ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಶೈವ ಮಹಾಸಭಾ ಚುನಾವಣೆ: 82 ಅಭ್ಯರ್ಥಿಗಳಿಂದ ಉಮೇದುವಾರಿಕೆ

ಜುಲೈ 21ರಂದು ವೀರಶೈವ ಮಹಾಸಭಾ ಚುನಾವಣೆ; ನಾಮಪತ್ರಗಳ ಪರಿಶೀಲನೆ ಇಂದು
Published 4 ಜುಲೈ 2024, 15:56 IST
Last Updated 4 ಜುಲೈ 2024, 15:56 IST
ಅಕ್ಷರ ಗಾತ್ರ

ಕಲಬುರಗಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ಸಮಿತಿಗೆ ನಡೆಯುತ್ತಿರುವ ಚುನಾವಣೆಗೆ ಒಟ್ಟು 82 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಶಶಿಕಾಂತ ಪಾಟೀಲ, ಶರಣಕುಮಾರ ಮೋದಿ, ರಾಜಶೇಖರ ಸಿರಿ ಹಾಗೂ ದಿವ್ಯಾ ಹಾಗರಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಇನ್ನುಳಿದಂತೆ 21 ಮಹಿಳೆಯರು ಹಾಗೂ 57 ಪುರುಷರು ಸೇರಿದಂತೆ ಒಟ್ಟು 78 ಮಂದಿ ಕಾರ್ಯನಿರ್ವಾಹಕ ಸಮಿತಿಗೆ ಸ್ಪರ್ಧಿಸಿದ್ದಾರೆ ಎಂದು ಮಹಾಸಭಾದ ಉಪ ಚುನಾವಣಾ ಅಧಿಕಾರಿ ಎಸ್‌.ಎಂ. ಕಾಡಾದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲಾ ಘಟಕಕ್ಕೆ ಒಂದು ಅಧ್ಯಕ್ಷ ಸ್ಥಾನ, 20 ಪುರುಷ ಸ್ಥಾನ ಹಾಗೂ 10 ಮಹಿಳಾ ಸ್ಥಾನಗಳಿಗೆ ಜುಲೈ 21ರಂದು ಚುನಾವಣೆ ನಿಗದಿಯಾಗಿದೆ.

ಜೂನ್‌ 27ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಕೊನೆ ದಿನವಾದ ಗುರುವಾರ ಅಧ್ಯಕ್ಷ ಸ್ಥಾನಕ್ಕೆ ಶರಣಕುಮಾರ ಮೋದಿ ಹಾಗೂ ಅವರ ಪೆನಲ್‌ನ ಸದಸ್ಯರು ನಾಮಪತ್ರ ಸಲ್ಲಿಸಿದರು.

ಜುಲೈ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಜುಲೈ 8ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.

ಕಲಬುರಗಿ ತಾಲ್ಲೂಕು ಘಟಕ:

ಜಿಲ್ಲಾ ಘಟಕದ ಜೊತೆಗೆ ಕಲಬುರಗಿ ತಾಲ್ಲೂಕು ಘಟಕಕ್ಕೂ ಚುನಾವಣೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ಬಂಡಕ, ಸಿದ್ರಾಮಪ್ಪ ಅಫಜಲಪುರಕರ, ಪ್ರಶಾಂತ ಗುಡಾ, ಜಗನ್ನಾಥ ಪಾಟೀಲ, ಶರಣಬಸಪ್ಪ ಟೆಂಗಳಿ ನಾಮಪತ್ರ ಸಲ್ಲಿಸಿದ್ದಾರೆ.

13 ಪುರುಷರು ಹಾಗೂ 7 ಮಹಿಳೆಯರು ಸೇರಿದಂತೆ 21 ಸದಸ್ಯರ ಆಡಳಿತ ಮಂಡಳಿಗೆ ಕೇವಲ 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಎಸ್‌.ಎಂ.ಕಾಡಾದಿ ತಿಳಿಸಿದ್ದಾರೆ.

ಕಲಬುರಗಿಯಲ್ಲಿ ಶಶಿಕಾಂತ ಪಾಟೀಲ ಅವರು ತಮ್ಮ ಬೆಂಬಲಿಗರೊಂದಿಗೆ ಉಪಚುನಾವಣಾಧಿಕಾರಿ ಎಸ್‌.ಎಂ.ಕಾಡಾದಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು
ಕಲಬುರಗಿಯಲ್ಲಿ ಶಶಿಕಾಂತ ಪಾಟೀಲ ಅವರು ತಮ್ಮ ಬೆಂಬಲಿಗರೊಂದಿಗೆ ಉಪಚುನಾವಣಾಧಿಕಾರಿ ಎಸ್‌.ಎಂ.ಕಾಡಾದಿ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT