ಕೊಡಗು: ಗಾಳಿ ಸಹಿತ ಧಾರಾಕಾರ ಮಳೆ

7

ಕೊಡಗು: ಗಾಳಿ ಸಹಿತ ಧಾರಾಕಾರ ಮಳೆ

Published:
Updated:

ಮಡಿಕೇರಿ: ಕೊಡಗು‌ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನದಿಂದ ಗಾಳಿ ಸಹಿತ ಧಾರಾಕಾರ ಮಳೆಯಾಗುತ್ತಿದೆ. ಶನಿವಾರ ರಾತ್ರಿಯೂ ಭಾರಿ ಮಳೆ ಸುರಿದಿತ್ತು. 

ಕಾವೇರಿ, ಲಕ್ಷ್ಣಣತೀರ್ಥ ನದಿಗಳೂ‌ ಸೇರಿದಂತೆ ಹಳ್ಳ ಕೊಳ್ಳಗಳು‌ ತುಂಬಿ ಹರಿಯುತ್ತಿವೆ. ಗಾಳಿಯ ಅಬ್ಬರಕ್ಕೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. 

ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ಭಾಗದಲ್ಲಿ ಬಿಡುವು ಕೊಟ್ಟು ಮಳೆ ಆರ್ಭಟಿಸುತ್ತಿದೆ.‌ 

ಸೋಮವಾರಪೇಟೆ ಹಾಗೂ ಮಾದಾಪುರ ಭಾಗದಲ್ಲೂ ಸತತವಾಗಿ ಮಳೆ ಸುರಿಯುತ್ತಿದ್ದು ಹಾರಂಗಿ ಜಲಾಶಯದ‌ ಒಳಹರಿವು ಮತ್ತೆ ಏರಿಕೆಯಾಗಿದೆ‌. ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡುವ ಸಾಧ್ಯತೆಯಿದ್ದು ನದಿಪಾತ್ರದ ಜನರು‌ ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲ 107, ಮಡಿಕೇರಿ 78, ಸುಂಟಿಕೊಪ್ಪ 46 ಹಾಗೂ ನಾಪೋಕ್ಲು 45 ಮಿ.ಮೀ. ಮಳೆಯಾಗಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !