ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC result | ಸೋಮವಾರಪೇಟೆ ತಾಲ್ಲೂಕಿನ 33 ಪ್ರೌಢಶಾಲೆಗಳಲ್ಲಿ ಶೇ 100 ಫಲಿತಾಂಶ

Published 9 ಮೇ 2024, 15:27 IST
Last Updated 9 ಮೇ 2024, 15:27 IST
ಅಕ್ಷರ ಗಾತ್ರ

ಸೋಮವಾರಪೇಟೆ: ಎಸ್‌ಎಸ್‌ಎಲ್‌ಸಿಯಲ್ಲಿ ತಾಲ್ಲೂಕಿಗೆ ಶೇ 92.47  ಫಲಿತಾಂಶ ಲಭಿಸಿದ್ದು, ಹೆಚ್ಚಿನ ಸರ್ಕಾರಿ ಪ್ರೌಢಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಪೋಷಕರ ಅವಕೃಪೆಗೆ ಒಳಗಾಗಿರುವ ಸರ್ಕಾರಿ ಶಾಲೆಗಳಲ್ಲಿ ಶೆ. 100 ರಷ್ಟು ಫಲಿತಾಂಶ ಬಂದಿರುವುದು ಶಾಲಾ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನಲ್ಲಿ 2,353 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2176 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 1227 ಬಾಲಕಿಯರು ಮತ್ತು 1126 ಬಾಲಕರು ಪರೀಕ್ಷೆ ಬರೆದಿದ್ದರು.

33 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿವೆ. ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಗೋಣಿಮರೂರು ಸರ್ಕಾರಿ ಪ್ರೌಢಶಾಲೆ, ಕಾನ್ ಬೈಲ್ ಸರ್ಕಾರಿ ಪ್ರೌಢಶಾಲೆ, ಅಂಕನಳ್ಳಿ ಸರ್ಕಾರಿ ಪ್ರೌಢಶಾಲೆ, ಸೋಮವಾರಪೇಟೆ ವಿಶ್ವಮಾನವ ಕುವೆಂಪು ಇಂಗ್ಲಿಷ್‌ ಪ್ರೌಢಶಾಲೆ, ಸುಂಠಿಕೊಪ್ಪ ಸಂತಮೇರಿ ಇಂಗ್ಲಿಷ್‌ ಪ್ರೌಢಶಾಲೆ, ಶಾಂತಿನೀಕೇತನ ಪ್ರೌಢಶಾಲೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ, ಶನಿವಾರಸಂತೆ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ, ಚೌಡ್ಲು ಜ್ಞಾನವಿಕಾಸ ಇಂಗ್ಲಿಷ್‌ ಪ್ರೌಢಶಾಲೆ, ಅಂಕನಳ್ಳಿ ಸೆಂಟ್ಆನ್ಸ್ ಇಂಗ್ಲಿಷ್‌ ಪ್ರೌಢಶಾಲೆ, ಕಿರಗಂದೂರು ಸರ್ಕಾರಿ ಪ್ರೌಢಶಾಲೆ, ನೆಲ್ಲಿಹುದಿಕೇರಿ ಆಂಗ್ಲೋ ವರ್ಣಾಕುಲರ್ ಇಂಗ್ಲಿಷ್‌ ಪೌಢಶಾಲೆ, ನಿಡ್ತ ಸರ್ಕಾರಿ ಪ್ರೌಢಶಾಲೆ, ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ, ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಆಲೂರು ಸಿದ್ದಾಪುರ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ ಮೋರಾರ್ಜಿ ದೇಸಾಯಿ ವಸತಿ ಶಾಲೆ, ದೊಡ್ಡಕೊಡ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹಟ್ಟಿಹೊಳೆ ನಿರ್ಮಲ ವಿದ್ಯಾಭವನ್ ಇಂಗ್ಲಿಷ್‌ ಪ್ರೌಢಶಾಲೆ, ಕೊಡ್ಲಿಪೇಟೆ ಶ್ರೀಸದಾಶಿವ ಸ್ವಾಮೀಜಿ ಇಂಗ್ಲಿಷ್‌ ಪ್ರೌಢಶಾಲೆ, ಕುಶಾಲನಗರ ಜ್ಞಾನಭಾರತಿ ಇಂಗ್ಲಿಷ್‌ ಪ್ರೌಢಶಾಲೆ, ಗಂಧದಕೋಟೆ ಕೆಎಂಟಿ ಇಂಗ್ಲಿಷ್‌ ಪ್ರೌಢಶಾಲೆ, ಮಸಗೋಡು ಇಂಗ್ಲಿಷ್‌ ಶಾಲೆ, ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಸ್ಕೂಲ್, ಕೂಡ್ಲೂರ್ ಯೂನಿಕ್ ಆಕಾಡೆಮಿ ಪ್ರೌಢಶಾಲೆ, ಸೋಮವಾರಪೇಟೆ ಓಎಲ್‌ವಿ ಪ್ರೌಢಶಾಲೆ, ಆಲೂರು ಸಿದ್ದಾಪುರ ಜಾನಕಿ ಕಾಳಪ್ಪ ಪ್ರೌಢಶಾಲೆ, ಶನಿವಾರಸಂತೆ ಸುಪ್ರಜಾ ಗುರುಕುಲ ಇಂಗ್ಲಿಷ್‌ ಪ್ರೌಢಶಾಲೆ, ತೋಳೂರುಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ಬೊಳ್ಳೂರು ಉದ್ಗಾಂ ಶಾಲೆ, ಶನಿವಾರಸಂತೆ ಶ್ರೀವಿಘ್ನೇಶ್ವರ ಗೋಲ್ಡನ್  ಇಂಗ್ಲಿಷ್‌ ಶಾಲೆಗಳು ಫಲಿತಾಂಶದಲ್ಲಿ ಶತಕ ದಾಖಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT