ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ನಿವಾರಣೆಗೆ ಏಕರೂಪ ಶಿಕ್ಷಣ

Last Updated 23 ಜುಲೈ 2017, 6:15 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೊಂಡು ಹಿರಿಯರು ಶ್ರದ್ಧೆ ಮತ್ತು ಆಸಕ್ತಿಯಿಂದ ಸಂಸ್ಕಾರ ಧಾರೆಯರೆದಾಗ ಮಾತ್ರ ಮಕ್ಕಳು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ’ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಮತ್ತು ವಿಕಾಸ ಅಕಾಡೆಮಿ ವತಿಯಿಂದ ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶೈಕ್ಷಣಿಕ ವಿಭಾಗದ ವಿವಿಧ ಸ್ಥರದ ಮುಖ್ಯಸ್ಥರಿಗೆ ಆಯೋಜಿಸಲಾಗಿದ್ದ ‘ಶೈಕ್ಷಣಿಕ ಪರಿವಾರದ ಸಭೆ’ಯಲ್ಲಿ ಮಾತನಾಡಿದ ಅವರು, ‘ಮಕ್ಕಳು ಉತ್ತಮ ಪ್ರಜೆಗ ಳಾಗಲು ಶಿಕ್ಷಣದ ಜೊತೆಗೆ ಹಿರಿಯರ ಒಡನಾಟ, ಮಾರ್ಗದರ್ಶನ ಮುಖ್ಯ’ ಎಂದರು.

‘ಆರ್ಥಿಕ ಮತ್ತು ಸಾಮಾಜಿಕ ಅಸ ಮತೋಲನ ವ್ಯಾಪಕವಾಗಿದ್ದು, ಏಕಪ್ರಕಾರದ ಶಿಕ್ಷಣ ವ್ಯವಸ್ಥೆಯಿಲ್ಲ. ನಗರ ಮತ್ತು ಗ್ರಾಮೀಣ ಮಕ್ಕಳು ಬೆಳೆಯುವ ವಾತಾವರಣದಷ್ಟೇ ವ್ಯತ್ಯಾಸ ಸರ್ಕಾರಿ, ಖಾಸಗಿ ಶಾಲೆ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ ಮಕ್ಕಳಲ್ಲಿದೆ. ಕೆಲವರು ಉತ್ತಮ ರೀತಿ ಕಲಿತರೆ, ಕೆಲವರಿಗೆ ಕನಿಷ್ಠ ಜ್ಞಾನವೂ ಸಿಗುವುದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಯಾವುದೇ ತಾರತಮ್ಯ ಮನೋ ಭಾವವಿಲ್ಲದೇ ಶ್ರೀಮಂತ ಮತ್ತು ಬಡ ವರ್ಗದವರ ಮಕ್ಕಳು ಒಂದೇ ಸ್ತರದ ಶಾಲೆಯಲ್ಲಿ ಓದಿದರೆ, ಅವರಲ್ಲಿ ಕೀಳಿರಿಮೆ, ಶ್ರೇಷ್ಠ ಅಥವಾ ಕನಿಷ್ಠ ಎಂಬ ಭಾವನೆ ಮೂಡುವುದಿಲ್ಲ. ಅಮೆರಿಕದಲ್ಲಿ ಅಧ್ಯಕ್ಷ ಮತ್ತು ಗುಮಾಸ್ತನ ಮಕ್ಕಳು ಒಂದೇ ಶಾಲೆಯಲ್ಲಿ ಓದುವಾಗ, ಭಾರತದಲ್ಲಿ ಏಕೆ ಆ ವ್ಯವಸ್ಥೆ ಜಾರಿಯಾಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಪ್ರತಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಬೇಕು ಎಂಬ ಒತ್ತಡ ಹೇರಿದರೆ, ಮಕ್ಕಳ ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಪೆಟ್ಟು ಬೀಳುತ್ತದೆ. ಮಕ್ಕಳನ್ನು ಮುಕ್ತವಾಗಿ ಸಂತಸದಿಂದ ಬೆಳೆಸಬೇಕೆ ಹೊರತು ಸ್ಪರ್ಧಾ ಕಣದಲ್ಲಿ ಇಳಿದಿರುವ ಸ್ಪರ್ಧಾಳು ರೀತಿ ಕಾಣಬಾರದು. ಅವರ ಮನಸ್ಸಿನ ಭಾವನೆ ಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಾಗತೀಕರಣದ ಬಳಿಕ ಇಡೀ ಶಿಕ್ಷಣ ವ್ಯವಸ್ಥೆಯು ಉದ್ಯಮ ಸ್ವರೂಪ ಪಡೆದಿದೆ. ಶಿಕ್ಷಣ ಎಂಬುದು ವಸ್ತುವಿನ ಸ್ವರೂಪ ಪಡೆದಿದ್ದು, ಎಲ್ಲವೂ ವ್ಯಾಪಾರ ದಂತೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸುವುದು ಹೇಗೆ ಎಂಬುದಕ್ಕೆ  ತರಬೇತಿ ನೀಡಲಾಗುತ್ತಿದೆ ಹೊರತು ಸಮಗ್ರ ವ್ಯಕ್ತಿತ್ವ ರೂಪಿಸಿ ಕೊಳ್ಳುವಿಕೆ ಬಗ್ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರೊ. ಎಸ್.ಆರ್‌.ನಿರಂಜನ ಮಾತನಾಡಿ, ‘ಜೀವನದಲ್ಲಿ ಯಶಸ್ವಿಯಾಗಲು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ವೃದ್ಧಿಸಬೇಕು. ಶಾಲೆಯಿಂದ ಉನ್ನತ ಶಿಕ್ಷಣದ ಹಂತದವರೆಗೆ ಆರೋಗ್ಯಕಾರಿ ಪೈಪೋಟಿ ಎದುರಿಸುವ ಅವರಲ್ಲಿ ಐಎಎಸ್‌ ಅಥವಾ ಕೆಎಎಸ್ ಪರೀಕ್ಷೆ ಸಮರ್ಥವಾಗಿ ಎದುರಿಸುವ ಆತ್ಮ ವಿಶ್ವಾಸವೂ ವೃದ್ಧಿಸುತ್ತದೆ’ ಎಂದರು.

ನಗರೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಮುಕ್ಕಾ, ಪ್ರಮುಖರಾದ ಶಿವಯ್ಯ ಮಠಪತಿ ಇದ್ದರು. ಬೀದರ್, ಕಲಬುರ್ಗಿ, ಯಾದಗಿರಿ ಮತ್ತು ಸೇಡಂನ ಶೈಕ್ಷಣಿಕ ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT