ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಗಮನ ಸೆಳೆದ ಖಾದ್ಯೋತ್ಸವ

ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್ ಹಾಸ್ಪಿಟಾಲಿಟಿ ಸೈನ್ಸ್‌ನಿಂದ ಆಯೋಜನೆ
Last Updated 27 ನವೆಂಬರ್ 2019, 15:56 IST
ಅಕ್ಷರ ಗಾತ್ರ

ಮಡಿಕೇರಿ: ದೇಶೀಯ ಹಾಗೂ ವಿದೇಶಿಯ ವಿಶಿಷ್ಟ, ಸ್ವಾದಿಷ್ಟ ಖಾದ್ಯಗಳು ಹಾಗೂ ಕೊಡಗಿನ ಸಾಂಪ್ರದಾಯಿಕ ತಿನಿಸುಗಳ ಪ್ರದರ್ಶನವು ಖಾದ್ಯ ಪ್ರಿಯರ ಬಾಯಲ್ಲಿ ನೀರು ತರಿಸುವಂತೆ ಮಾಡಿತ್ತು.

ಫ್ಯಾನ್ಸ್, ಅಮೆರಿಕ, ರಷ್ಯಾ... ಹೀಗೆ ವಿವಿಧ ದೇಶಗಳ ವಿಶಿಷ್ಟ ಖಾದ್ಯಗಳು, ಒಂದಕ್ಕಿಂತ ಒಂದು ವಿನೂತನ ಆಹಾರ ಪದಾರ್ಥಗಳು ನೋಡುಗರ ಗಮನ ಸೆಳೆದವು.

ನಗರದ ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್ ಹಾಸ್ಪಿಟಾಲಿಟಿ ಸೈನ್ಸ್ ವತಿಯಿಂದ ಬುಧವಾರ ಆಯೋಜಿಸಿದ್ದ ‘ಆಹಾರ ಮೇಳ’ವು ಎಲ್ಲರ ಮೆಚ್ಚುಗೆಗೆ ಗಳಿಸಿದವು.

ವಿದ್ಯಾರ್ಥಿಗಳು ಕಲಿತ ಖಾದ್ಯ ತಯಾರಿಕೆ ವಿದ್ಯೆಯನ್ನು ಮೇಳದಲ್ಲಿ ಪ್ರದರ್ಶಿಸಿದರು. ಜಿಲ್ಲೆಯ ವಿವಿಧ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳ ಪ್ರಾಂಶುಪಾಲರು ಸ್ವಾದ ಸವಿದರು.

ಆಹಾರ ಮೇಳ -2019ರ ಅಂಗವಾಗಿ ಚಿಕನ್, ಮಟನ್, ಮೀನಿನ ವಿವಿಧ ವಿಶೇಷ ತಯಾರಿಕೆಗಳು, ಪಾಸ್ಟಾ, ಕೇಕ್ ಸೇರಿದಂತೆ ಹಲವಾರು ವೈವಿಧ್ಯಮ ತಿನಿಸುಗಳನ್ನು ಯಾವುದೇ ವೃತ್ತಿಪರ ಬಾಣಸಿಗರಿಗೆ ಕಮ್ಮಿಯಿಲ್ಲದಂತೆ ವಿದ್ಯಾರ್ಥಿಗಳು ತಯಾರಿಸಿದ್ದಾರೆ ಖಾದ್ಯ ಪ್ರಿಯರು ಹೇಳಿದರು.

ಆಹಾರ ಮೇಳದ ಬಗ್ಗೆ ಮಾಹಿತಿ ನೀಡಿದ ಹೆಸರಾಂತ ಬಾಣಸಿಗ ಆದಿತ್ಯ, ವಿದ್ಯಾರ್ಥಿಗಳು 3 ವರ್ಷಗಳ ಅವಧಿಯಲ್ಲಿ ಕಲಿತ ಖಾದ್ಯ ತಯಾರಿಕಾ ವಿಧಾನಗಳನ್ನು ಈ ಮೂಲಕ ಪ್ರದರ್ಶಿಸಿದ್ದು ಮುಂದಿನ ದಿನಗಳಲ್ಲಿ ಉದ್ಯೋಗದೊಂದಿಗೆ ವೃತ್ತಿನಿರತರಾಗಲು ಎಲ್ಲ ರೀತಿಯಲ್ಲಿ ಶಕ್ತರಿದ್ದೇವೆ ಎಂದು ಸಾಬೀತು ಪಡಿಸಿದ್ದಾರೆ.

ವಿವಿಧ ದೇಶಗಳಿಗೆ ಸೇರಿದ ವಿಶಿಷ್ಟ ಖಾದ್ಯ ತಯಾರಿಕೆ ಮೂಲಕ ಈ ವಿದ್ಯಾರ್ಥಿಗಳು ರೆಸಾರ್ಟ್‌ನಲ್ಲಿಯೂ ಉದ್ಯೋಗ ಪಡೆಯುವಲ್ಲಿ ಸಫಲರಾಗಲಿದ್ದಾರೆ ಎಂದೂ ಭರವಸೆ ವ್ಯಕ್ತಪಡಿಸಿದರು.

ಕಾಲೇಜಿನ ಕಾರ್ಯದರ್ಶಿ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ಪ್ರಸ್ತುತ 27 ವಿದ್ಯಾರ್ಥಿಗಳು ಕಾಲೇಜಿನಲ್ಲಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 6 ವಿದ್ಯಾರ್ಥಿಗಳು ತರಬೇತಿ ಅವಧಿ ಮುಗಿಸಿ, ಬೇರೆ ಬೇರೆ ರೆಸಾರ್ಟ್‌ಗಳಲ್ಲಿ ಉದ್ಯೋಗ ಪಡೆಯಲಿದ್ದಾರೆ ಎಂದು ವಿವರಿಸಿದರು.

ಪ್ರವಾಸೋದ್ಯಮ ಜಿಲ್ಲೆಯಾಗಿರುವ ಕೊಡಗಿನಲ್ಲಿ ಹೋಟೆಲ್‌, ರೆಸಾರ್ಟ್‌ಗಳಲ್ಲಿ ಬಾಣಸಿಗರಿಗೆ ಸಾಕಷ್ಟು ಬೇಡಿಕೆಯಿದ್ದು ಈ ಬೇಡಿಕೆಯನ್ನು ಪೂರೈಸುವಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತರಬೇತಿ ಹೊಂದುತ್ತಿದ್ದಾರೆ ಎಂದು ದಿನೇಶ್ ಕಾರ್ಯಪ್ಪ ಹೇಳಿದರು.

ಹೌಸ್ ಕೀಪಿಂಗ್, ಪ್ರೊಡಕ್ಷನ್, ಫ್ರಂಟ್ ಆಫೀಸ್, ಫುಡ್ ಅಂಡ್ ಬೆವರೇಜ್, ಹೋಟೆಲ್‌ ಲಾ, ಮಾರ್ಕೆಟಿಂಗ್‌, ಫೈನಾನ್ಸ್, ಹ್ಯೂಮನ್ ರಿಸೋರ್ಸ್‌ ವಿಭಾಗಗಳಲ್ಲಿ 3 ವರ್ಷದ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಆಡಳಿತ ಮಂಡಳಿ ಮ್ಯಾನೇಜಿಂಗ್ ಟ್ರಸ್ಟಿ ನಿರ್ದೇಶಕಿ ಡಾ.ನಿರ್ಮಾಲಾ, ಸೋಮಯ್ಯ, ಅಧ್ಯಕ್ಷ ಮಂಡೆಪಂಡ ರತನ್ ತಮ್ಮಯ್ಯ, ಉಪಾಧ್ಯಕ್ಷ ಕೇಕಡ ಗಣಪತಿ, ಖಚಾಂಚಿ ಅಪ್ಪಾರಂಡ ವೇಣು, ಟ್ರಸ್ಟಿಗಳಾದ ಕೇಕಡ ಗಣಪತಿ, ತಡಿಯಂಗಡ ತಿಮ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT