ಸೇಡಂ: ಈಜಲು ನದಿಗಿಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲ್ಲೂಕಿನ ಬೀರನಳ್ಳಿ ಗ್ರಾಮದ ಕಾಗಿಣಾ ನದಿಯಲ್ಲಿ ನಡೆದಿದ್ದು ಸೋಮವಾರ ಗೊತ್ತಾಗಿದೆ.

ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ಶಿವಪ್ರಕಾಶ ಬಸವರಾಜ ಪಾಟೀಲ (26) ಮೃತ ಯುವಕ.

ಶನಿವಾರ ಸ್ನೇಹಿತರ ಜೊತೆಗೂಡಿ ನದಿ ಪಕ್ಕ ಊಟ ಮಾಡಿದ ನಂತರ ಈಜಲೆಂದು ಕಾಗಿಣಾ ನದಿಗಿಳಿದಿದ್ದು, ನಂತರ ನದಿಯಲ್ಲಿ ಮುಳುಗಿದ್ದಾನೆ. ಸಂಜೆ ಘಟನೆ ನಡೆದಿದ್ದರಿಂದ ಸೇಡಂ ಅಗ್ನಿಶಾಮಕ ಠಾಣೆ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡದವರು ಶನಿವಾರ ಮತ್ತು ಭಾನುವಾರ ಶೋಧ ಕಾರ್ಯ ನಡೆಸಿದ್ದು, ಸೋಮವಾರ ಮೃತ ದೇಹ ಪತ್ತೆಯಾಗಿದೆ.

ಮೃತ ಯುವಕನ ದೇಹ ಪಾಲಕರಿಗೆ ಒಪ್ಪಿಸಲಾಗಿದೆ. ತಾಲ್ಲೂಕಿನ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.