ನಾಪೋಕ್ಲು: ಕಳೆದ ಭಾನುವಾರ ನಾಪೋಕ್ಲು ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ಮೊದಲ ಮಳೆಯಾದ ಹಿನ್ನೆಲೆಯಲ್ಲಿ ರೋಬಸ್ಟಾ ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಕಂಗೊಳಿಸುತ್ತಿವೆ.

ಮುಂದಿನ ವರ್ಷದ ಕಾಫಿಯ ಫಸಲಿಗೆ ಹಿನ್ನೆಲೆಯಾಗಿ ಮಾರ್ಚ್ ತಿಂಗಳಲ್ಲಿ ಸುರಿಯುವ ಮೊದಲ ಮಳೆ ಕಾಫಿ ಬೆಳೆಗಾರರ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರಸಕ್ತ ವರ್ಷ ಮಾರ್ಚ್ 9ರಂದು ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಆದ ಉತ್ತಮ ಮಳೆಗೆ 9 ದಿನಗಳ ಬಳಿಕ ರೋಬಸ್ಟಾ ಕಾಫಿಯ ಹೂಗಳು ಅರಳಿದ್ದು, ಶ್ವೇತ ವೈಭವ ನಿರ್ಮಾಣವಾಗಿದೆ.

ಕಾಫಿಯ ಫಸಲನ್ನು ನಿಗದಿಗೊಳಿಸಲು ಮಾರ್ಚ್ ತಿಂಗಳಲ್ಲಿ ರೋಬಸ್ಟಾ ಗಿಡಗಳಿಗೆ ಹೂ ಮಳೆಯ ಅಗತ್ಯವಿದೆ. ನೀರಿನ ಸೌಕರ್ಯವುಳ್ಳವರು ಸ್ಪಿಂಕ್ಲರ್ ಮೂಲಕ ಕೆರೆಗಳಿಂದ, ಹೊಳೆಯಿಂದ ನೀರು ಹಾಯಿಸಿ ಹೂ ಅರಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದರು.

ಇದೀಗ ಮಳೆ ಸುರಿದ ಪರಿಣಾಮ ಬೆಳೆಗಾರರ ಸ್ಪಿಂಕ್ಲರ್ ಸೆಟ್ಗಳು ಮೂಲೆ ಸೇರಿವೆ. ಹೂಗಳು ಅರಳಿದ ಒಂದು ತಿಂಗಳೊಳಗೆ ಬ್ಯಾಕಿಂಗ್ ಮಳೆ ಅಗತ್ಯವಿದೆ. ಸಕಾಲದಲ್ಲಿ ಎರಡು ಉತ್ತಮ ಮಳೆ ಲಭಿಸಿದರೆ ಬೆಳೆಗಾರರಿಗೆ ಫಸಲು ನಿಶ್ಚಿತ.

ಕಾಫಿಯ ತೋಟಗಳಲ್ಲಿ ಮೊದಲೆಲ್ಲಾ ಹೂಗಳು ಅರಳಿದಾಗ ಅಗಾಧ ಪರಿಮಳ ವ್ಯಾಪಿಸುತಿತ್ತು. ಜೇನ್ನೊಣಗಳ ಝೇಂಕಾರ ಕಂಡುಬರುತ್ತಿತ್ತು. ಈಚೆಗಿನ ವರ್ಷಗಳಲ್ಲಿ ಅವೆಲ್ಲಾ ಕಡಿಮೆ ಯಾಗಿದ್ದು, ಶ್ವೇತ ವೈಭವ ಮಾತ್ರ ಮನಸೆಳೆಯುತ್ತದೆ ಎಂದು ಬೆಳೆಗಾರರು ಅಭಿಪ್ರಾಯಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.