8ರಿಂದ ಪಾಲಿಬೆಟ್ಟದಲ್ಲಿ ಮಖಾಂ ಉರುಸ್‌

7

8ರಿಂದ ಪಾಲಿಬೆಟ್ಟದಲ್ಲಿ ಮಖಾಂ ಉರುಸ್‌

Published:
Updated:

ಮಡಿಕೇರಿ: ‘ಕೊಡಗಿನ ಪಾಲಿಬೆಟ್ಟದ ಆರ್ಕಾಡ್ ದರ್ಗಾ ಶರೀಫ್‌ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಹಜ್ರತ್ ಪಟ್ಟಾಣ ಬಾಬಶಾವಲಿ ಅವರ ಮಖಾಂ ಉರುಸ್‌ ಇದೇ 8ರಿಂದ 11ರ ತನಕ ನಡೆಯಲಿದೆ’ ಎಂದು ಜಮಾತ್ ಸಮಿತಿ ಅಧ್ಯಕ್ಷ ಸಿ.ಎಂ.ಅಬ್ದುಲ್ ಜಬ್ಬಾರ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 8ರಂದು ಧ್ವಜಾರೋಹಣ, ಪಾರಾಯಣ, ಧಾರ್ಮಿಕ ಉಪನ್ಯಾಸ ಹಾಗೂ ದಿಖ್ರ್ ಮಜ್ಲಿಸ್ ನಡೆಯಲಿವೆ. ಉರುಸ್‌ಗೆ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಿದರು.

9ರಂದು ರಾತ್ರಿ 8.30ಕ್ಕೆ ತ್ರಿಶೂರ್‌ನ ಮಹಮ್ಮದ್ ನಜೀಬ್‌ ಅಜ್ಹ ಅರಿ ಹಾಗೂ 10ರಂದು ರಾತ್ರಿ 8.30ಕ್ಕೆ ಅಲ್ಲಾ ಹಾಫಿಳ್ ರಾಜುದ್ದೀನ್ ಬಾಖವಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. 11ರಂದು ಸಂಜೆ 6.30ಕ್ಕೆ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಜುಮಾ ಮಸೀದಿ ಖತೀಬರಾದ ಅಲಿ ಸಖಾಫಿ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಕಾಲೀದ್, ಖಜಾಂಚಿ ಅಬೂಬಕ್ಕರ್, ಸಹ ಕಾರ್ಯದರ್ಶಿ ಅಬ್ದುಲ್‌ ರಶೀದ್, ಖತೀಬರಾದ ಅಲಿ ಸಖಾಫಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !