ಭಾನುವಾರ, ಫೆಬ್ರವರಿ 23, 2020
19 °C

ಮಡಿಕೇರಿ: ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಸಿದ್ದಾಪುರ(ಕೊಡಗು): ಮಾಲ್ದಾರೆ ಸಮೀಪದ ಅಸ್ತಾನ ಹಾಡಿಯಲ್ಲಿ ಕಾಡಾನೆ ದಾಳಿಗೆ ಕಾಫಿ ಬೆಳೆಗಾರ ಬಲಿಯಾಗಿದ್ದಾರೆ.

ಅವರೆಗುಂದ‌ ಗ್ರಾಮದ ಕಾಫಿ ಬೆಳೆಗಾರ ಪೆಮ್ಮಯ್ಯ (69) ಮೃತ ದುರ್ದೈವಿ. 

ಪೆಮ್ಮಯ್ಯ ಶುಕ್ರವಾರ ಬೆಳಿಗ್ಗೆ ಮನೆಯಿಂದ ಪಟ್ಟಣಕ್ಕೆ ತೆರಳಿದ್ದು, ಮನೆಗೆ ಹಿಂತಿರುಗಿ ಬಾರದ  ಹಿನ್ನೆಲೆಯಲ್ಲಿ ಮನೆಯವರು ಗ್ರಾಮದಲ್ಲಿ ಹುಡುಕಾಡಿದ್ದಾರೆ. ಆದರೆ ಅವರು ಪತ್ತೆ ಆಗಿರಲಿಲ್ಲ. ಶನಿವಾರ ಮತ್ತೆ ಹುಡುಕಾಟ ನಡೆಸಿದಾಗ ಅವರೆಗುಂದ ಗ್ರಾಮದ ಅಸ್ತಾನ ಹಾಡಿಯ ರಸ್ತೆಯ ಬಳದಿಯಲ್ಲಿ ಮೃತದೇಹ ಪತ್ತೆಯಾಗಿದೆ. 
ಕಾಡಾನೆ ದಾಳಿಯಿಂದಲೇ ಪೆಮ್ಮಯ್ಯ ಅವರು ಮೃತಪಟ್ಟಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಸಿದ್ದಾಪುರ ಪಿ.ಎಸ್.ಐ ಬೋಜಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)