ಸೋಮವಾರಪೇಟೆ: ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್, ಹಾಕಿ ಕೊಡಗು ಹಾಗೂ ಹಾಕಿ ಕರ್ನಾಟಕ ಸಹಯೋಗದೊಂದಿಗೆ ಬಿ.ಈ. ರಂಗಸ್ವಾಮಿ ಚೂರಿಗಿಡ್ನ ಅವರ ಜ್ಞಾಪಕಾರ್ಥ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಯುತ್ತಿವ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟದಲ್ಲಿ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಡಿಕೇರಿಯ ಚಾರ್ಮರ್ಸ್ ಹಾಕಿ ತಂಡ ಮತ್ತು ಕೂಡಿಗೆಯ ಸ್ಪೋರ್ಟ್ ಹಾಸ್ಟೆಲ್ ತಂಡ ಹಣಾಹಣಿ ನಡೆಸಿ, ಚಾರ್ಮರ್ಸ್ ತಂಡ ಒಂದು ಗೋಲು ಗಳಿಸಿ ವಿಜೇತವಾಗಿ, ಸೆಮಿಫೈನಲ್ಗೆ ಮೊದಲ ತಂಡವಾಗಿ ಪ್ರವೇಶಿಸಿತು. ದ್ವಿತೀಯ ಪಂದ್ಯಾಟ ಕೋಣನಕಟ್ಟೆ ಮತ್ತು ಕಕ್ಕಬ್ಬೆಯ ಮಲ್ಮ ತಂಡಗಳ ನಡುವೆ ನಡೆಯಿತು. ರೋಚಕ ಪಂದ್ಯದಲ್ಲಿ ಎರಡೂ ತಂಡಗಳು ತಲಾ ನಾಲ್ಕು ಗೋಲುಗಳನ್ನು ಗಳಿಸುವ ಮೂಲಕ ಡ್ರಾ ಸಾಧಿಸಿದವು. ನಂತರ ಪಿನಾಲ್ಟಿ ಶೂಟ್ಔಟ್ನಲ್ಲಿ ಕಕ್ಕಬ್ಬೆಯ ಮಲ್ಮ ತಂಡ 3-1 ಗೋಲುಗಳಿಂದ ಜಯಗಳಿಸಿ ಸೆಮಿಫೈನಲ್ ಪ್ರವೇಶಿಸಿತು.

ಮಧ್ಯಾಹ್ನ ಬೊಟ್ಟಿಯತ್ ನಾಡ್ ಕುಂದ ಮತ್ತು ಬೆರಲ್ ನಾಡು ತಂಡಗಳ ನಡುವೆ ಏಕಪಕ್ಷಿಯವಾಗಿ ನಡೆದ ಪಂದ್ಯಾಟದಲ್ಲಿ ಬೆರಲ್ ನಾಡ್ ತಂಡ 7-2 ಗೋಲು ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು. ಕೊನೆಯ ಪಂದ್ಯದಲ್ಲಿ ಡಾಲ್ಫಿನ್ಸ್ ಸೋರ್ಟ್ಸ್ ಕ್ಲಬ್ ಅಂಜಿಗೆರಿನಾಡ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.

ಕ್ರೀಡಾಕೂಟದಲ್ಲಿ ಬೊಚ್ಚಂಡ ನಾಣಯ್ಯ, ದೀಕ್ಷಿತ್, ಐಯಪ್ಪ, ವಿನೋದ್, ಪೊನ್ನಣ್ಣ ಹಾಗೂ ಸುಪ್ರಿತ್ ಕಾರ್ಯನಿರ್ವಹಿಸಿದರು. ಶನಿವಾರ ಮಧ್ಯಾಹ್ನ 1-30ಕ್ಕೆ ಮೊದಲ ಸೆಮೀಫೈನಲ್ ಪಂದ್ಯ ಪ್ರಾರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.