ಭಾನುವಾರ, ಆಗಸ್ಟ್ 25, 2019
21 °C
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಆರೋಪ

‘ಬಿಜೆಪಿ ವಾಮಮಾರ್ಗದ ಅಧಿಕಾರ ಪಡೆದಿದೆ’

Published:
Updated:

ಮಡಿಕೇರಿ: ‘ಬಿಜೆಪಿ ಮುಖಂಡರು ಶಾಸಕರನ್ನು ಖರೀದಿ ಮಾಡಿ ವಾಮಮಾರ್ಗದ ಮೂಲಕ ರಾಜ್ಯದಲ್ಲಿ ಅಧಿಕಾರ ಪಡೆದಿರುವುದು ಖಂಡನೀಯ’ ಎಂದು ಕಾಂಗ್ರೆಸ್‌ನ ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಎಂದು ದೂರಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬಿಜೆಪಿ ನೇತೃತ್ವದ ಸರ್ಕಾರ ಭಾಗಶಃ ಅಧಿಕಾರಕ್ಕೆ ಬಂದಿದೆ. ಆದರೆ. ಅಧಿಕಾರಕ್ಕೆ ಬರುವ ಮೊದಲು ಶಾಸಕರನ್ನು ಖರೀದಿ ಮಾಡುತ್ತಾ ತನ್ನ ಭ್ರಷ್ಟಾಚಾರ ಮುಖ ತೋರ್ಪಡಿಸಿದೆ’ ಎಂದು ದೂರಿದರು.

‘ಹಿಂದೆ ಸರ್ಕಾರ ಮಾಡಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಅಲ್ಲದೇ, ಕೆಲವು ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಗಿತ ಮಾಡಲಾಗಿದೆ. ಹಣ ಮಾಡುವ ಉದ್ದೇಶದಿಂದ ಈ ರೀತಿ ಮಾಡುತ್ತಿದೆ’ ಎಂದು ಆರೋಪಿಸಿದರು.

‘ದೇಶವನ್ನು ನಾಶಮಾಡಲು ಮೋದಿ ಅವರ ಆರ್ಥಿಕ ನೀತಿ ಬಂದಿದೆ. ದೊಡ್ಡ ದೊಡ್ಡ ಉದ್ಯಮಿಗಳು ಕೂಡ ಆರ್ಥಿಕ ವ್ಯವಸ್ಥೆಯ ಕುಸಿತದಿಂದ ರೋಗಗ್ರಸ್ತರಾಗಿದ್ದಾರೆ. ಈಚೆಗೆ ಕಾಫಿ ಉದ್ಯಮಿ ಸಿದ್ಧಾರ್ಥ್ ಸಾವು ಮೋದಿ ಅವರ ಆರ್ಥಿಕ ನೀತಿಯ ಬಲಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಟಿಪ್ಪು ಜಯಂತಿ ರದ್ದು ಖಂಡನೀಯ: ಜಾತಿ ಮತ್ತು ಧರ್ಮದ ಆಧಾರದಲ್ಲಿ ಟಿಪ್ಪು ಜಯಂತಿ ರದ್ದು ಮಾಡಿರುವುದು ಖಂಡನೀಯ. ಒಂದು ಧರ್ಮದ ಕೇಸ್ ರದ್ದು ಮಾಡುವುದು ಸರಿಯಲ್ಲ’ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಅಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ವಕ್ತಾರ ಡಿ. ಸುರೇಶ್, ಪ್ರಮುಖರಾದ ಸೂರಜ್, ತೆನ್ನೀರಾ ಮೈನಾ ಹಾಜರಿದ್ದರು.

Post Comments (+)