ಭಾನುವಾರ, ಡಿಸೆಂಬರ್ 8, 2019
22 °C

ಸಂತ್ರಸ್ತರ ಮರೆತ ಸರ್ಕಾರ: ಎಚ್‌ಡಿಕೆ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ (ಕೊಡಗು): ‘ರಾಜ್ಯದ ಹಲವು ಜಿಲ್ಲೆಗಳ ಪ್ರವಾಹ ಸಂತ್ರಸ್ತರನ್ನು ರಾಜ್ಯ ಸರ್ಕಾರ ಮರೆತಿದ್ದು ಬಿಜೆಪಿ ಯಾವ ಪುರುಷಾರ್ಥಕ್ಕೆ ಆಡಳಿತ ನಡೆಸುತ್ತಿದೆಯೋ ಗೊತ್ತಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬುಧವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂತ್ರಸ್ತರ ಕುಟುಂಬಗಳಿಗೆ ಕೇವಲ ₹ 5, ₹ 10 ಸಾವಿರ ಮಾತ್ರ ಪರಿಹಾರ ಸಿಕ್ಕಿದೆ’ ಎಂದು ದೂರಿದರು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ‘ನಿಮಗೆ ಚುನಾವಣೆ ಉಸ್ತುವಾರಿ ನೀಡಲಾಗಿದೆ. ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು 12 ದಿನಗಳ ಕಾಲ ಮರೆತುಬಿಡಿ’ ಎಂದು ಸಚಿವರಿಗೆ ತಾಕೀತು ಮಾಡಿದ್ದಾರೆ. ಸಂತ್ರಸ್ತರ ನೋವು ಆಲಿಸಿದವರನ್ನು ಮುಖ್ಯಮಂತ್ರಿ ಎನ್ನಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಉಪ ಚುನಾವಣೆಯನ್ನು ಜೆಡಿಎಸ್‌ ಗಂಭೀರವಾಗಿ ಪರಿಗಣಿಸಿದೆ. ಫಲಿತಾಂಶದ ನಂತರ ಸರ್ಕಾರದ ಅಳಿವು– ಉಳಿವು ತಿಳಿಯಲಿದೆ. ಬಿಜೆಪಿ, ಕಾಂಗ್ರೆಸ್‌ಗಿಂತ ಜೆಡಿಎಸ್‌ ಹೆಚ್ಚಿನ ಸ್ಥಾನ ಗೆಲ್ಲಲಿದ್ದು ಆಗ ನಮ್ಮ ಪಕ್ಷದ ಬಳಿಗೆ ಎಲ್ಲರೂ ಬರಬೇಕು’ ಎಂದೂ ಅವರು ನುಡಿದರು.

ಪ್ರತಿಕ್ರಿಯಿಸಿ (+)