ಗುರುವಾರ , ಸೆಪ್ಟೆಂಬರ್ 24, 2020
27 °C

ಮಳೆ ತಗ್ಗಿದರೂ ಕೊಡಗು ಜಿಲ್ಲೆಯ 52 ಪ್ರದೇಶಗಳಲ್ಲಿ ಪ್ರವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದ್ದರೂ ಪ್ರವಾಹ ಮಾತ್ರ ಇಳಿದಿಲ್ಲ. ಮುಳುಗಡೆಯ ಪರಿಸ್ಥಿತಿ ಹಾಗೆಯೇ ಇದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ಆರು ದಿನಗಳಿಂದ ಸುರಿದ ಧಾರಾಕಾರ ಮಳೆಗೆ 52 ಕಡೆ ಪ್ರವಾಹ ಉಂಟಾಗಿದೆ. 14 ಕಡೆ ಭೂಕುಸಿತ ಸಂಭವಿಸಿದೆ. 561 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. 9 ಕಡೆ ಪರಿಹಾರ ಕೇಂದ್ರ ತೆರೆಯಲಾಗಿದೆ. 566 ಮಂದಿ ಪರಿಹಾರ ಕೇಂದ್ರದಲ್ಲಿದ್ದಾರೆ. 8 ಕಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಪ್ರವಾಹ ಪ್ರದೇಶಗಳು: ಮಡಿಕೇರಿ ತಾಲ್ಲೂಕು ಭಾಗಮಂಡಲ, ಅಯ್ಯಂಗೇರಿ, ತಾವೂರು, ತಣ್ಣಿಮಾನಿ, ಸಣ್ಣ ಪುಲಿಕೋಟು, ಬೇತು, ಎಮ್ಮೆಮಾಡು, ಕೊಳಕೇರಿ, ನಾಪೋಕ್ಲು, ಬೆಟ್ಟಗೇರಿ, ದೊಡ್ಡ ಪುಲಿಕೋಟು, ಐಕೊಳ, ಹೊದ್ದೂರು, ಹೊದವಾಡ, ಕುಂಬಳದಾಳು, ಕಿಗ್ಗಾಲು, ಎಸ್.ಕಟ್ಟೆಮಾಡು, ಪರಂಬು ಪೈಸಾರಿ ಸೇರಿದಂತೆ 18.

ವಿರಾಜಪೇಟೆ ತಾಲ್ಲೂಕುವಿನ ಕರಡಿಗೋಡು, ಗುಹ್ಯ, ಕೊಂಡಂಗೇರಿ, ಹಚ್ಚಿನಾಡು, ನಾಲ್ಕೇರಿ, ಹೈಸೊಡ್ಲೂರು, ಬಲ್ಯಮಂಡೂರು, ಬಿರುನಾಣಿ, ತೆರಾಲು, ಅರುವತ್ತೊಕ್ಲು, ನಿಡುಗುಂಬ, ಹಾತೂರು, ಮೈತಾಡಿ, ಬಾಳೆಲೆ ಸೇರಿ 14.

ಸೋಮವಾರಪೇಟೆ ತಾಲ್ಲೂಕು ಮುಳ್ಳುಸೋಗೆ ಗ್ರಾಮದ ಕುವೆಂಪು ಬಡಾವಣೆ, ತಮ್ಮಣ್ಣ ಶೆಟ್ಟಿ ಬಡಾವಣೆ, ಬಸವನಹಳ್ಳಿ, ಮಾದಾಪಟ್ಟಣ, ಬೈಚನಹಳ್ಳಿ, ಕೂಡ್ಲೂರು (ನಿಸರ್ಗ ಬಡಾವಣೆ), ಬೆಟ್ಟದಕಾಡು, ಬರಡಿ, ಕುಂಬಾರಗುಂಡಿ ಕುಶಾಲನಗರ ಪಟ್ಟಣ ಪಂಚಾಯಿತಿ ಕುಶಾಲನಗರ ಸಾಯಿ ಬಡಾವಣೆ, ಬಸಪ್ಪ ಬಡಾವಣೆ, ತ್ಯಾಗರಾಜ ರಸ್ತೆ, ವಿವೇಕಾನಂದ ಬಡಾವಣೆ, ರಸೂಲ್ ಬಡಾವಣೆ, ಇಂದಿರಾ ಬಡಾವಣೆ, ದಂಡಿನಪೇಟೆ, ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ, ಬಿದ್ದಪ್ಪ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ತಾವರೆಕೆರೆ ರಸ್ತೆ ಸೇರಿ 12 ಸ್ಥಳಗಳನ್ನು ಒಳಗೊಂಡು ಒಟ್ಟು ಪ್ರವಾಹ ಪೀಡಿತ ಪ್ರದೇಶಗಳು 52. 

ಭೂಕುಸಿತ ಪ್ರದೇಶಗಳು
ಮಡಿಕೇರಿ:
ತಾಲ್ಲೂಕಿನ ಬೊಟ್ಲಪ್ಪ ಪೈಸಾರಿ (ಕಡಗದಾಳು), ಜೋಡುಪಾಲ, ನೀರುಕೊಲ್ಲಿ, ಕೊಟ್ಟಮುಡಿ, ಹೊದವಾಡ, ಅಬ್ಯಾಲ ನಗರಸಭೆ ಮಡಿಕೇರಿಯಲ್ಲಿ ದೇಚೂರು, ಸೋಮವಾರಪೇಟೆ ತಾಲ್ಲೂಕು ಅತ್ತೂರುನಲ್ಲೂರು (ಕೊಟ್ಟಗೇರಿ ಪೈಸಾರಿ), ತಾಕೇರಿ, ಸೂರ್ಲಬ್ಬಿ, ಮಾದಾಪುರ, ಶಾಂತಳ್ಳಿ ಹಾಗೂ ವಿರಾಜಪೇಟೆ ತಾಲ್ಲೂಕು ಮಗ್ಗುಲದಲ್ಲಿ ಭೂಕುಸಿತ ಉಂಟಾಗಿದೆ.

ವಾಹನ ಸಂಚಾರ ಸ್ಥಗಿತಗೊಂಡಿರುವ ರಸ್ತೆಗಳು: ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಶಾಲನಗರದಿಂದ-ಗುಡ್ಡೆ ಹೊಸೂರು ತನಕ, ಕತ್ತಲೆಕಾಡು-ಮರಗೋಡು ರಸ್ತೆ, ಮಡಿಕೇರಿ-ವಿರಾಜಪೇಟೆ ರಾಜ್ಯ ಹೆದ್ದಾರಿ, ಮುತ್ತಾರುಮುಡಿ, ಕಗ್ಗೊಡ್ಲು, ಭಾಗಮಂಡಲ- ಅಯ್ಯಂಗೇರಿ ರಸ್ತೆ, ಭಾಗಮಂಡಲ-ತಲಕಾವೇರಿ ರಸ್ತೆ, ಚೆಟ್ಟಿಮಾನಿ ಕಿರಿಯ ಸೇತುವೆ ರಸ್ತೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು