ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಿ

Last Updated 23 ಜನವರಿ 2012, 5:55 IST
ಅಕ್ಷರ ಗಾತ್ರ

ಕುಶಾಲನಗರ : ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಣಾವರ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಸಿದ್ದಲಿಂಗಪುರ, ಹರಿಸಿನಗುಪ್ಪೆ, ಬಸರುಗುಪ್ಪೆ, ಚಿಕ್ಕ ಆಳುವಾರ, ದೊಡ್ಡ ಆಳುವಾರ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಶನಿವಾರ ಗ್ರಾಮಸ್ಥರು ಒತ್ತಾಯಿಸಿದರು.

ಸಮೀಪದ ಸಿದ್ಧಲಿಂಗಪುರ ಸಮುದಾಯ ಭವನದಲ್ಲಿ ಶನಿವಾರ ತೊರೆನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಟಿ.ಕೆ.ವಸಂತ್ ಅಧ್ಯಕ್ಷತೆಯಲ್ಲಿ ನಡೆದ 2011-12 ನೇ ಸಾಲಿನ ಮೊದಲು ಹಂತದ ಗ್ರಾಮಸಭೆಯಲ್ಲಿ ಕಾಡಾನೆ ಹಾವಳಿ, ಬೀದಿದೀಪದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕಾಡಂಚಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆಡಳಿತ ಮಂಡಳಿಯ ಗಮನ ಸೆಳೆದು ಕೂಡಲೇ ಪರಿಹಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪಂಚಾಯ್ತಿ ವತಿಯಿಂದ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಎಲ್ಲ ಮನೆಗಳಿಗೂ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ ಗ್ರಾಮದ ಎನ್.ಎಂ.ಬೋಪಯ್ಯ ಸಿದ್ಧಲಿಂಗಪುರ ಗ್ರಾಮವನ್ನು ಸಂಪೂರ್ಣ ನಿರ್ಲಕ್ಷ್ಯಿಸ ಲಾಗುತ್ತಿದೆ ಎಂದು ಪಂಚಾಯ್ತಿ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ತೊರೆನೂರಿನಿಂದ ಬೈರಪ್ಪನ ಗುಡಿವರೆಗೆ ರಸ್ತೆ ಎರಡು ಕಡೆ ಚರಂಡಿ ನಿರ್ಮಿಸಬೇಕು ಎಂದು ಗಣೇಶ್ ಹೇಳಿದರು.
ಗ್ರಾಮಸಭೆಗೆ ಅಧಿಕಾರಿಗಳು ಗೈರು ಹಾಜರಾಗಿರುವುದು ಸರಿಯಲ್ಲ ಗೈರು ಹಾಜರಾಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚನ್ನರಾಜು ಸಭೆಯಲ್ಲಿ ಒತ್ತಾಯಿಸಿದರು.

ಜಿ.ಪಂ.ಸದಸ್ಯೆ ಸಿ.ಕೆ.ಇಂದಿರಮ್ಮ ಮಾತನಾಡಿ ಜಿ.ಪಂ.ವತಿಯಿಂದ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಈ ಭಾಗದಲ್ಲಿ ಟ್ಯಾಂಕ್ ನಿರ್ಮಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್.ಪಿ.ರವೀಶ್ ಮಾತನಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಸವ ಯೋಜನೆಯಡಿ 22, ಇಂದಿರಾ ಆವಾಜ್‌ಯೋಜನೆಯಡಿ 25, ಗುಡಿಸಲು ವಾಸಿ ಯೋಜನೆಯಡಿ 4 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸಭೆಯಲ್ಲಿ ತಾ.ಪಂ.ಸದಸ್ಯೆ ಜ್ಯೋತಿಶಿವಣ್ಣ, ಗ್ರಾ.ಪಂ.ಉಪಾಧ್ಯಕ್ಷ ಪಿ.ಡಿ.ರವಿಕುಮಾರ್, ನೋಡೆಲ್ ಅಧಿಕಾರಿ ತಾ.ಪಂ.ವಿಸ್ತಾರಣಾಧಿಕಾರಿ ಚನ್ನಬಸಪ್ಪ  ಸದಸ್ಯರಾದ ಟಿ.ಬಿ. ಜಗದೀಶ್, ರಾಜಶೇಖರ್,ಶಾಂತಿ, ನಿಂಗಜಮ್ಮ, ದೇವರಾಜು, ಗೀತಾ, ಗೌರಮಣಿ, ಭವಾನಿಬಾಯಿ ಕಾರ್ಯದರ್ಶಿ ಬಿ.ಇ.ವೀರರಾಜು ಮತ್ತಿತರರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT