ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆನ್ಸ್‌ ಪಾರ್ಲರ್‌: ಗಂಡಸ್ರಿಗೂ ಫೇಸಿಯಲ್‌!

ಆರೋಗ್ಯಕ್ಕೂ ಸೌಂದರ್ಯಕ್ಕೂ ಉತ್ತಮ ಮಸಾಜ್‌, ಆಯುರ್ವೇದ, ಗಿಡಮೂಲಿಕೆ ಕ್ರೀಮ್‌
Last Updated 2 ಜುಲೈ 2018, 12:52 IST
ಅಕ್ಷರ ಗಾತ್ರ

ಕಲಬುರ್ಗಿ: ‘ಗಂಡಸರಿಗೆ ಫೇಸಿಯಲ್ ಏನ್ರಿ, ತರ್ಕಾರಿ, ಕ್ರೀಮ್‌ ಹಚ್ಕೊಳ್ಳೋದಾ...’ ಎಂದು ಜನರು ಕೇಳುವ, ಮೂಗುಮುರಿಯುವ ಸ್ಥಿತಿ ಈಗಿಲ್ಲ. ಕಾಲ ಬದಲಾಗಿದೆ. ಯುವತಿಯರಂತೆ ಯುವಕರೂ ಬ್ಯೂಟಿ ಪಾರ್ಲರ್‌ (ಪುರುಷರ ಪಾರ್ಲರ್‌)ಗಳಿಗೆ ಆಗಾಗ ಭೇಟಿ ನೀಡಿ ಸೌಂದರ್ಯ ಹೆಚ್ಚಿಸುವ ಟ್ರೀಟ್‌ಮೆಂಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಕಲಬುರ್ಗಿಯೂ ಇದಕ್ಕೆ ಭಿನ್ನವಾಗಿಲ್ಲ.

‘ಬಡಜಿಲ್ಲೆ’  ಶ್ರೀಮಂತವಾಗುತ್ತಿದೆ. ಆಡಂಬರಕ್ಕೇನೂ ‘ಬರ’ವಿಲ್ಲ. ಕೃಷಿಕರು, ಬಡವರಾಗಿದ್ದರೂ ಜೀವನ ಶೈಲಿ (ಲೈಫ್‌ಸ್ಟೈಲ್‌)ಯ ಖರ್ಚು
ವೆಚ್ಚ ಸರಳವಾಗಿಲ್ಲ.

ಇದಕ್ಕೆ ಸಾಕ್ಷಿ ಎಂಬಂತೆ ನಗರದ ವಿವಿಧೆಡೆ ‘ಮೆನ್ಸ್‌ ಬ್ಯೂಟಿ ಪಾರ್ಲರ್‌’ಗಳು  ಸಕ್ರಿಯ­ವಾಗಿವೆ. ವ್ಯವ­ಹಾರವೂ ಹೆಚ್ಚುತ್ತಿದೆ. ಸಾಂಪ್ರದಾಯಿಕ ‘ಹೇರ್‌­ಕಟಿಂಗ್‌ ಸೆಲೂನ್‌’ ಗಳಂತೆ ಇಲ್ಲಿಯೂ ತಲೆಕೂದಲು ಹಾಗೂ ಮುಖ ಕ್ಷೌರ ಮಾಡುವ ವ್ಯವಸ್ಥೆ ಇರುತ್ತದೆ. ಇದರೊಂದಿಗೆ ಮಸಾಜ್‌, ಒತ್ತಡ ಸ್ಟ್ರೆಸ್‌ ನಿವಾರಣೆಯ ಮಸಾಜ್‌ಗಳು ಇವೆ.

ಕೆಲವು ಮೆನ್ಸ್‌ ಪಾರ್ಲರ್‌ಗಳಲ್ಲಿ ಆಯುರ್ವೇದಿಕ್‌, ಪಂಚಕರ್ಮ ವಿಧಾನದ ಅಂಗಮರ್ಧನ ಮತ್ತಿತರ ಸೌಲಭ್ಯಗಳೂ ಲಭ್ಯವಿವೆ. ‘ಮೆನ್ಸ್‌ ಪಾರ್ಲರ್‌ಗಳು ಪುರುಷರಿಗಾಗಿಯೇ ಮೀಸ­ಲಿರುವ ಸೌಂದರ್ಯ ವರ್ಧಕ ಕೇಂದ್ರಗಳು. ಇಲ್ಲಿ ಕ್ಷೌರ ಮಾತ್ರವಲ್ಲದೇ, ಫೋಮ್‌ ಶೇವಿಂಗ್‌, ಶಾಂಪೂ ವಾಷ್‌, ಆಯಿಲ್‌ ಮಸಾಜ್‌, ಫೇಸ್‌ ಮಸಾಜ್‌,  ಫೇಸ್‌ ಕ್ರಬ್‌, ಹೇರ್‌ ಕಲರಿಂಗ್‌, ಗಾರ್ನಿಯರ್‌, ಲರೆಲ್‌ ಕಲರ್‌, ಕಾಸ್ಟಿಂಗ್‌ನಂತಹ ವಿಶೇಷ ಸೌಲಭ್ಯಗಳು ಇವೆ. ಅಂತೆಯೇ ಗೋಲ್ಡ್‌  ಫೇಸಿಯಲ್‌ (ಪ್ಯಾಕ್‌), ರಿಚ್‌ ಗೋಲ್ಡ್‌ ಫೇಸಿಯಲ್‌ ಪ್ಯಾಕ್‌ ಎಂಬಿತ್ಯಾದಿ ಸ್ವಲ್ಪ ದುಬಾರಿ’ ಎನ್ನುತ್ತಾರೆ ಎಸ್‌.ಬಿ. ಟೆಂಪಲ್‌ ರಸ್ತೆ ಗುಡ್‌ಲಕ್‌ ಹೋಟೆಲ್‌ ಹತ್ತಿರ ಇರುವ ‘ಎಕ್ಸ್‌ಟ್ರೀಮ್‌ ಮೆನ್ಸ್‌ ಪಾರ್ಲರ್’ನ ದತ್ತ ಮಾನೆ.  ಪಾರ್ಲರ್‌ನಲ್ಲಿ ಅಷ್ಟೇ ಅಲ್ಲ ವಿವಾಹ, ರಿಸೆಪ್ಷನ್‌ ಇನ್ನಿತರ  ಸಮಾರಭಗಳಲ್ಲೂ ಪುರುಷರ ಸೌಂದರ್ಯ, ಪ್ರಸಾದನ ಸೇವೆಗಳನ್ನು ಅವರವರ ಬೇಡಿಕೆಯಂತೆ ನೀಡ­ಲಾಗುತ್ತದೆ ಎನ್ನುತ್ತಾರೆ ಅವರು.

ಬಿಸಿಲು, ದೂಳು, ವೃದ್ಧಾಪ್ಯಕ್ಕೆ ತಡೆ!:  ಪುರುಷರಲ್ಲಿ ವಯಸ್ಸಿನ ಅಂತರ ಇಲ್ಲದಂತೆ ಇಂದು ಸೌಂದರ್ಯ ಪ್ರಜ್ಞೆ ಹೆಚ್ಚುತ್ತಿದೆ. ಕಾಲೇಜು ಯುವಕರಿರಲಿ, ಮಧ್ಯ ವಯಸ್ಕರಾದ ವೃತ್ತಿನಿರತರೇ ಆಗಿರಲಿ ಚಾಕ್ಲೆಟ್‌ನಂತೆ ಮಿದುವಾದ ಮುಖ, ವೃದ್ಧಾಪ್ಯ ದೂರ ಇರಿಸುವ (ಆ್ಯಂಟಿ ಏಜಿಂಗ್‌) ಸುಕ್ಕಿಲ್ಲದ ತ್ವಚೆ, ಕಪ್ಪು ಕಲೆ– ಇತರ ಕಲೆಗಳಿಂದ ಮುಕ್ತವಾಗಿ ಕಾಂತಿಯುಕ್ತ (ಗ್ಲೊ) ಮುಖವರ್ಣ ತಮಗೆ ಇರಬೇಕು ಎಂದು ಬಯಸುತ್ತಾರೆ.

  ಇದಕ್ಕೆ ಪೂರಕವಾದ ಪಪ್ಪಾಯ, ಬಾಳೆ ಹಣ್ಣಿನ ಬನಾನಾ ಪ್ಯಾಕ್‌, ರಿಚ್‌ಬಿಲ್‌ ಪ್ಯಾಕ್‌, ಆಯಿಲ್‌ ಮಸಾಜ್‌ ಚಿಕಿತ್ಸೆಗಳು ಮೆನ್ಸ್‌ ಪಾರ್ಲರ್‌ಗಳಲ್ಲಿ ಲಭಿಸುತ್ತವೆ. ಅಲ್ಲದೆ ಬಿಸಿಲಿನಿಂದ ಮುಖ ತ್ವಚೆಯ ಮೇಲಾಗುವ ಸನ್‌ಬರ್ನ್‌ ತಡೆಯಲು ಸನ್‌ಸ್ಕ್ರೀನ್‌ ಪ್ಯಾಕ್‌್, ಡೆಡ್‌ಸೆಲ್‌ ರಿಮೂವಲ್‌, ಡಸ್ಟ್‌ ಅಲರ್ಜಿ ತಡೆಯುವ ಕ್ರಮಗಳೆಲ್ಲ ಈಗ ಇಲ್ಲಿನ ಪುರುಷರಿಗೂ ಆಪ್ತವಾಗುತ್ತಿವೆ.

‘ಸಾಮಾನ್ಯ ಸೆಲೂನುಗಳಿಗೆ  ಹೋಲಿಸಿದರೆ ಸ್ವಲ್ಪ ಹೆಚ್ಚೇ ಎನಿಸುವ ಶುಲ್ಕ ಮೆನ್ಸ್‌ಪಾರ್ಲರ್‌ಗಳಲ್ಲಿ ಇದ್ದರೂ, ಇಂದಿನ ಜೀವನ ಶೈಲಿಗೆ ಇದು ಎಲ್ಲರ ಕೈಗೆಟಕುವ ದರ. ಟಿವಿ, ಸಿನಿಮಾ ಮಾಧ್ಯ ಮಗಳು ಗ್ರಾಮೀಣ ಬದುಕಿನ ಮೇಲೂ ಪ್ರಭಾವ ಬೀರಿರುವುದರಿಂದ ಎಲ್ಲ ವಯೋಮಾನ ದವರೂ ತಾವು ಚೆನ್ನಾಗಿ ಕಾಣಬೇಕೆಂದು ಬಯಸುತ್ತಾರೆ. ಅಲ್ಲಲ್ಲಿ ಪುರುಷರ ಪಾರ್ಲರ್‌ಗಳು ಇರುವುದ ರಿಂದ ಅಂಥವರ ಬೇಡಿಕೆ ಈಡೇರುತ್ತದೆ.

ವಿದ್ಯಾರ್ಥಿಗಳು, ನೌಕರಸ್ಥರಷ್ಟೇ ಅಲ್ಲ, ಅಂಗಡಿ ಮುಂಗಟ್ಟುಗಳ ವರ್ತಕರು, ಸೇಲ್ಸ್‌ ಮನ್‌ಗಳು,  ಹೋಟೆಲ್‌ ಸಿಬ್ಬಂದಿ, ಕೃಷಿಕರು ಹೀಗೆ ಹಲವು ರಂಗದವರು ಮೆನ್ಸ್‌ ಪಾರ್ಲರ್‌ಗೆ ಬರುತ್ತಾರೆ’ ಎನ್ನುವುದು ಗ್ರಾಹಕ ಮಹೇಶ್‌ ಪಾಟೀಲ್‌ ಅಭಿಪ್ರಾಯ.
18ಪ್ಲಸ್‌ ಪಾರ್ಲರ್‌: ಕಲಬುರ್ಗಿಯ ಮಾರ್ಕೆಟ್‌ ಪ್ರದೇಶದಲ್ಲಿ ಮೆನ್ಸ್‌ ಪಾರ್ಲರ್‌ನ ಇನ್ನೊಂದು ವಿಶೇ­ಷ ಪ್ರಭೇದವಾದ 18 ಪ್ಲಸ್‌ ಪಾರ್ಲರ್‌ ಇದೆ.  ಇದು ಪುರುಷರಿಗಾಗಿಯೇ ಇದೆ. ಆದರೆ 18 ವರ್ಷ ವಯಸ್ಸು ಮೀರಿದವರಿಗೆ ಇಲ್ಲಿ ಸೇವೆ ಲಭ್ಯ.
*
ರಾಜಕಾರಣಿಗಳು, ವೃತ್ತಿ ನಿರತ ನೌಕರರು ಒತ್ತಡ ನಿವಾರಕ ಮಸಾಜ್‌ ಮಾಡಿಸಲು ಬರುತ್ತಾರೆ. ಸೌಂದರ್ಯ ಪ್ರಜ್ಞೆ ಪುರುಷರಲ್ಲೂ ಹೆಚ್ಚೇ ಇದೆ.
ಆನಂದ್‌ ಕಾನಗಡ್ಡಿ, ಎಕ್ಸ್‌ಟ್ರೀಮ್‌ ಪಾರ್ಲರ್ ನೌಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT