ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಸಿಇಆರ್‌ಟಿ ಸಮಿತಿಯ ಶಿಫಾರಸಿಗೆ ಎಐಡಿಎಸ್ಒ ವಿರೋಧ

Published 27 ಅಕ್ಟೋಬರ್ 2023, 15:16 IST
Last Updated 27 ಅಕ್ಟೋಬರ್ 2023, 15:16 IST
ಅಕ್ಷರ ಗಾತ್ರ

ಮಡಿಕೇರಿ: ಶಾಲಾ ಪಠ್ಯ ಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ‘ಭಾರತ’ ಎಂದು ಬದಲಾಯಿಸಬೇಕೆಂಬ ಎನ್‌ಸಿಇಆರ್‌ಟಿ ಸಮಿತಿಯ ಶಿಫಾರಸನ್ನು ಎಐಡಿಎಸ್ಒ ಕೊಡಗು ಜಿಲ್ಲಾ ಸಂಚಾಲಕ ಸುಭಾಷ್ ಖಂಡಿಸಿದ್ದಾರೆ.

ಈ ಶಿಫಾರಸು ಕೇಂದ್ರ ಸರ್ಕಾರದ ಕಾರ್ಯಸೂಚಿಗೆ ಮಣೆ ಹಾಕುವಂತಿದೆ. ಒಂದೇ ಭಾಷೆಯ ಬಳಕೆಯನ್ನು ಹೇರುವ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಪ್ರಜಾತಾಂತ್ರಿಕ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿರುವ ಶಿಕ್ಷಣದ ಕೇಂದ್ರೀಕರಣಕ್ಕೆ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶಿಕ್ಷಣದ ವೈಜ್ಞಾನಿಕ ಮತ್ತು ಧರ್ಮನಿರಪೇಕ್ಷ ಆಶಯಗಳಿಗೆ ವಿರುದ್ಧವಾಗಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಅಳವಡಿಸುವ ಶಿಫಾರಸ್ಸನ್ನು ಸಹ ಈ ಸಮಿತಿ ಮಾಡಿದೆ. ಈಗಾಗಲೇ ದೇಶದ ಸಂವಿಧಾನದಲ್ಲಿ ‘ಭಾರತ’ ಮತ್ತು ‘ಇಂಡಿಯಾ’ ಎಂಬ ಎರಡೂ ಹೆಸರುಗಳನ್ನು ಸ್ವೀಕರಿಸಲಾಗಿದೆ. ಜನ ಮಾನಸದಲ್ಲಿ ಎರಡು ಹೆಸರುಗಳು ಬೆರೆತುಹೋಗಿವೆ. ಪರಿಸ್ಥಿತಿ ಹೀಗಿರುವಾಗ, ಇಂತಹ ಶಿಫಾರಸುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಅಂಧ - ರಾಷ್ಟ್ರೀಯ ಭಾವನೆಯನ್ನು ಕೆರಳಿಸಿ, ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಾಧಿಸುತ್ತಿರುವ ವಾಸ್ತವ ಸಮಸ್ಯೆಗಳಿಂದ ಗಮನವನ್ನು ವಿಚಲಿತಗೊಳಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ದೇಶದ ನವೋದಯ ಚಿಂತಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರರು ಪ್ರತಿಪಾದಿಸಿದ ನಿಜವಾದ ಶಿಕ್ಷಣದ ಅಂತಃಸತ್ವವನ್ನು ನಾಶಗೊಳಿಸುವ ಈ ಶಿಫಾರಸ್ಸುಗಳನ್ನು ಜಾರಿಗೊಳಿಸಬಾರದು. ಈ ರೀತಿಯ ಶಿಫಾರಸ್ಸುಗಳೊಂದಿಗೆ ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ತನ್ನ ಅಜೆಂಡಾಗಳನ್ನು ಹೇರುತ್ತಿರುವುದರ ವಿರುದ್ಧ ದೇಶದ ಪ್ರಜಾತಂತ್ರ ಪ್ರಿಯ ಜನಗಳು ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT