ಬುಧವಾರ, ಸೆಪ್ಟೆಂಬರ್ 18, 2019
22 °C

ಅಶೋಕ್ ಪೈ ಕಾಲೇಜು: 17ರಂದು ಹದಿಹರೆಯದವರಿಗೆ ಕಾರ್ಯಾಗಾರ

Published:
Updated:

ಶಿವಮೊಗ್ಗ: ಮಾನಸ ಟ್ರಸ್ಟ್‌ನ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಮೇ 17ರಂದು ಹದಿ ಹರೆಯದವರಿಗಾಗಿ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ.

ಇಂದು ಮಕ್ಕಳ ವರ್ತನೆಗಳು ಬದಲಾಗುತ್ತಿವೆ. ಅವರ ಶೈಕ್ಷಣಿಕ ಸಮಸ್ಯೆ, ವಿದ್ಯಾಭ್ಯಾಸದ ಆಯ್ಕೆ, ಮಾನಸಿಕ, ದೈಹಿಕ ಆರೋಗ್ಯ, ಜೀವನ ಶೈಲಿ ಕುರಿತು ಜಾಗೃತಿ ಮೂಡಿಸಲು ಹಾಗೂ ಮಾರ್ಗದರ್ಶನ ನೀಡಲು ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂದ್ಯಾ ಕಾವೇರಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೆಳಿಗ್ಗೆ 11ರಿಂದ ಸಂಜೆ 6 ರವರೆಗೆ ಕಾರ್ಯಾಗಾರ ನಡೆಯಲಿದೆ. ಆಪ್ತ ಸಮಾಲೋಚನೆ ಕೂಡ ಇರುತ್ತದೆ. ಹಿರಿಯ ಆಪ್ತ ಸಮಾಲೋಚಕರು ಭಾಗವಹಿಸಿ, ವಿಶೇಷ ಮಾಹಿತಿ ನೀಡುವರು. ವಿವಿಧ ಮಾನಸಿಕ ಪರೀಕ್ಷೆ ಕೂಡ ನಡೆಸಲಾಗುವುದು ಎಂದು ವಿವರ ನೀಡಿದರು.

ಸಾಹಿತಿ ಡಾ.ರಾಜೇಂದ್ರ ಚೆನ್ನಿ ಕಾರ್ಯಕ್ರಮ ಉದ್ಘಾಟಿಸುವರು. ನಂತರ ಆಂಗ್ಲ ಸಾಹಿತ್ಯ ಅಧ್ಯಯನ ಪ್ರಸ್ತುತತೆ ವಿಷಯ ಕುರಿತು ಉಪನ್ಯಾಸ ನೀಡುವರು. ಪಿಯು ವಿದ್ಯಾರ್ಥಿಗಳಿಗೆ ಮಂಗಳೂರಿನ ಶ್ರೀನಿವಾಸ ಪೇಜಿತ್ತಾಯ ಅವರು ಪತ್ರಿಕೋದ್ಯಮ ವಿಷಯ ಕುರಿತು ಮಾಹಿತಿ ನೀಡುವರು. ₨ 50 ಪ್ರವೇಶ ಶುಲ್ಕ ಇರುತ್ತದೆ. ಮಾಹಿತಿಗೆ 9480034495 ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ರಜನಿ ಪೈ ಹಾಗೂ ಡಾ.ವಾಮನ ಶಾನಬಾಗ್ ಉಪಸ್ಥಿತರಿದ್ದರು.

Post Comments (+)