ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಂಟಿಕೊಪ್ಪ; ಶ್ರದ್ಧಾಭಕ್ತಿಯ ನಾಗರ ಪಂಚಮಿ

Published 9 ಆಗಸ್ಟ್ 2024, 13:56 IST
Last Updated 9 ಆಗಸ್ಟ್ 2024, 13:56 IST
ಅಕ್ಷರ ಗಾತ್ರ

ಸುಂಟಿಕೊಪ್ಪ‌: ಸುಂಟಿಕೊಪ್ಪ‌ ಸೇರಿದಂತೆ ಹೋಬಳಿ ವ್ಯಾಪ್ತಿಯ ದೇವಾಲಯಗಳಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.

ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ನಾಗಕಟ್ಟೆಯಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಉಡುಪ ನೇತೃತ್ವದಲ್ಲಿ ಅರ್ಚಕ ಹಾ.ಮಾ.ಗಣೇಶ ಶರ್ಮಾ ಅವರಿಂದ ವಿವಿಧ ಪೂಜಾ ಕೈಂಕರ್ಯಗಳು ನಡೆದವು.

ಬೆಳಿಗ್ಗೆ ನಾಗಕಟ್ಟೆಗೆ ಶುದ್ಧಿಪೂಜೆ ನೆರವೇರಿಸಿದ ನಂತರ ನಾಗದೇವರಿಗೆ ಕ್ಷೀರಾಭಿಷೇಕ, ಎಳನೀರು, ಕುಂಕುಮ, ಅರಿಸಿನ ಅಭಿಷೇಕ, ಹೂವಿನ ಅರ್ಚನೆ ನೆರವೇರಿಸಿದರು. ನಂತರ ನಾಗ ದೇವರನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು.

ದೇವಾಲಯ ಸಮಿತಿ ಉಪಾಧ್ಯಕ್ಷ ಈಶ್ಚರ, ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋಹನ್, ಶಾಂತರಾಮ ಕಾಮತ್, ಆನಂದ ಪೂಜಾರಿ ಸೇರಿದಂತೆ ಭಕ್ತರು ಆಗಮಿಸಿ‌ ದೇವರಿಗೆ ಪೂಜೆ ಸಲ್ಲಿಸಿದರು.

ಸಮೀಪದ ಕೊಡಗರಹಳ್ಳಿಯ ಬೈತೂರಪ್ಪ, ಪೊವ್ವದಿ ಬಸವೇಶ್ವರ ದೇವಾಲಯದ ಆವರಣದಲ್ಲಿರುವ ನಾಗಸ್ಥಾನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.

ದೇವಸ್ಥಾನ ಮುಖ್ಯ ಆರ್ಚಕರಾದ ನರಸಿಂಹಭಟ್, ಸಹ ಅರ್ಚಕ ರಾಮಶರ್ಮ ಅವರ ನೇತೃತ್ವದಲ್ಲಿ ಹಾಲಿನ ಅಭಿಷೇಕ, ಎಳನೀರು, ಅರಸಿನ, ಕುಂಕುಮಾರ್ಚನೆ ನಡೆದವು. ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.

ದೇವಾಲಯ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಪೂಣ್ಣಚ್ಚ, ಕಾರ್ಯದರ್ಶಿ ಬಿ.ಸಿ.ದಿನೇಶ್,ಖಜಾಂಚಿ ಡಾ.ತಮ್ಮಯ್ಯ, ಟ್ರಸ್ಟಿಗಳು, ದೇವಾಲಯ ಪಾರುಪಾತ್ಯದಾರ ಅಕ್ಕಪಂಡ ರಾಜೇಂದ್ರ ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ಸಮೀಪದ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಮಳೂರು ಬೆಳ್ಳಾರಿಕ್ಕಮ್ಮ ದೇವಾಲಯದಲ್ಲಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಲಾಯಿತು. ಕೆದಕಲ್, ಕೊಡಗರಹಳ್ಳಿ, ಹೊಸಕೋಟೆ, ಕಂಬಿಬಾಣೆಗಳಲ್ಲೂ ನಾಗರ ಪಂಚಮಿ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT