ಸೋಲು, ಗೆಲುವಿನ ಲೆಕ್ಕಾಚಾರ ಆರಂಭ, ಕೂಡಿ ಕಳೆಯುವ ಕೆಲಸದಲ್ಲಿ ಪಕ್ಷದ ಕಾರ್ಯಕರ್ತರು

ಬುಧವಾರ, ಮೇ 22, 2019
29 °C
ಬೂತ್‌ಮಟ್ಟದಲ್ಲಿ ಬಿದ್ದ ಮತಗಳ ಲೆಕ್ಕಾಚಾರ

ಸೋಲು, ಗೆಲುವಿನ ಲೆಕ್ಕಾಚಾರ ಆರಂಭ, ಕೂಡಿ ಕಳೆಯುವ ಕೆಲಸದಲ್ಲಿ ಪಕ್ಷದ ಕಾರ್ಯಕರ್ತರು

Published:
Updated:
Prajavani

ಮಡಿಕೇರಿ: ಬಹಳ ಕುತೂಹಲಕ್ಕೆ ಕಾರಣವಾಗಿದ್ದ ಲೋಕಸಭಾ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ಫಲಿತಾಂಶಕ್ಕೆ ಮೇ 23ರ ತನಕ ಕಾಯವ ಸ್ಥಿತಿಯಿದೆ. ಫಲಿತಾಂಶ ದಿನ ದೂರವಿರುವ ಕಾರಣಕ್ಕೆ ಕೊಡಗಿನಲ್ಲಿ ಬೂತ್‌ಮಟ್ಟದಲ್ಲಿ ಬಿದ್ದ ಮತಗಳ ಕೂಡಿ ಕಳೆಯುವ ಲೆಕ್ಕಾಚಾರ ಜೋರಾಗಿದೆ.

ಕಾಂಗ್ರೆಸ್‌, ಜೆಡಿಎಸ್‌ನ ಮೈತ್ರಿಯಾಗಿದ್ದ ಕಾರಣದಿಂದ ಜಿದ್ದಾಜಿದ್ದಿನ ಸ್ಪರ್ಧೆಯಿತ್ತು. ಬಿಜೆಪಿ ಅಭ್ಯರ್ಥಿಯೂ ಮೈತ್ರಿ ಭಯದಿಂದ ಪ್ರಚಾರವನ್ನು ಬಿರುಸಾಗಿ ನಡೆಸಿದ್ದರು. ಎರಡು ಕಡೆಯಿಂದಲೂ ಪ್ರಚಾರದ ಅಬ್ಬರದಿಂದ ಮತದಾನ ಪ್ರಮಾಣವೂ ಈ ಬಾರಿ ಹೆಚ್ಚಾಗಿದೆ. 

ಕೊಡಗು ಜಿಲ್ಲೆಯು ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಎರಡು ಜಿಲ್ಲೆಯ ಮತಗಳನ್ನೂ ಒಟ್ಟುಗೂಡಿಸಿದರೆ ಶೇ 69 ಮತದಾನವಾದಂತೆ ಆಗಿದೆ.

ಈ ಬಾರಿ ಕೊಡಗಿನಲ್ಲೇ ಶೇ 74.67 ಮತದಾನವಾಗಿದೆ. 2014ರ ಚುನಾವಣೆಯಲ್ಲಿ ಶೇ 71.88 ಮತದಾನ ನಡೆದಿತ್ತು. ಶೇ 2.79 ಹೆಚ್ಚು ಮತದಾನವಾಗಿದೆ. 

ಎಲ್ಲಿ ಎಷ್ಟು?: ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,21,157 ಮತದಾರರು ಇದ್ದಾರೆ. ಗುರುವಾರ ನಡೆದ ಚುನಾವಣೆಯಲ್ಲಿ 1,69,725 ಮಂದಿ ಹಕ್ಕು ಚಲಾವಣೆ ಮಾಡಿದ್ದು ಶೇ 76.74 ಮತದಾನವಾಗಿದೆ.

ಅದೇ ವಿರಾಜಪೇಟೆ ಕ್ಷೇತ್ರದಲ್ಲಿ 2,19,573 ಮತದಾರರು ಇದ್ದಾರೆ. ಅದರಲ್ಲಿ 1,59,387 ಮತದಾನ ಮಾಡಿದ್ದು, ಇಲ್ಲಿ ಶೇ 72.58 ಮತದಾನವಾಗಿದೆ. ಒಟ್ಟು 4,40,730 ಮತದಾರರಲ್ಲಿ 3,29,112 ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ.

2014ರ ಕಥೆ ಏನು– ಎತ್ತ?: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,10,819 ಮತದಾರರ ಪೈಕಿ 1,55,682 ಮಂದಿ ಮತದಾನ ಮಾಡಿದ್ದರು. ಶೇ 73.84 ಮತದಾನ ನಡೆದಿತ್ತು.

ಅದೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,08,514 ಮತದಾರರಲ್ಲಿ 1,45,752 ಹಕ್ಕು ಚಲಾವಣೆ ಮಾಡಿದ್ದರು. ಶೇ 69.90 ಮತದಾನವಾಗಿತ್ತು. ಒಟ್ಟು 4,19,333 ಮತದಾರರಲ್ಲಿ 3,01,434 ಮಂದಿ ಅಂದಿನ ಚುನಾವಣೆಯಲ್ಲಿ ಮತದಾನ ಮಾಡಿದ್ದರು.

2014ಕ್ಕೆ ಹೋಲಿಸಿದರೆ 2019ರ ಮತದಾರರ ಪಟ್ಟಿಯಲ್ಲಿ 21,397 ಮತದಾರರು ಹೆಚ್ಚಾಗಿದ್ದರು. ಕಳೆದ ಬಾರಿಗಿಂತ ಈ ಬಾರಿ 27,678 ಹೆಚ್ಚು ಮತ ಚಲಾವಣೆಯಾಗಿದೆ. 2014ರಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿಗೆ 32 ಸಾವಿರದಷ್ಟು ಲೀಡ್‌ ಸಿಕ್ಕಿತ್ತು. ಮೈತ್ರಿಯಾದ ಬಳಿಕ ಈ ಬಾರಿ ಲೀಡ್‌ ಅಂತರ ತಗ್ಗುವುದೇ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಗಿರುವುದರಿಂದ ಲೀಡ್‌ ಅಂತರ ಹೆಚ್ಚುವುದೇ ಎಂಬ ಕಾತರವಿದೆ. ಅದಕ್ಕೆ ಮೇ 23ರಂದು ಉತ್ತರ ಸಿಗಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !