7

ವಾಹನ ಪಲ್ಟಿ: ಕಾರ್ಮಿಕ ಸಾವು

Published:
Updated:

ಕಲಬುರ್ಗಿ:ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಕಾರ್ಮಿಕರು ಚಲಿಸುತ್ತಿದ್ದ ವಾಹನವು ಜೇವರ್ಗಿ ಹೊರ ವಲಯದಲ್ಲಿ ಸೋಮವಾರ ರಾತ್ರಿ ಪಲ್ಟಿಯಾಗಿದ್ದು, ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರು ಕೌಶಲ್ ಎಂದು ಗುರುತಿಸಲಾಗಿದೆ. ವಾಹನದಲ್ಲಿದ್ದ 8 ಕಾರ್ಮಿಕರ ಕೈ–ಕಾಲುಗಳು ಮುರಿದಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. 

‘ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೊ ಪಲ್ಟಿಯಾಗಿದೆ. 

ಕಾರ್ಮಿಕರಿದ್ದ ವಾಹನವು ಸುರಪುರದಿಂದ ಕಲಬುರ್ಗಿ ತಾಲ್ಲೂಕು ನಂದಿಕೂರ ಗ್ರಾಮಕ್ಕೆ ತೆರಳುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾವೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !