ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಟೇರಿ ರಸ್ತೆ ಒತ್ತುವರಿ: ವಾಗ್ವಾದ

ಒತ್ತುವರಿದಾರರು, ಪಂಚಾಯಿತಿ ಪ್ರತಿನಿಧಿಗಳು, ಗ್ರಾಮಸ್ಥರ ಮಾತಿನ ಚಕಮಕಿ
Published 11 ಜುಲೈ 2024, 6:44 IST
Last Updated 11 ಜುಲೈ 2024, 6:44 IST
ಅಕ್ಷರ ಗಾತ್ರ

ನಾಪೋಕ್ಲು: ‘ಕೋಟೇರಿ ಸಾರ್ವಜನಿಕ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬರು ಅಕ್ರಮ ಬೇಲಿಹಾಕಿ  ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ನಾಗರಿಕರು ಪಂಚಾಯಿತಿಗೆ ದೂರು ಸಲ್ಲಿಸಿದ್ದು, ಬುಧವಾರ ಪಂಚಾಯಿತಿ ಪ್ರತಿನಿಧಿಗಳು ಸ್ಥಳಪರಿಶೀಲನೆ ನಡೆಸಿ,  ಜನರಲ್ಲಿ ತಮ್ಮ ಅಸಹಾಯಕತೆ ತೋಡಿಕೊಂಡ ಪ್ರಸಂಗ ನಡೆದಿದೆ

ಸಮೀಪದ ಕೋಟೇರಿ ರಸ್ತೆಯ ಬದಿ ಮಣಿ ಎಂಬವರು ಜಾಗ ಒತ್ತುವರಿ ಮಾಡಿಕೊಂಡಿದ್ದು, ಇದರಿಂದ ಪಾದಚಾರಿಗಳಿಗೆ ತೊಂದರೆಯಾಗಿದೆ ಎಂದು ಆರೋಪಿಸಿ ಜನರು ಪಂಚಾಯಿತಿಗೆ ಲಿಖಿತ ದೂರು ಸಲ್ಲಿಸಿದ್ದರು. ಸ್ಥಳಕ್ಕೆ ಬಂದ ಪಂಚಾಯಿತಿ ಪ್ರತಿನಿಧಿಗಳು, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿದರು. ಆದರೆ, ಪಂಚಾಯಿತಿ ಪ್ರತಿನಿಧಿಗಳು ಮತ್ತು ಸ್ಥಳೀಯ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು.

ಕಾಫಿ ಬೆಳೆಗಾರ ಬಿದ್ದಾಟಂಡ ದಿನೇಶ್ ಮಾತನಾಡಿ, ಒಂದು ಸಾಮಾಜಿಕ ಸುವ್ಯವಸ್ಥೆಗಾಗಿ ಕಾನೂನು ಇದೆ.ಅದನ್ನು ಎಲ್ಲರೂ ಪಾಲನೆ ಮಾಡಬೇಕು .ಇಲ್ಲಿ ಕಾನೂನನ್ನು ಉಲ್ಲಂಘಿಸಿ ರಸ್ತೆ ಅತಿಕ್ರಮಣ ಮಾಡಲಾಗುತ್ತಿದೆ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರ ಚಲಾಯಿಸಿ ತೆರವುಗೊಳಿಸಬೇಕು ಎಂದರು. ಒತ್ತುವರಿದಾರರು ನ್ಯಾಯಾಲಯದ ಮೆಟ್ಟಿಲೇರಿದರೆ ಪ್ರಕರಣ ಇತ್ಯರ್ಥವಾಗಲು ಸುದೀರ್ಘ ಸಮಯ ಹಿಡಿಯುತ್ತದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೂ ಒತ್ತುವರಿ ತಡೆಯಲು ಜವಾಬ್ದಾರಿಯಿದೆ ಎಂದರು.

ಬೆಳೆಗಾರ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಜಿಲ್ಲಾ ಪಂಚಾಯತಿ ಎಂಜಿನಿಯರ್ ರಸ್ತೆ ಮಾರ್ಜಿನ್ ಗುರುತು ಮಾಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬ ಪ್ರತಿಕ್ರಿಯಿಸಿ ‘ಸಾರ್ವಜನಿಕರ ,ತೋಟದ ಮಾಲೀಕರ ಸಹಕಾರವಿದ್ದರೆ ಗ್ರಾಮ ಪಂಚಾಯಿತಿ, ಪೊಲೀಸ್ ಹಾಗೂ ಕಂದಾಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲದು’ ಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಮಾತನಾಡಿ,ಇಲ್ಲಿ ಹಲವರು ಅತಿಕ್ರಮಣ ಮಾಡಿದ್ದು  ಎಲ್ಲರಿಗೂ ನೋಟಿಸ್ ನೀಡಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

 ‘ಎಲ್ಲ ಜಾಗಗಳನ್ನು ತೆರವುಗೊಳಿಸಿದರೆ, ನಾವೂ ತೆರವುಗೊಳ್ಳಲು ಸಿದ್ಧ ’ಎಂದು ಮಣಿ ಮತ್ತಿತರರು ಹೇಳಿದರು.

ಬೇತು, ಕೊಳಕೇರಿವರೆಗೂ ಒತ್ತುವರಿಯಾಗಿದ್ದು ಅಂಥವರಿಗೆ ಅರಿವು ಮೂಡಿಸಿ ತೆರವುಗೊಳಿಸಿ ಎಂದು ನಾಗರಿಕರು ಒತ್ತಾಯಿಸಿ ಜಿಲ್ಲೆಯಾದ್ಯಂತ ರಸ್ತೆ ಒತ್ತುವರಿಯನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಆದೇಶ ನೀಡಬೇಕೆಂದು ಜನರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಕುರೈಸಿ,ಮಹಮ್ಮದ್, ಗ್ರಾಮಸ್ಥರಾದ ಬಿದ್ದಾಟಂಡ ಜೀವನ್ ಕಾರ್ಯಪ್ಪ,ನೀಡು ಮಂಡ ಕೃತಿ, ಅಪ್ಪಚ್ಚರ ರಮ್ಮಿ ನಾಣಯ್ಯ, ಅಪ್ಪಾರಂಡ ಸುಭಾಷ್ ತಿಮ್ಮಯ್ಯ, ಬೋಟ್ಟೋಳಂಡ ಕುಮಾರ್, ಪುಳ್ಳೆರ ದಾದಾ, ಅರುಣ, ಪಟ್ರಪಂಡ ಶರೀರ, ನೀರನ್, ಅಚ್ಚಂಡ್ರ ಅಪ್ಪಚ್ಚ, ಕೋಟೆ ಮನು ,ರಾಜಪ್ಪ, ಗ್ರಾಮಸ್ಥರು ಸ್ಥಳದಲ್ಲಿದ್ದರು.

ನಾಪೋಕ್ಲು ಸಮೀಪದ ಕೋಟೇರಿ ರಸ್ತೆ ಒತ್ತುವರಿಯನ್ನು ಬುಧವಾರ ಒತ್ತುವರಿದಾರರ ಮನವೊಲಿಸಿ ತೆರವುಗೊಳಿಸಲಾಯಿತು.
ನಾಪೋಕ್ಲು ಸಮೀಪದ ಕೋಟೇರಿ ರಸ್ತೆ ಒತ್ತುವರಿಯನ್ನು ಬುಧವಾರ ಒತ್ತುವರಿದಾರರ ಮನವೊಲಿಸಿ ತೆರವುಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT