3
ಜಯಂತ್ಯುತ್ಸವ, ಕವಿಗೋಷ್ಠಿ ಹಾಗೂ ಗೀತಗಾಯನ

ಕೆಂಪೇಗೌಡರಿಂದ ಕೃಷಿಗೆ ಉತ್ತೇಜನ

Published:
Updated:
ಚನ್ನಪಟ್ಟಣದಲ್ಲಿ ಕೆಂಪೇಗೌಡರ ಜಯಂತಿಯನ್ನು ಎಂ.ಸಿ.ಎಚ್. ಮೆಹರೀಶ್ ಉದ್ಘಾಟಿಸಿದರು

ಚನ್ನಪಟ್ಟಣ: ನಾಡಪ್ರಭು ಕೆಂಪೇಗೌಡ ಅವರು ವ್ಯವಸಾಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟು ರೈತರ ಏಳಿಗೆಗಾಗಿ ಶ್ರಮಿಸಿದವರು ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಎಂ.ಸಿ.ಎಚ್. ಮೆಹರೀಶ್ ಹೇಳಿದರು.

ಪಟ್ಟಣದ ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ನಾಡಪ್ರಭು ಕೆಂಪೇಗೌಡ ಜಯಂತ್ಯುತ್ಸವ, ಕವಿಗೋಷ್ಠಿ ಹಾಗೂ ಗೀತಗಾಯನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಂಪೇಗೌಡ ಅವರು ಯಲಹಂಕ, ದೇವನಹಳ್ಳಿ, ಹೊಸಕೋಟೆ, ಮಾಗಡಿ, ಚನ್ನಪಟ್ಟಣ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಇವರ ಆಡಳಿತದ ಅವಧಿಯಲ್ಲಿ ಈ ಭಾಗಗಳಲ್ಲಿ ಸಾಕಷ್ಟು ಜೀರ್ಣೋದ್ಧಾರ ಕಾರ್ಯಗಳು ನಡೆದಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಮಾತನಾಡಿ, ಅವರು ಆಯಾ ಜನಾಂಗದವರ ಕಸುಬುಗಳಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ನಗರ್ತಪೇಟೆ, ಕುಂಬಾರಪೇಟೆ, ಅಕ್ಕಿಪೇಟೆ, ತಿಗಳರಪೇಟೆ ಈ ತರಹ ಪ್ರದೇಶಗಳಿಗೆ ಒತ್ತುಕೊಟ್ಟು ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ಸರ್ವ ಜನಾಂಗದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ರಾಜಧಾನಿಯನ್ನು ಆರ್ಥಿಕವಾಗಿ ಸಶಕ್ತವನ್ನಾಗಿಸಲು ಪೂರ್ಣ ಪ್ರಮಾಣದ ಶ್ರಮ ವಹಿಸಿ ರಾಜ್ಯಭಾರ ಮಾಡಿದವರು ಎಂದರು. ವಿದ್ಯಾಸಂಸ್ಥೆಯ ಉಪಪ್ರಾಂಶುಪಾಲ ದೊಡ್ಡೇಗೌಡ, ಕಸಾಪ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಕೃಷ್ಣೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಬಿ. ಚಲುವರಾಜು, ಕೋಶಾಧ್ಯಕ್ಷ ಶ್ರೀನಿವಾಸ ರಾಂಪುರ, ಸಮಾಜಸೇವಕ ಜೋಸೆಫ್ ಮರ್ಸಿ ಭಾಗವಹಿಸಿದ್ದರು.

ಬೊಮ್ಮನಾಯಕನಹಳ್ಳಿ ಕೃಷ್ಣಪ್ಪ, ದೇ.ನಾರಾಯಣಸ್ವಾಮಿ, ಎಂ.ಟಿ. ನಾಗರಾಜು, ಎಲೆಕೇರಿ ಶಿವರಾಂ ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಿದರು. ಗಾಯಕರಾದ ಮಳೂರು ಪುಟ್ಟಸ್ವಾಮಿಗೌಡ, ಕೆ.ಎಚ್. ಕುಮಾರ್ ಗೀತಗಾಯನ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !