ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಹಿಳಾ ಹಾಕಿ ತಂಡಕ್ಕೆ ಸಲಿಮಾ ನಾಯಕಿ

Published 3 ಮೇ 2024, 11:21 IST
Last Updated 3 ಮೇ 2024, 11:21 IST
ಅಕ್ಷರ ಗಾತ್ರ

ನವದೆಹಲಿ: ಮಿಡ್‌ಫೀಲ್ಡರ್‌ ಸಲಿಮಾ ಟೇಟೆ ಅವರನ್ನು ಭಾರತ ಮಹಿಳಾ ಹಾಕಿ ತಂಡಕ್ಕೆ ನಾಯಕಿಯನ್ನಾಗಿ ಗುರುವಾರ ಆಯ್ಕೆ ಮಾಡಲಾಗಿದೆ. ಭಾರತ ತಂಡವು ಈ ತಿಂಗಳ ಕೊನೆಯಲ್ಲಿ ಎಫ್‌ಐಎಚ್‌ ಪ್ರೊ ಲೀಗ್‌ನ ಬೆಲ್ಜಿಯಂ ಮತ್ತು ಇಂಗ್ಲೆಂಡ್‌ ಲೆಗ್‌ನಲ್ಲಿ ಪಾಲ್ಗೊಳ್ಳಲಿದೆ.

‘ತಂಡವನ್ನು ಮುನ್ನಡೆಸಲು ನನ್ನನ್ನು ನೇಮಕ ಮಾಡಿರುವುದು ಸಂತಸ ತಂದಿದೆ. ಇದು ದೊಡ್ಡ ಜವಾಬ್ದಾರಿ. ನಮ್ಮ ತಂಡ ಬಲಿಷ್ಠವಾಗಿದ್ದು, ಅನುಭವಿ ಮತ್ತು ಯುವ ಆಟಗಾರ್ತಿಯರ ಮಿಶ್ರಣವಾಗಿದೆ’ ಎಂದು ಸಲಿಮಾ ಹೇಳಿರುವುದಾಗಿ ಹಾಕಿ ಇಂಡಿಯಾ ಪ್ರಕಟಣೆ ತಿಳಿಸಿದೆ.

ನವನೀತ್ ಕೌರ್ ಅವರು ತಂಡದ ಉಪನಾಯಕಿಯಾಗಿದ್ದಾರೆ.

ಗೋಲ್‌ ಕೀಪರ್‌ ಸವಿತಾ ಪೂನಿಯಾ ಅವರು ಈವರೆಗೆ ತಂಡದ ನಾಯಕಿಯಾಗಿದ್ದರು. ತವರಿನಲ್ಲಿ ನಡೆದ ಒಲಿಂಪಿಕ್‌ ಅರ್ಹತಾ ಟೂರ್ನಿ ಹಾಗೂ ನಂತರ ಪ್ರೊ ಲೀಗ್‌ನಲ್ಲಿ ಸವಿತಾ ನೇತೃತ್ವದ ಭಾರತ ತಂಡ ಸತತ ವೈಫಲ್ಯ ಕಂಡಿತ್ತು.

ರಕ್ಷಣಾ ಆಟಗಾರ್ತಿ ಗುರ್ಜಿತ್ ಕೌರ್‌, ಮಿಡ್‌ಪೀಲ್ಡರ್‌ಗಳಾದ ಸೋನಿಕಾ, ನಿಶಾ ಮತ್ತು ಫಾರ್ವರ್ಡ್‌ ಬ್ಯೂಟಿ ಡುಂಗ್‌ಡುಂಗ್‌ ಅವರನ್ನು ಕೈಬಿಡಲಾಗಿದೆ. ಮಹಿಮಾ ಚೌಧರಿ, ಮನಿಷಾ ಚೌಹಾನ್, ಪ್ರೀತಿ ದುಬೆ ಮತ್ತು ದೀಪಿಕಾ ಸೊರೆಂಗ್ ಹೊಸದಾಗಿ ಅವಕಾಶ ಪಡೆದಿದ್ದಾರೆ.

ಬೆಲ್ಜಿಯಂನಲ್ಲಿ ಪ್ರೊ ಲೀಗ್ ಪಂದ್ಯಗಳು ಮೇ 22ರಿಂದ 26ರವರೆಗೆ ನಡೆಯಲಿವೆ. ಇಂಗ್ಲೆಂಡ್‌ ಲೆಗ್‌ನ ಪಂದ್ಯಗಳು ಜೂನ್‌ 1 ರಿಂದ 9ರವರೆಗಿನ ಅವಧಿಯಲ್ಲಿ ನಡೆಯಲಿವೆ. ಮೊದಲ ಲೆಗ್‌ನಲ್ಲಿ ಭಾರತವು ಆರ್ಜೆಂಟಿನಾ, ಬೆಲ್ಜಿಯಂ ತಂಡಗಳ ವಿರುದ್ಧ ತಲಾ ಎರಡು ಬಾರಿ ಆಡಲಿದೆ. ಇಂಗ್ಲೆಂಡ್‌ ಲೆಗ್‌ನಲ್ಲಿ ಭಾರತವು ಗ್ರೇಟ್‌ ಬ್ರಿಟನ್ ಮತ್ತು ಜರ್ಮನಿ ವಿರುದ್ಧ ಆಡಲಿದೆ.

ಭಾರತವು ಸದ್ಯ ಪ್ರೊ ಲೀಗ್‌ನಲ್ಲಿ ಎಂಟು ಪಂದ್ಯಗಳಿಂದ ಎಂಟು ಪಾಯಿಂಟ್ಸ್ ಕಲೆಹಾಕಿ ಆರನೇ ಸ್ಥಾನದಲ್ಲಿದೆ.

ತಂಡ ಹೀಗಿದೆ:

ಗೋಲ್‌ಕೀಪರ್ಸ್‌: ಸವಿತಾ ಪೂನಿಯಾ, ಬಿಚುದೇವಿ ಕರಿಬಮ್; ಡಿಫೆಂಡರ್ಸ್‌: ನಿಕ್ಕಿ ಪ್ರಧಾನ್, ಉದಿತಾ, ಇಶಿಕಾ ಚೌಧರಿ, ಮೋನಿಕಾ, ಜ್ಯೋತಿ ಚೆಟ್ರಿ, ಮಹಿಮಾ ಚೌಧರಿ.

ಮಿಡ್‌ಫೀಲ್ಡರ್ಸ್‌: ಸಲಿಮಾ ಟೇಟೆ (ಕ್ಯಾಪ್ಟನ್), ವೈಷ್ಣವಿ ವಿಠ್ಠಲ್ ಫಾಲ್ಕೆ, ನವನೀತ್ ಕೌರ್‌ (ಉಪನಾಯಕಿ), ನೇಹಾ, ಜ್ಯೋತಿ, ಬಲಜೀತ್ ಕೌರ್‌, ಮನಿಷಾ ಚೌಹಾನ್‌, ಲಾಲ್‌ರೆಮ್ರಿಸಿಯಾನಿ.  ಫಾರ್ವರ್ಡ್ಸ್‌: ಮುಮ್ತಾಜ್‌ ಖಾನ್‌, ಸಂಗಿತಾ ಕುಮಾರಿ, ದೀಪಿಕಾ, ಶರ್ಮಿಳಾ ದೇವಿ, ಪ್ರೀತಿ ದುಬೆ, ವಂದನಾ ಕಟಾರಿಯಾ, ಸುನೆಲಿಟಾ ಟೊಪ್ಪೊ, ದೀಪಿಕಾ ಸೊರೆಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT