ಸಿದ್ದಾಪುರ: ಮಾಲ್ದಾರೆ ಗ್ರಾಮದಲ್ಲಿ ನೂತನ ಕಚೇರಿಯನ್ನು ಸಮಾಜ ಸೇವಕ ಮುಕ್ಕಾಟಿರ ಮಿಟ್ಟು ನಂಜಪ್ಪ ಹಾಗೂ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಮಾಲತಿ, ‘ಗ್ರಾಮದಲ್ಲಿ ಈ ಹಿಂದೆ ಇದ್ದ ಅಂಚೆ ಕಚೇರಿ ಹಳೆಯ ಕಟ್ಟಡದಲ್ಲಿದ್ದು, ಮಹಡಿಯ ಮೇಲೆ ಇತ್ತು. ಇದರಿಂದಾಗಿ ಮಹಿಳೆಯರು, ಹಿರಿಯ ನಾಗರೀಕರಿಗೆ ಸಮಸ್ಯೆಯಾಗುತ್ತಿತ್ತು. ಇದೀಗ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪಟ್ಟಣದ ಬಸ್ ತಂಗುದಾಣದ ಬಳಿಯಲ್ಲಿ ನೂತನವಾಗಿ ಕಟ್ಟಡ ನಿರ್ಮಿಸಿ, ಕಚೇರಿಯನ್ನು ವರ್ಗಾಯಿಸಲಾಗಿದೆ. ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ಅಲಿ, ಸರಸ್ವತಿ, ಪುಷ್ಪಾ, ಶೋಭಾ, ಇಸ್ಮಾಯಿಲ್ ಹಾಗೂ ಅಂಚೆ ಇಲಾಖೆ ಅಧಿಕಾರಿಗಳಾದ ಮಂಜುನಾಥ್, ಪ್ರಮೀಳಾ, ಸೋಮ, ಗ್ರಾಮದ ಪ್ರಮುಖರಾದ ಮುಕ್ಕಾಟಿರ ಬೋಪಣ್ಣ, ರವಿ, ಸೂದನ ಯತೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪುಷ್ಪಾ, ಕಲಾವಿದ ಬಾವ ಮಾಲ್ದಾರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.