7
ಮಡಿಕೇರಿಯಲ್ಲಿ ‘ರೋಟೋ ಮಿಸ್ಟ್‌’ ವಾರ್ತಾ ಸಂಚಿಕೆ ಬಿಡುಗಡೆ

ಅಂಗನವಾಡಿಗೆ ಕಾಯಕಲ್ಪ: ರೋಟರಿ ನಿರ್ಧಾರ

Published:
Updated:

ಮಡಿಕೇರಿ: ‘ತಮ್ಮ ಕೆಲಸದೊಂದಿಗೆ ಬೇರೆಯವರಿಗೆ ಸಹಾಯ ಮಾಡುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗುವ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆಯಿಡಬೇಕು’ ಎಂದು ರೋಟರಿ ಜಿಲ್ಲೆ 3181ರ ಮುಖ್ಯ ಸಲಹೆಗಾರ ಜಿ.ಕೆ. ಬಾಲಕೃಷ್ಣನ್ ಕರೆ ನೀಡಿದರು. 

ನಗರದ ಗೌಡ ಸಮಾಜದಲ್ಲಿ ಆಯೋಜಿಸಿದ್ದ ರೋಟರಿ ಮಿಸ್ಟಿ ಹಿಲ್ಸ್‌ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಂಬಿಕೆ, ವಿಶ್ವಾಸ, ಭದ್ರತೆ, ದೃಢತೆ, ಧೈರ್ಯ, ದೃಢ ನಿಶ್ಚಯ, ಅರ್ಹತೆ, ಅನುಕಂಪ, ನಡತೆ... ಈ ಗುಣಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ನಾಯಕನಾಗಿ ರೂಪುಗೊಳ್ಳಲು ಸಾಧ್ಯ. ಮಾನವರಲ್ಲಿನ ರಾಕ್ಷಸೀ ಗುಣ ತೊಲಗಿ ಮನುಷ್ಯತ್ವದ ಗುಣ ಕಂಡುಬರಬೇಕು’ ಎಂದು ಆಶಿಸಿದರು.

‘ವ್ಯಕ್ತಿತ್ವ ಒಬ್ಬ ಉತ್ತಮ ಮನುಷ್ಯನನ್ನು ರೂಪುಗೊಳಿಸುತ್ತದೆ. ವ್ಯಕ್ತಿತ್ವವನ್ನು ಕಾಪಾಡಿಕೊಂಡಲ್ಲಿ ಸಮಾಜ ಅಂತಹ ವ್ಯಕ್ತಿಯನ್ನು ಗೌರವಿಸುತ್ತದೆ. 113 ವರ್ಷಗಳ ಇತಿಹಾಸ ಹೊಂದಿರುವ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿಯಲ್ಲಿ ಹಸಿರು ಪರಿಸರ, ಶಾಂತಿ, ಸಹಭಾಳ್ವೆ, ವಿದ್ಯೆ, ಪೋಲಿಯೊ ನಿರ್ಮೂಲನೆಯಂತ ಸಾಮಾಜಿಕ ಕಳಕಳಿಯ ಕಾರ್ಯ ಯೋಜನೆಗಳು ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಬೇರೆ ಯಾವುದೇ ಸಂಘಟನೆಗಳ ಸದಸ್ಯರು ವಿಶ್ವವ್ಯಾಪಿ ಮಾಡದಂತಹ ಕಾರ್ಯ ಯೋಜನೆಗಳು ರೋಟರಿ ಸದಸ್ಯರಿಂದ ಅನುಷ್ಠಾನಗೊಂಡಿವೆ’ ಎಂದು ಶ್ಲಾಘಿಸಿದರು.

‘ಇದು ನಾಯಕರು ಬದಲಾಗುವ ಪ್ರಕ್ರಿಯೆಯೇ ವಿನಾ ನಾಯಕತ್ವ ಬದಲಾಗುವುದಿಲ್ಲ. ರೋಟರಿಗೆ ಹೊಸ ಹೊಸ ನಾಯಕರು ಪ್ರತೀ ವರ್ಷ ಸೇರ್ಪಡೆ ಆಗುತ್ತಲೇ ಇರುತ್ತಾರೆ’ ಎಂದು ಹೇಳಿದರು.

ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಧರ್ಮಪುರ ನಾರಾಯಣ್ ಮಾತನಾಡಿ, ‘ಈ ವರ್ಷ ರೋಟರಿ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಕಾಯಕಲ್ಪ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಮಡಿಕೇರಿ ಸೇರಿದಂತೆ ಜಿಲ್ಲೆಯ ಹಲವೆಡೆ ಇಂಥ ಅಂಗನವಾಡಿಗಳನ್ನು ಗುರುತಿಸುವ ಕಾರ್ಯ ಪ್ರಾರಂಭಗೊಂಡಿದೆ’ ಎಂದು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಜಿ.ಆರ್. ರವಿಶಂಕರ್ ಮಾತನಾಡಿ, 13 ವರ್ಗಳ ಇತಿಹಾಸ ಹೊಂದಿರುವ ಮಿಸ್ಟಿ ಹಿಲ್ಸ್‌ನ ವರ್ಷಸ್ಸಿಗೆ ಧಕ್ಕೆಬಾರದಂತೆ ಮುಂದಿನ ವರ್ಷಗಳಲ್ಲಿ ಹಲವಾರು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು.

‘ಕಳೆದೊಂದು ವರ್ಷದಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ಕೈಗೊಂಡ ಅನೇಕ ಸಾಮಾಜಿಕ ಕಾರ್ಯ ಯೋಜನೆಗಳು ಪ್ರಶಂಸೆಗೆ ಪಾತ್ರವಾಗಿವೆ. ಮಿಸ್ಟಿ ಹಿಲ್ಸ್ ನಡಿಗೆ ಜನರ ಕಡೆಗೆ ಎಂಬ ತನ್ನ ಕನಸು ಸದಸ್ಯರ ಒಗ್ಗಟ್ಟಿನಿಂದ ನನಸಾಗಿದೆ’ ಎಂದು ರೋಟರಿ ಮಿಸ್ಟಿ ಹಿಲ್ಸ್‌ನ ನಿರ್ಗಮಿತ ಅಧ್ಯಕ್ಷ ಎಚ್.ಟಿ. ಅನಿಲ್ ಹೇಳಿದರು.

ಪ್ರಾದೇಶಿಕ ಲೆಫ್ಟಿನೆಂಟ್ ಎನ್.ಪಿ. ಚೀಯಣ್ಣ, ನಿರ್ಗಮಿತ ಕಾರ್ಯದರ್ಶಿ ಪಿ.ಎಂ. ಸಂದೀಪ್, ಎಂ.ಯು. ಮಹೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !