ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗು | ಸಂಭ್ರಮದ ‘ಕುಂಡೆ’ ಹಬ್ಬಕ್ಕೆ ಚಾಲನೆ

Published 23 ಮೇ 2024, 4:16 IST
Last Updated 23 ಮೇ 2024, 4:16 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಗಿರಿಜನರ ಸಂಭ್ರಮದ ‘ಕುಂಡೆ’ ಹಬ್ಬಕ್ಕೆ ಬುಧವಾರ ಚಾಲನೆ ದೊರಕಿತು.

ವೇಷಧಾರಿ ಗಿರಿಜನ ಯುವಕರು, ಪೀಪಿ ಊದುತ್ತ, ಪ್ಲಾಸ್ಟಿಕ್ ಡ್ರಮ್, ಬಿಂದಿಗೆ, ಬಕೆಟ್, ತಗಡಿನ ಟಿನ್, ಬಡಿಯುತ್ತಾ, ಸೋರೆ ಬುರುಡೆಯನ್ನು ‘ಝಲ್ ಝಲ್’ ಎಂದು ಆಡಿಸುತ್ತಾ ಪೊನ್ನಂಪೇಟೆ ತಾಲ್ಲೂಕಿನ ಎಲ್ಲ ಪಟ್ಟಣಗಳಲ್ಲಿ ಕುಣಿದು ಕುಪ್ಪಳಿಸಿದರು.

ಗೋಣಿಕೊಪ್ಪಲು, ಪೊನ್ನಂಪೇಟೆ, ಹುದಿಕೇರಿ, ಟಿ.ಶೆಟ್ಟಿಗೇರಿ, ತಿತಿಮತಿ, ದೇವರಪುರ ಮೊದಲಾದ ಭಾಗಗಳಲ್ಲಿ ಕುಣಿಯುತ್ತಾ ಏ ‘ಕುಂಡೆ’ ಎಂದು ಹಾಡಿನ ರೂಪದಲ್ಲಿ ಬೈಯುತ್ತಾ ಹಣ ಬೇಡಿದರು.

ಗೋಣಿಕೊಪ್ಪಲುವಿನಲ್ಲಿ ಇವತ್ತು ಮತ್ತೆ ನಾಳೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಂಗಡಿ ಮುಂಗಟ್ಟುಗಳ ಮುಂದೆ ಕುಣಿದು ಕುಪ್ಪಳಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಕಾವಲು ಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT