ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ನೆರೆ ಸಂತ್ರಸ್ತೆ ಆತ್ಮಹತ್ಯೆ

Last Updated 14 ಜೂನ್ 2019, 16:32 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ನೆರೆ ಸಂತ್ರಸ್ತೆ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ತಾಲ್ಲೂಕಿನ ಕಾಲೂರು ಗ್ರಾಮದ ವನಜಾ (22) ಆತ್ಮಹತ್ಯೆ ಮಾಡಿಕೊಂಡ ಯುವತಿ.

ನಗರದ ಗೌಳಿಬೀದಿಯ ಪಿ.ಜಿಯಲ್ಲಿ ವನಜಾ ಆಶ್ರಯ ಪಡೆದುಕೊಂಡಿದ್ದರು. ಬೆಳಿಗ್ಗೆ ಆಸ್ಪತ್ರೆಗೆ ಕರ್ತವ್ಯಕ್ಕೆ ಬಂದಿದ್ದರು. ಮಧ್ಯಾಹ್ನ ಊಟಕ್ಕೆ ಹೋದವರು ವಾಪಸ್‌ ಬರಲಿಲ್ಲ. ಇದರಿಂದ ಸಂಶಯಗೊಂಡು ಸ್ನೇಹಿತರು ಹೋಗಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

2018ರ ಆಗಸ್ಟ್‌ನಲ್ಲಿ ಉಂಟಾಗಿದ್ದ ನೆರೆಯಲ್ಲಿ ವನಜಾ ಅವರ ಮನೆಯೂ ಕೊಚ್ಚಿ ಹೋಗಿತ್ತು. ಸ್ನೇಹಿತರ ಬಳಿಯೂ ಈ ವಿಚಾರವನ್ನು ಪದೇ ಪದೇ ಚರ್ಚಿಸಿ ನೊಂದುಕೊಂಡಿದ್ದರು ಎನ್ನಲಾಗಿದೆ.

ಪೋಷಕರು ಬೇರೊಂದು ಮನೆಯಲ್ಲಿ ವಾಸವಿದ್ದರೆ, ವನಜಾ ಪಿ.ಜಿಯಲ್ಲಿದ್ದರು. ಭೂಕುಸಿತ ಸಂಕಷ್ಟಕ್ಕೆ ಸಿಲುಕಿದ ಗ್ರಾಮಗಳಲ್ಲಿ ಕಾಲೂರು ಸಹ ಒಂದು. ಕಳೆದ ವರ್ಷ ಸಾಕಷ್ಟು ಅನಾಹುತ ಸಂಭವಿಸಿತ್ತು. ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT