ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಫ್ಟಿನೆಂಟ್‌್ ಜನರಲ್‌ ಆಗಿ ತಿಮ್ಮಯ್ಯಗೆ ಬಡ್ತಿ

Last Updated 16 ಜನವರಿ 2017, 6:12 IST
ಅಕ್ಷರ ಗಾತ್ರ

ಮಡಿಕೇರಿ: ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಜನರಲ್ ಪಿ.ಸಿ. ತಿಮ್ಮಯ್ಯ ಅವರು ಲೆಫ್ಟಿನೆಂಟ್ ಜನರಲ್ ಹುದ್ದೆಗೆ ಬಡ್ತಿ ಹೊಂದಿದ್ದಾರೆ.
ಕೊಡಗು ಮೂಲದ ತಿಮ್ಮಯ್ಯ ಅವರು ಪಟ್ಟಚೆರುವಂಡ ಪೊನ್ನಪ್ಪ ಚಂಗಪ್ಪ ಹಾಗೂ ಗೌರು ಚಂಗಪ್ಪರ ಪುತ್ರ. ಭುವನೇಶ್ವರ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು, ಖಡಕ್ ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಇಚಿಡಿಯನ್ ಮಿಲಿಟರಿ ಆಕಾಡೆಮಿ ಡೆಹ್ರಾಡೂನ್‌ನಿಂದ ‘ಖಡ್ಗ ಗೌರವ’ದೊಂದಿಗೆ ಭಾರತೀಯ ಸೇನೆಯನ್ನು 1981ರ ಜುಲೈ 31ರಂದು ಸೇರಿದರು.

ಬಾಂಗ್ಲಾದೇಶದಲ್ಲಿ ಭಾರತೀಯ ಹೈಕಮಿಷನರ್‌ಗೆ ರಕ್ಷಣಾ ಸಲಹೆಗಾರರಾಗಿ ಕೆಲಸ ಮಾಡಿದ ತಿಮ್ಮಯ್ಯ, ಪಶ್ಚಿಮ ಕಮಾಂಡ್‌ನ ಮುಖ್ಯಸ್ಥ ಹಾಗೂ ಪೂರ್ವ ಕಮಾಂಡಿನ ಮುಖ್ಯಸ್ಥರ ಪ್ರಶಂಸಾ ಪತ್ರಗಳಿಗೂ ಪಾತ್ರರಾಗಿದ್ದಾರೆ.

ಸೇನಾ ಮುಖ್ಯಸ್ಥರ ಎಡಿಸಿ, ಅಸ್ಸಾಂ ರೈಫಲ್ಸ್‌ನ ಮುಖ್ಯಸ್ಥರಾಗಿ, ಭಾರತೀಯ ಭೂಸೇನಾ ಕೇಂದ್ರ ಕಚೇರಿಯಲ್ಲಿ ಸಹಾಯಕ ಮಿಲಿಟರಿ ಕಾರ್ಯದರ್ಶಿ ಯಾಗಿ, ವಿಶ್ವಸಂಸ್ಥೆಯ ಕಾರ್ಯ ಪಾಲನಾ ಪಡೆಯಲ್ಲಿ ಅಂಗೋಲಾದಲ್ಲಿ ಮಿಲಿಟರಿ ವೀಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಇದೀಗ ಲೆಫ್ಟಿನೆಂಟ್ ಜನರಲ್ ಆಗಿ ಸೇನಾ ಮುಖ್ಯಸ್ಥರ ಕಚೇರಿಯಲ್ಲಿರುವ ದೂರು ಮತ್ತು ಸಲಹಾ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT