ಲಕ್ಷ್ಮೇಶ್ವರ: ‘ಆಧುನಿಕ ತಂತ್ರಜ್ಞಾನ ಬ್ಯಾಂಕಿನ ವ್ಯವಹಾರವನ್ನು ಸುಲಭಗೊಳಿಸಿದೆ. ಬ್ಯಾಂಕುಗಳ ಸಹಾಯ ಸಹಕಾರ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಕೆವಿಜಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಬಿ.ಶೇಖರ ಶೆಟ್ಟಿ ಹೇಳಿದರು.

ಇಲ್ಲಿಗೆ ಸಮೀಪದ ಯತ್ತಿನಹಳ್ಳಿ ಗ್ರಾಮದ ಸಿದ್ಧಾರೂಢ ಮಠದಲ್ಲಿ ಯಳವತ್ತಿ ಕೆವಿಜಿ ಬ್ಯಾಂಕಿನ ಶಾಖೆಯ ಸಹಯೋಗದಲ್ಲಿ ಗುರುವಾರ ಜರುಗಿದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ತಾಂತ್ರಿಕ ಸೌಲಭ್ಯ ಬಳಸಿಕೊಂಡು ಗ್ರಾಹಕರು ಮನೆಯಲ್ಲಿ ಕುಳಿತುಕೊಂಡೇ ನಗದು ವರ್ಗಾವಣೆ ಮಾಡಿ ಸಮಯ ಉಳಿತಾಯ ಮಾಡಲು ಸಾಧ್ಯ’ ಎಂದರು.

ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕ ರಾಮನ್ ಜಗದೀಶನ್ ಮಾತನಾಡಿ ‘ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಬ್ಯಾಂಕುಗಳ ಪಾತ್ರ ದೊಡ್ಡದು ಎಂದರು. ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಜಗದೀಶರಾವ್ ಮಾತನಾಡಿದರು. ಆರ್.ಬಿ. ಪಾಟೀಲ, ಸಿ.ಬಿ. ಪಾಟೀಲ, ಸಿ.ಎಸ್. ಪಾಟೀಲ, ಬಿ.ಎಸ್. ರಾಯನಗೌಡ್ರ, ಎಸ್.ಸಿ. ಹರ್ತಿ, ಡಿ.ಎಚ್. ಕರಿಗೌಡ್ರ, ಸಿದ್ದನಗೌಡ ಸಂಗನಗೌಡ್ರ, ಎನ್.ಎಫ್. ಪಾಟೀಲ, ಆರ್.ಬಿ. ಕುಂದಗೋಳ, ಎಂ.ನಟರಾಜನ್, ಶ್ರೀಕಾಂತರೆಡ್ಡಿ, ಶಿವ ಶಂಕರ, ಕುಮಾರ ಮಠಪತಿ, ಕಲ್ಮೇಶ ಮಠಪತಿ, ರವಿ ದಿಡ್ಡಿಮನಿ ಇದ್ದರು. ಯಳವತ್ತಿ ಕೆವಿಜಿ ಬ್ಯಾಂಕಿನ ವ್ಯವಸ್ಥಾಪಕ ಕೆ.ಎಸ್. ಕೊಡ್ಲಿವಾಡ ಸ್ವಾಗತಿಸಿದರು. ಎಲ್.ಬಿ. ಪಾಟೀಲ ನಿರೂಪಿಸಿದರು. ಎನ್.ನಾಗೇಂದ್ರಬಾಬು ವಂದಿಸಿದರು.

ಹಳ್ಳಿ ನಿವಾಸಿಗಳು ಬ್ಯಾಂಕಿನ ವ್ಯವಹಾರಗಳಿಗೆ ಸ್ಪಂದಿಸಿ ತಮ್ಮ ಕಾರ್ಯ ಚಟುವಟಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ
ರಾಮನ್ ಜಗದೀಶನ್ ಜಿಲ್ಲಾ ವ್ಯವಸ್ಥಾಪಕ, ನಬಾರ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.