ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯು ಪರೀಕ್ಷಾ ಫಲಿತಾಂಶ: ರಾಜ್ಯದಲ್ಲಿ ಕೊಡಗಿಗೆ ಐದನೇ ಸ್ಥಾ‌ನ

Published 11 ಏಪ್ರಿಲ್ 2024, 7:17 IST
Last Updated 11 ಏಪ್ರಿಲ್ 2024, 7:17 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ 5 ನೇ ಸ್ಥಾ‌ನ ಗಳಿಸುವ ಮೂಲಕ ಇತರ ಜಿಲ್ಲೆಗಳಿಗೆ ಮಾದರಿ ಎನಿಸಿದೆ.

ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶ ಶೇ 1.58 ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ‌ ಪರೀಕ್ಷೆ ಬರೆದ 4,546 ವಿದ್ಯಾರ್ಥಿಗಳ ಪೈಕಿ 4,216 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಶೇಷ ಎಂದರೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಗೆ ಹೋಲಿಸಿದರೆ‌‌ ಕಲಾ ವಿಭಾಗಕ್ಕೆ ಕಡಿಮೆ ಶೇಕಡಾವಾರು ಫಲಿತಾಂಶ ಬಂದಿದೆ. ಶೇ 50.71 ರಷ್ಟು‌‌ ಪುನರಾವರ್ತಿತ ಅಭ್ಯರ್ಥಿಗಳು ಈ ಬಾರಿ ಪಾಸಾಗಿದ್ದಾರೆ‌.

ಕಲಾವಿಭಾಗ: ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಎಸ್.ಹೇಮಾವತಿ 574 ಅಂಕ ಗಳಿಸಿ ಪ್ರಥಮ, ಸಿದ್ದಾಪುರದ ಇಕ್ರಾ ಪಿಯು ಕಾಲೇಜಿನ ಪಿ.ಐ.ಸಪ್ನಾ 572 ಅಂಕ ಗಳಿಸಿ ದ್ವಿತೀಯ, ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಎಸ್.ಶ್ರೀ‌ನಂದಾ 571 ಅಂಕ ಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ‌.

ವಾಣಿಜ್ಯ ವಿಭಾಗ: ಗೋಣಿಕೊಪ್ಪಲಿನ ವಿದ್ಯಾನಿಕೇತನ ಪಿಯು ಕಾಲೇಜಿನ ಚರಿಸ್ಮಾ ಜಾನ್ಸ‌ನ್ 591 ಅಂಕ ಗಳಿಸಿ ಪ್ರಥಮ, ಗೋಣಿಕೊಪ್ಪಲಿನ ಸರ್ವದೈವತಾ ಪಿಯು ಕಾಲೇಜಿನ ಕೆ.ಕೆ.ರಶ್ಮಿತಾ 589 ಅಂಕ ಗಳಿಸಿ ದ್ವಿತೀಯ ಹಾಗೂ 588 ಅಂಕ ಗಳಿಸಿದ ಪೊನ್ನಂಪೇಟೆಯ ಸಂತ ಅಂಥೋಣಿ ಪಿಯು ಕಾಲೇಜಿನ ಐ.ಬಿಂದು‌ ಹಾಗೂ ಕೊಟ್ಟಮುಡಿಯ ಮರ್ಕಜ್ ಪಿಯು ಕಾಲೇಜಿನ ಜ್ಹೂವೇರಿಯಾ ಪಿ.ಜ್ಹಡ್ ತೃತೀಯ ಸ್ಥಾನ ಗಳಿಸಿದ್ದಾರೆ.

ವಿಜ್ಞಾನ ವಿಭಾಗ: ಮಡಿಕೇರಿಯ ಸಂತ ಮೈಕೈಲರ ಪಿಯು ಕಾಲೇಜಿನ ಡಿಯಾನ ನವೀನ್ 592 ಅಂಕ ಗಳಿಸಿ ಪ್ರಥಮ, ಡಿ.ಪಿ.ಜೀವನ್ ಹಾಗೂ ಪೊನ್ನಂಪೇಟೆಯ ಹಳ್ಳಗಟ್ಟುವಿನ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪಿಯು ಕಾಲೇಜಿನ ಎಚ್.ಆರ್.ಸಿಂಚು 588 ಅಂಕ ಗಳಿಸಿ ದ್ವಿತೀಯ ಹಾಗೂ ಗೋಣಿಕೊಪ್ಪಲಿನ ವಿದ್ಯಾನಿಕೇತನ ಪಿಯು ಕಾಲೇಜಿನ ಎಂ.ಎಂ.ಕಾವೇರಮ್ಮ 586 ಅಂಕ ಗಳಿಸಿ ತೃತೀಯ ಸ್ಥಾ‌ನ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT