ಮಡಿಕೇರಿ: ನಗರಕ್ಕೆ 4 ಕಿ.ಮೀ ದೂರದಲ್ಲಿ 1.6 ತೀವ್ರತೆಯ ಲಘು ಭೂಕಂಪ ಸಂಭವಿಸಿದೆ.

ತಾಲ್ಲೂಕಿನ ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಭೂಮಿ ಕಂಪಿಸಿದ ಅನುಭವವಾಗಿದೆ.

2ನೇ ಮೊಣ್ಣಂಗೇರಿ, ಬೆಟ್ಟತ್ತೂರು ಗ್ರಾಮ ಸೇರಿದಂತೆ ಕೆಲವೆಡೆ ಬುಧವಾರ ಬೆಳಿಗ್ಗೆ 10.50 ರ ಸುಮಾರಿನಲ್ಲಿ ಭೂಮಿ ಕಂಪಿಸಿದೆ ಎಂಬ ಸುದ್ದಿ ವಾಟ್ಸ್ ಆ್ಯಪ್ ಗ್ರೂಪ್ ಹರಿದಾಡಿತು.

ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರವು ಮದೆ ಗ್ರಾಮಪಂಚಾಯಿತಿ ಸಮೀಪ ಭೂಮಿಯಿಂದ 5 ಕಿ.ಮೀ ಆಳದಲ್ಲಿ 1.6 ತೀವ್ರತೆಯ ಭೂಕಂಪ ದಾಖಲಾಗಿದೆ. ಇದರ ಕೇಂದ್ರ ಬಿಂದು ಮಡಿಕೇರಿ ನಗರದಿಂದ 4 ಕಿ.ಮೀ, ಹಾರಂಗಿ ಜಲಾಶಯದಿಂದ 23.8 ಕಿ.ಮೀ ದೂರದಲ್ಲಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುರಿತು ಪ್ರಜಾವಾಣಿ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತ ಅನನ್ಯ ವಾಸುದೇವ್ ಅವರನ್ನು ಸಂಪರ್ಕಿಸಿದಾಗ ಅವರು ಇದು ತೀರಾ ಅತ್ಯಲ್ಪ ಪ್ರಮಾಣದ ಲಘು ಕಂಪನವಾಗಿದ್ದು ಯಾವುದೇ ಆತಂಕಕ್ಕೆ ಕಾರಣ ಇಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.