ಮಂಗಳವಾರ, ಆಗಸ್ಟ್ 20, 2019
27 °C

ವ್ಯಾಸರಾಯರ ಬೃಂದಾವನ ಧ್ವಂಸ: ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ

Published:
Updated:

ಕಲಬುರ್ಗಿ: ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿ ತುಂಗಾಭದ್ರಾ ನದಿ ತಟದಲ್ಲಿರುವ ವ್ಯಾಸರಾಜರ ವೃಂದಾವನವನ್ನು ಧ್ವಂಸಗೊಳಿಸಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಉತ್ತರಾದಿಮಠದ ಸತ್ಯಾತ್ಮತೀರ್ಥರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವ್ಯಾಸರಾಯರ ಬೃಂದಾವನ ಧ್ವಂಸ

ಇಲ್ಲಿನ ವಿದ್ಯಾನಗರದ ಕೃಷ್ಣಮಂದಿರದಲ್ಲಿ ಮಹಾಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಬೃಂದಾವನದ ಪುನರ್ ನಿರ್ಮಾಣಕ್ಕೆ ವ್ಯಾಸರಾಜಮಠದ ಸ್ವಾಮಿಗಳು ಮುಂದಾಗಿದ್ದಾರೆ. ಅದಕ್ಕೆ ಉತ್ತರಾದಿಮಠ ಅಗತ್ಯ ನೆರವು ನೀಡಲಿದೆ ಎಂದರು. ಧಾರ್ಮಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಆನೆಗೊಂದಿಗೆ  ತೆರಳಿದರು.

Post Comments (+)