ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕ್ವಿoಟಲ್ ಸಕ್ಕರೆ ನೀಡಿದ ನಂದಿ ಸಹಕಾರಿ ಕಾರ್ಖಾನೆ

Last Updated 9 ಏಪ್ರಿಲ್ 2020, 14:15 IST
ಅಕ್ಷರ ಗಾತ್ರ

ವಿಜಯಪುರ: ಮುಖ್ಯಮಂತ್ರಿಗಳ ಕೋವಿಡ್–19 ಪರಿಹಾರ ನಿಧಿಗೆ ನೆರವಿನ ರೂಪವಾಗಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ 100 ಕ್ವಿಂಟಲ್ ಸಕ್ಕರೆಯನ್ನು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಅವರಿಗೆ ಗುರುವಾರ ಹಸ್ತಾಂತರಿಸಲಾಯಿತು

ಕಾರ್ಖಾನೆಯ ನಿರ್ದೇಶಕರಾದ ಎಚ್.ಆರ್. ಬಿರಾದಾರ, ವಿ.ಎಚ್ ಬಿದರಿ ಹಾಗೂ ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಪಿ.ಬಿ. ಕಾಳಗಿ ಹಾಗೂ ಪ್ರಧಾನ ವ್ಯವಸ್ಥಾಪಕ ಎ.ಸಿ. ಪಾಟೀಲ ಅವರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಇವರಿಗೆ ಗುರುವಾರ ಸಕ್ಕರೆಯನ್ನು ಹಸ್ತಾಂತರಿಸಿದರು.

ಈಗಾಗಲೇ ಕಾರ್ಖಾನೆ ವತಿಯಿಂದ ಉಚಿತವಾಗಿ 4 ಸಾವಿರ ಲೀಟರ್ ಸ್ಯಾನಿಟೈಜರ್ ಮಾಡಿಕೊಡಲು ಒಪ್ಪಿಕೊಂಡಿದೆ. ಇಲ್ಲಿಯವರೆಗೆ ಜಿಲ್ಲಾಧಿಕಾರಿಗಳಿಗೆ 1200 ಲೀಟರ್ ಸ್ಯಾನಿಟೈಸರ್ ಹಸ್ತಾತರಿಸಲಾಗಿದ್ದು, ಕೊರೊನಾ ಸೋಮಕಿನ ವಿರುದ್ಧದ ಜಿಲ್ಲಾಡಳಿತದ ಹೋರಾಟದಲ್ಲಿ ನಂದಿ‌ ಸಹಕಾರಿ ಸಕ್ಕರೆ ಕಾರ್ಖಾನೆಯೂ ಕೂಡ ಭಾಗಿಯಾಗಿದೆ ಎಂದು ಕಾರ್ಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT