ಮಡಿಕೇರಿ: ನಗರದ ರಾಜಾಸೀಟ್ ಉದ್ಯಾನದಲ್ಲಿ ಪುಷ್ಪಲೋಕವೇ ಸೃಷ್ಟಿಯಾಗಲಿದೆ. ಜ. 24ರಿಂದ 4 ದಿನಗಳ ಕಾಲ ಜಿಲ್ಲಾಡಳಿತ, ತೋಟಗಾರಿಕಾ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಬರೋಬ್ಬರಿ 7 ಸಾವಿರ ಕುಂಡಗಳು, 20 ಸಾವಿರ ಹೂಗಳು ಪ್ರವಾಸಿಗರನ್ನು ಸ್ವಾಗತಿಸಲಿವೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.

ಈ ವರ್ಷ ನಗರದ ಐತಿಹಾಸಿಕ ಓಂಕಾರೇಶ್ವರ ದೇಗುಲದ ಮಾದರಿಯನ್ನು ವಿವಿಧ ಬಗೆಯ 5 ಲಕ್ಷ ಹೂಗಳಿಂದ ನಿರ್ಮಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಇದು 22 ಅಡಿ ಎತ್ತರ, 30 ಅಡಿ ಉದ್ದ ಇರಲಿದ್ದು, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯಲಿದೆ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ.

ಕೊಡಗಿನ ಜೇನಿಗೆ ನೀಡಲಾಗಿರುವ ‘ಝೇಂಕಾರ’ ಬ್ರಾಂಡ್ ಅನ್ನು ವಿವಿಧ ಬಗೆಯ ಹೂಗಳಿಂದ ಸಿಂಗರಿಸಿ ಅದನ್ನು ಪ್ರಚುರಪಡಿಸಲು ಅಧಿಕಾರಿಗಳು ಉದ್ದೇಶಿಸಿದ್ದಾರೆ. ಅದಕ್ಕಾಗಿಯೇ ಜೇನುಹುಳಗಳ ಕಲಾಕೃತಿಯನ್ನೂ ನಿರ್ಮಿಸಲಾಗುತ್ತಿದೆ.

ಗಣರಾಜ್ಯೋತ್ಸವದ ಅಂಗವಾಗಿ ದೇಶಭಕ್ತಿ ಹೆಚ್ಚಿಸುವಂತಹ ಯೋಧ, ಫಿರಂಗಿ, ರಾಷ್ಟ್ರಧ್ವಜ ಇತ್ಯಾದಿ ಪರಿಕರಗಳನ್ನು ನಿರ್ಮಿಸಲಾಗುತ್ತಿದೆ. ವಿಂಟೇಜ್ ಕಾರಿನ ಹೂವಿನ ಕಲಾಕೃತಿ ವಾಹನಪ್ರಿಯರನ್ನು ಸೆಳೆದರೆ, ಡಾರ್ಬಿ ಡಾಲ್, ಮೋಟು–ಪತ್ಲು ಸೇರಿದಂತೆ ಇತರ ಹೂವಿನ ಕಲಾಕೃತಿಗಳು ಚಿಣ್ಣರನ್ನು ಕೇಂದ್ರೀಕರಿಸಿ ನಿರ್ಮಿಸಲಾಗಿದೆ.

ಇವುಗಳೆಲ್ಲಕ್ಕೂ ತಿಲಕವಿಟ್ಟಂತೆ ಪ್ರತಿವರ್ಷದಂತೆ ಈ ವರ್ಷವೂ ‘ಸೆಲ್ಫಿ ಜ್ಹೋನ್’ ಯುವಕ, ಯುವತಿಯರಿಗಾಗಿ ಸಿದ್ಧವಾಗುತ್ತಿದೆ.

ಅಚ್ಚರಿಗೆ ತಳ್ಳುವಂತಹ ಬೋನ್ಸಾಯ್ ಗಿಡಗಳು, ಇಕೆಬಾನಗಳೂ ಇರಲಿವೆ. ತರಕಾರಿಗಳಲ್ಲಿ ಸಾಧಕರನ್ನು ಕೆತ್ತಿ ಅವರಿಗೆ ಗೌರವ ಅರ್ಪಿಸಲಾಗುತ್ತದೆ. ಗಾಂಧಿ ಮೈದಾನದಲ್ಲಿ ಒಟ್ಟು 60 ಮಳಿಗೆಗಳನ್ನು ಹಾಕಲು ಸಿದ್ಧತೆಗಳು ನಡೆದಿವೆ. ಇವುಗಳಲ್ಲಿ ಸರ್ಕಾರಿ ಇಲಾಖೆಯ ಮಳಿಗೆಗಳ ಜೊತೆಗೆ ಕೃಷಿ ಪರಿಕಗಳು, ಯಂತ್ರೋಪಕರಣಗಳ ಮಳಿಗೆಗಳು, ನರ್ಸರಿ ಮೊದಲಾದವುಗಳೂ ಇರಲಿವೆ.

ಶಾಲೆಯಿಂದ ಶಾಲಾ ಸಮವಸ್ತ್ರದಲ್ಲಿ ಬರುವ ಮಕ್ಕಳಿಗೆ ಉಚಿತ ಪ್ರವೇಶವೂ ಇರಲಿದೆ. ಈ ಕುರಿತು ‘ಪ್ರಜಾವಾಣಿ’ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಯೋಗೇಶ್ ಅವರನ್ನು ಸಂಪರ್ಕಿಸಿದಾಗ ಅವರು, ‘ಈ ವರ್ಷದ ಫಲಪುಷ್ಪ ಪ್ರದರ್ಶನ ಕಳೆದ ವರ್ಷಕ್ಕಿಂತ ವೈವಿಧ್ಯಮಯವಾಗಿ ಇರಲಿದೆ. ಸದ್ಯದಲ್ಲೆ, ಸಂಪೂರ್ಣ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.