ಸೋಮವಾರ, ಮೇ 17, 2021
28 °C

ಲಾಡ್ಜ್‌ನಲ್ಲಿ ಮಹಿಳೆ ಆತ್ಮಹತ್ಯೆ: ಜತೆಗಿದ್ದ ವ್ಯಕ್ತಿಯ ಸ್ಥಿತಿ ಗಂಭೀರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಲಾಡ್ಜ್ ಒಂದರಲ್ಲಿ ಶುಕ್ರವಾರ ಸಂಜೆ  ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜತೆಯಲ್ಲಿದ್ದ ತೋಲಂಡ ಸುಭಾಷ್ ಚಂಗಪ್ಪ ಎಂಬುವವರೂ ಆತ್ಮಹತ್ಯೆಗೆ ಯತ್ನಿಸಿ, ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ಸುಭಾಷ್ ಚಂಗಪ್ಪ ಲಾಡ್ಜ್‌ನಲ್ಲಿ ಕೊಠಡಿ ಪಡೆಯುವಾಗ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ವಿಳಾಸ ನೀಡಿದ್ದಾರೆ. ಮೃತ ಮಹಿಳೆಯ ಕೊಠಡಿಯಲ್ಲಿ ಐಡಿ ಕಾರ್ಡ್ ಹಾಗೂ ಮೊಬೈಲ್ ದೊರೆತ್ತಿದ್ದು, ಇದರಲ್ಲಿ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಎಂದಿದ್ದು, ಹೆಸರು ಪ್ರಭಾವತಿ (60) ಎಂದಿದೆ. ಮೃತ ಮಹಿಳೆಯು ಸುಭಾಷ್ ಅವರ ತಾಯಿ ಇರಬಹುದು ಎಂದು ಪೊಲೀಸರು
ಶಂಕಿಸಿದ್ದಾರೆ.

ಕೊಠಡಿಯಲ್ಲಿ ಡೆತ್ ನೋಟ್ ದೊರೆತ್ತಿದ್ದು, ಈ ವಿಷಯವನ್ನು ಯಾರಿಗೂ ತಿಳಿಸಬೇಡಿ, ಪೊಲೀಸರೇ ಶವ ಸಂಸ್ಕಾರ ನೆರವೇರಿಸಲಿ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸುಭಾಷ್ ಹಾಗೂ ಮಹಿಳೆ ಏ.7ರಂದು ಲಾಡ್ಜ್‌ನಲ್ಲಿ ಕೊಠಡಿ ಪಡೆದುಕೊಂಡಿದ್ದಾರೆ. ಏ.8ರ ಸಂಜೆವರೆಗೂ ರೂಮ್ ಬಾಯ್‌ಗೆ ಕಾಣಿಸಿಕೊಂಡಿದ್ದಾರೆ. ಆದರೆ ಶುಕ್ರವಾರ ಸಂಜೆ ರೂಮ್ ಬಳಿಗೆ ಹೋದ ರೂಮ್ ಬಾಯ್‌ಗೆ ಕೊಠಡಿ ಒಳಗಿನಿಂದ ವಿಷದ ವಾಸನೆ ಬಂದಿದೆ. ಬಾಗಿಲು ತೆರೆದು ನೋಡಿದಾಗ ಮಹಿಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಸುಭಾಷ್ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿದೆ’ ಎಂದು ಮಾಹಿತಿ
ನೀಡಿದರು.

ಸ್ಥಳಕ್ಕೆ ಸಿಪಿಐ ಜಯರಾಮ್, ಸಬ್ ಇನ್‌ಸ್ಪೆಕ್ಟರ್‌ ಸುಬ್ಬಯ್ಯ ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿ ಪರಿಶೀಲಿಸಿದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು