪೂರಕ

ಅಗಲಿದ ಚೇತನ ವೈಜನಾಥ ಪಾಟೀಲರಿಗೆ ಗಣ್ಯರಿಂದ ಅಂತಿಮ ನಮನ
Last Updated 3 ನವೆಂಬರ್ 2019, 15:48 IST
ಅಕ್ಷರ ಗಾತ್ರ

ಚಿಂಚೋಳಿ: ಮಾಜಿ ಸಚಿವ ವೈಜನಾಥ ಪಾಟೀಲರು ಸಮಾಜವಾದ ಸಿದ್ಧಾಂತ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದವರು. ಸಂಘರ್ಷದ ಬದುಕನ್ನೇ ಬದುಕಿ ನಮ್ಮೆಲ್ಲರಿಗೂ ಹೋರಾಟದ ದಾರಿಯನ್ನು ನೀಡಿ ಹೋಗಿದ್ದಾರೆ. ಅವರ ಆಶಯ ಈಡೇರಲು ನಾವೆಲ್ಲರೂ ಹೋರಾಟ ಮಾಡಿ ಹೊಸ ಸಮಾಜ ಕಟ್ಟಬೇಕಾಗಿದೆ ಎಂದು ಮಾಜಿ ಶಾಸಕ ಬಿ.ಆರ್‌.ಪಾಟೀಲ ತಿಳಿಸಿದರು.

ವೈಜನಾಥ ಪಾಟೀಲರ ಅಂತಿಮ ದರ್ಶನ ಪಡೆದು ನುಡಿ ನಮನ ಸಲ್ಲಿಸಿದ ಬಿ.ಆರ್‌. ಪಾಟೀಲ, ವೈಜನಾಥ ಪಾಟೀಲರ ಜೀವನ ಹಾಗೂ ಹೋರಾಟ ಮತ್ತು ಪಾಟೀಲರ ಕೊಡುಗೆಗಳನ್ನು ಸ್ಮರಿಸಿದರು.

ವೈಜನಾಥ ಪಾಟೀಲ ಯಾರ ಕಾಲು ಹಿಡಿದು ಕೆಲಸ ಮಾಡಿಸಿಕೊಂಡ ಜಾಯಮಾನದವರಲ್ಲ. ಅವರು ಹೋರಾಟದ ಮೂಲಕ ಕೆಲಸ ಮಾಡಿಸಿಕೊಂಡವರಾಗಿದ್ದರು. ಇಂತಹ ನಾಯಕರು ನಮಗೆ ವಿರಳ. ಅವರು ನಮಗೆ ಮಾದರಿ ಎಂದು ಮುಖಂಡ ಮಲ್ಲಿಕಾರ್ಜುನ ಪಾಟೀಲ ಹುಳಗೇರಾ ತಿಳಿಸಿದರು.

ಬೆಂಬಲಿಗರಾದ ಸಿಥಿಕಂಠ ತಡಕಲ್‌ ಪಾಟೀಲರ ಸುದೀರ್ಘ ಜೀವನ ಹಾಗೂ ಹೋರಾಟ ಕುರಿತು ಮೆಲುಕು ಹಾಕಿದರು.

ಮಾಜಿ ಸಚಿವ ಸುನೀಲ ವಲ್ಲ್ಯಾಪುರೆ, ರೇವು ನಾಯಕ ಬೆಳಮಗಿ, ಶಾಸಕ ಬಸವರಾಜ ಮತ್ತಿಮೂಡ, ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ್‌, ಎಂ.ಬಿ. ಅಂಬಲಗಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಶೋಕ ಪಾಟೀಲ, ಸುರೇಶ ಸಜ್ಜನ್‌, ಚನ್ನಬಸವ ಕೊಪ್ಪಳ, ತಹಶೀಲ್ದಾರ್ ಸಾವಿತ್ರಿ ಸಲಗರ, ರೇವಣಸಿದ್ದಪ್ಪ ಜಲಾದೆ, ಗುರುಶಾಂತ ಪಟ್ಟೇದಾರ, ವೆಂಕಟೇಶ ಕುಲಕರ್ಣಿ ಮೊದಲಾದವರು ನುಡಿ ನಮನ ಸಲ್ಲಿಸಿದರು.

ಅಂತಿಮ ದರ್ಶನ ಪಡೆದ ಗಣ್ಯರು:ಶಾಸಕರಾದ ಶರಣಬಸಪ್ಪ ದರ್ಶನಾಪುರ, ವೆಂಕಟರೆಡ್ಡಿ ಮುದ್ನಾಳ್,ಎಂ.ವೈ.ಪಾಟೀಲ, ಈಶ್ವರ್‌ ಖಂಡ್ರೆ, ರಾಜಶೇಖರ ಪಾಟೀಲ ಹುಮನಾಬಾದ್, ತಿಪ್ಪಣ್ಣಪ್ಪ ಕಮಕನೂರ, ಡಾ.ಅವಿನಾಶ ಜಾಧವ, ಮುಖಂಡರಾದ ಚಂದ್ರಶೇಖರರೆಡ್ಡಿ ಮದನಾ ದೇಶಮುಖ, ಶೈಲೇಂದ್ರ ಬೆಲ್ದಾಳೆ, ಅಮರನಾಥ ಪಾಟೀಲ, ವೀರಶೆಟ್ಟಿ ಇಮ್ಡಾಪುರ, ಅನಿಲಕುಮಾರ ಜಮಾದಾರ, ಬಸವರಾಜ ಸಜ್ಜನ್‌, ಮಾಜಿ ಸಚಿವ ಎಸ್‌.ಕೆ ಕಾಂತಾ, ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಸಂಜೀವ ಯಾಕಾಪುರ, ಶಿವಶರಣಪ್ಪ ಶಂಕರ, ಬಸವರಾಜ ಸುಲೇಪೇಟ ಕೆರೋಳ್ಳಿ, ಡಾ. ಅಮಿತ ರೇವೂರ್‌, ಬಸವಣ್ಣ ಪಾಟೀಲ, ಸುಭಾಷ ಸೀಳಿನ್‌, ರಾಮಚಂದ್ರ ಜಾಧವ, ಅರುಣ ಪವಾರ, ಜಗದೀಶಸಿಂಗ್‌ ಠಾಕೂರ, ಶೈಲೇಶ್‌ ಹುಲಿ, ದೀಪಕನಾಗ್ ಪುಣ್ಯಶೆಟ್ಟಿ, ನೀಲಕಂಠರಾವ್‌ ದೇಶಮುಖ, ವೀರಶೆಟ್ಟಿ ಪಾಟೀಲ, ರೇವಣಸಿದ್ದಪ್ಪ ಮಜ್ಜಗಿ, ಚಂದ್ರಶೇಖರ ಹರಸೂರ, ಮಲ್ಲಿಕಾರ್ಜುನ ಪಾಲಾಮೂರ, ಶಾಂತವೀರ ಹೀರಾಪುರ, ದೇವೇಂದ್ರಪ್ಪ ಅವುಂಟಿ ಹಾಗೂ ತಾ.ಪಂ. ಜಿಪಂ. ಗ್ರಾ,.ಪಂ. ಸದಸ್ಯರು, ಹೈಕ ಹೋರಾಟ ಸಮಿತಿ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದ ಪ್ರಮುಖರು.

ಸ್ಮಾರಕ ನಿರ್ಮಿಸಿ: ವೈಜನಾಥ ಪಾಟೀಲರ ಹೆಸರಲ್ಲಿ ಕಲಬುರ್ಗಿ ನಗರದಲ್ಲಿ ಸ್ಮಾರಕ ನಿರ್ಮಿಸಬೇಕು. ಪಾಟೀಲರ ಜೀವನ ಗಾಥೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಸೇರಿಸಬೇಕು. ಗುಲಬರ್ಗಾ ವಿ.ವಿ.ಯಲ್ಲಿ ಸಂಶೋಧನಾ ಕೇಂದ್ರ ತೆರೆಯಬೇಕು. ಪಾಟೀಲರ ಸ್ವಾವಲಂಬಿ ಮತ್ತು ಸ್ವಾಭಿಮಾನದ ಜೀವನಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಪ್ರಯುಕ್ತ ಅವರ ಆಶಯ ಈಡೇರಲು ಕೌಶಲ ತರಬೇತಿ ಕೇಂದ್ರ ತೆರೆದು ಅದಕ್ಕೆ ಅವರ ಹೆಸರು ನಾಮಕರಣ ಮಾಡಬೇಕು. ಚಿಂಚೋಳಿ ಮತ್ತು ಕಲಬುರ್ಗಿಯಲ್ಲಿ ವೈಜನಾಥ ಪಾಟೀಲರ ಪ್ರತಿಮೆ ಸ್ಥಾಪಿಸಬೇಕು. ಈ ಬೇಡಿಕೆಗಳನ್ನು ಸಂಸದ ಡಾ.ಉಮೇಶ ಜಾಧವ ಶಾಸಕ ಡಾ.ಅವಿನಾಶ ಜಾಧವ ಈಡೇರಿಸಲು ಮುಂದಾಗಬೇಕು, ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದೊಯ್ಯಬೇಕೆಂದು ವೈಜನಾಥ ಪಾಟೀಲರ ಬೆಂಬಲಿಗರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT