ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊಡಗಿನ ಕಿತ್ತಳೆ ಗತವೈಭವಕ್ಕೆ ಮರಳಲಿ’

ಕಿತ್ತಳೆ ಸಹಕಾರ ಸಂಘ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ
Published 14 ಮಾರ್ಚ್ 2024, 5:55 IST
Last Updated 14 ಮಾರ್ಚ್ 2024, 5:55 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಕೊಡಗು ಕಿತ್ತಳೆ, ಕಿತ್ತಳೆ ಎಂದರೆ ಕೊಡಗು ಎಂಬ ಹೆಸರು ಒಂದು ಕಾಲದಲ್ಲಿ ರಾರಾಜಿಸಿತ್ತು. ಬದಲಾದ ಕಾಲಘಟ್ಟದಲ್ಲಿ ಇದೆಲ್ಲವೂ ತೆರೆ ಮರೆಗೆ ಸರಿಯಿತು. ಇದನ್ನು ಮತ್ತೆ ಗತವೈಭವಕ್ಕೆ ಮರಳಿಸಬೇಕು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಪಾಲಿಬೆಟ್ಟದಲ್ಲಿರುವ ಗೋಣಿಕೊಪ್ಪಲಿನ ಕೊಡಗು ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ನಿವೇಶನದಲ್ಲಿ ಸಮುದಾಯ ಭವನ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬದಲಾದ ಹವಾಮಾನದಿಂದಾಗಿ ಕಿತ್ತಳೆಯೂ ಕೂಡ ಮಾರ್ಪಾಡು ಹೊಂದಿತ್ತು. ಕಿತ್ತಳೆ ಇದ್ದರೂ ಹಿಂದಿನ ತನ್ನ ಸ್ವಾದಿಷ್ಟತೆಯನ್ನು ಹೊಂದಿಲ್ಲ. ಇದಕ್ಕೆ ಹವಾಮಾನದ ವೈಪರೀತ್ಯವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಕಿತ್ತಳೆ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ‘ಖಾಲಿ ನಿವೇಶನದಲ್ಲಿ ಕಟ್ಟಡ ನಿರ್ಮಾಣಗೊಂಡರೆ ಸಂಘವನ್ನು ಆರ್ಥಿಕವಾಗಿ ಬಲಪಡಿಸಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಎಂ.ಕೆ.ಅರವಿಂದ್, ನಿರ್ದೇಶಕರಾದ ಕೆ.ಯು. ಪೂಣಚ್ಚ, ಸುನಿಲ್ ಮಾದಪ್ಪ, ಎಸ್.ಎಂ ವಿಶ್ವನಾಥ್, ಎಸ್.ಎಸ್ ಸುರೇಶ್, ಚಂದ್ರಿಮಾಡ ಸಿ.ಕಾಳಯ್ಯ, ಬಾನಂಡ. ಪೃಥ್ಯು, ಸುಳ್ಳಿಮಾಡ ಟಿ.ಕಾವೇರಪ್ಪ, ಕೆ.ಬಿ.ಸುಮನ್, ತಮ್ಮು ಪೂವಯ್ಯ, ಸುಮಿ ಸುಬ್ಬಯ್ಯ, ಶೋಭ ಕುಟ್ಟಪ್ಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ವಿ.ಹೇಮಂತ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT