ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ, ಕಾಡಿದ ಬರ, ಪ್ರವಾಸೋದ್ಯಮಕ್ಕೆ ಪೆಟ್ಟು

ಹಿನ್ನೋಟ–2016
Last Updated 31 ಡಿಸೆಂಬರ್ 2016, 6:23 IST
ಅಕ್ಷರ ಗಾತ್ರ

ಮಡಿಕೇರಿ:   2016... ಕೊಡಗು ಜಿಲ್ಲೆಗೆ ಮರೆಯಲಾಗದ ವರ್ಷ..! ಪ್ರಕೃತಿಯ ಸೊಬಗಿನಲ್ಲಿ ತಣ್ಣಗೆ ಮಗ್ಗುಲು ಬದಲಿಸುತ್ತಿದ್ದ ಜಿಲ್ಲೆ, ಕೆಲವೊಂದು ವಿವಾದ, ಕಹಿ ಘಟನೆಗಳಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸುದ್ದಿ ಆಯಿತು. ಜಿಲ್ಲೆಯ ಪಾಲಿಗೆ ಸಿಹಿಗಿಂತ ಕಹಿಯ ಪಾಲೇ ಹೆಚ್ಚು. ಸತತ ಎರಡನೇ ವರ್ಷವೂ ಬರ ಕಾಡಿತು.

ಒಮ್ಮೆ ಕ್ಯಾಲೆಂಡರ್‌ ತಿರುವಿ ಹಾಕಿ ನೋಡಿದರೆ ಸಾಕಷ್ಟು ವಿವಾದಗಳು ಘಟಿಸಿ ಹೋದ ನೆನಪುಗಳು ಕಾಡಲಿವೆ. ಮಡಿಕೇರಿಯಲ್ಲಿ ಕೊಡವ ಕುಟುಂಬಗಳ ಹಾಕಿ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಕೆಟ್ಟ ಘಟನೆಗಳಿಗೆ ಜಿಲ್ಲೆ ಸಾಕ್ಷಿ ಆಗುವ ಸಂದರ್ಭ ಎದುರಾಯಿತು. ಹಾಕಿ ಟೂರ್ನಿ ಸಮಾರೋಪ ಸಮಾರಂಭಕ್ಕೆ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಆಗಮಿಸಿದ್ದು ವಿಶೇಷ.

ಮಂಗಳೂರಿನ ಡಿವೈಎಸ್‌ಪಿ, ಕೊಡಗು ಮೂಲದ ಎಂ.ಕೆ. ಗಣಪತಿ ಮಡಿಕೇರಿ ವಿನಾಯಕ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಯಿತು. ಆತ್ಮಹತ್ಯೆಗೂ ಮುನ್ನ ಸಚಿವ ಕೆ.ಜಿ. ಜಾರ್ಜ್‌್ ಹೆಸರು ಉಲ್ಲೇಖಿಸಿದ್ದು ರಾಜಕೀಯ ಸಂಚಲನವನ್ನೇ ಸೃಷ್ಟಿಸಿತು.

ಭೂಸೇನಾ ಮುಖ್ಯಸ್ಥರಾಗಿದ್ದ ದಲ್ಬೀರ್‌ ಸಿಂಗ್‌ ಸುಹಾಗ್‌ ಜಿಲ್ಲೆಗೆ ಆಗಮಿಸಿದ್ದರು. ನಟಿ ರಮ್ಯಾ ಅವರು ಪಾಕಿಸ್ತಾನವನ್ನು ಹೊಗಳಿ ಮಂಡ್ಯದಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಸೋಮವಾರಪೇಟೆ   ನ್ಯಾಯಾಲಯದಲ್ಲಿ ಅವರ ವಿರುದ್ಧ ಖಾಸಗಿ ದೂರು ದಾಖಲಾಯಿತು. ಅರಣ್ಯ ಸಚಿವ ರಮಾನಾಥ್‌ ರೈ ಪುತ್ರ ಶ್ರೀಮಂಗಲ ಸಮೀಪ ಕುಡಿದು ಪುಂಡಾಟ ನಡೆಸಿದ್ದು ವಿವಾದಕ್ಕೆ ದಾರಿ ಮಾಡಿಕೊಟ್ಟಿತು.

ಗೋವು ಸಾಗಣೆ ವ್ಯಕ್ತಿಗಳ ಹಲ್ಲೆ, ಶನಿವಾರಸಂತೆಯಲ್ಲಿ ಶೂಟೌಟ್‌್, ಮಕ್ಕಳ ಕಳ್ಳರ ವಂದತಿಯಿಂದ ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದರು. ಇನ್ನು ಗ್ರಾಮ ಪಂಚಾಯಿತಿಯ ಸದಸ್ಯನೇ ಅಧ್ಯಕ್ಷೆಯನ್ನೇ ಜೀತಕ್ಕೆ ಇರಿಸಿಕೊಂಡ ವಿಷಯ ದೊಡ್ಡ ವಿವಾದ ಎಬ್ಬಿಸಿತ್ತು.

ಮತ್ತೊಮ್ಮೆ ಟಿಪ್ಪು ಜಯಂತಿಗೆ ಅಪಸ್ವರ ಎದ್ದಿತ್ತು. ಜಿಲ್ಲಾಡಳಿತ ಎಚ್ಚರಿಕೆಯ ನಡೆಯಿಂದ ಜಯಂತಿ ಶಾಂತಿಯುತವಾಗಿ ಮುಕ್ತಾಯಕಂಡಿತು. ‘ಕಾವೇರಿ ತೀರ್ಥೋದ್ಭವ’ದ ಮೇಲೆ ಕಾವೇರಿ ಗಲಾಟೆಯ ಕರಿನೆರಳು ತಟ್ಟಿತ್ತು. ಸೋಮವಾರಪೇಟೆಯ ಐಗೂರಿನ ಮಸೀದಿಯೊಂದರಲ್ಲಿ ಕುರಆನ್‌ ಸುಟ್ಟ ಪ್ರಕರಣ ನಡೆಯಿತು. ಬಳಿಕ ಆರ್ಎಸ್‌ಎಸ್‌ ಮುಖಂಡ ಮನೆಯ ಎದುರು ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಲಾಯಿತು.

ವರ್ಷದ ಕೊನೆಯಲ್ಲಿ ದಿಡ್ಡಳ್ಳಿಯ ಮೀಸಲು ಅರಣ್ಯ ಒತ್ತುವರಿ ಆರೋಪ ಮೇಲೆ ಬುಡಕಟ್ಟು ಜನರ 577 ಗುಡಿಸಲುಗಳನ್ನು ಅರಣ್ಯ ಇಲಾಖೆ ತೆರವು ಮಾಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತು. ಆದಿವಾಸಿ
ಮಹಿಳೆ,      ಪುರುಷ ಬೆತ್ತಲೆ ಪ್ರತಿಭಟನೆ ನಡೆಸಿದ ಕಹಿ ಘಟನೆಗೂ ಕೊಡಗು ಕೊನೆಯಲ್ಲಿ ಸಾಕ್ಷಿಯಾಯಿತು. ಸಾಕಷ್ಟು ವಿವಾದಗಳಿಂದ ಜಿಲ್ಲೆಯ ಪ್ರವಾಸೋದ್ಯಮ ನೆಲಕಚ್ಚಿತ್ತು.
2016ರಲ್ಲಿ ನಡೆದ ಪ್ರಮುಖ ವಿದ್ಯಮಾನಗಳನ್ನು ಆಯಾ ದಿನಾಂಕದಂದು ವಿವರಿಸಲಾಗಿದೆ... 

4 ಜನವರಿ
ಭರವಸೆ ಸಮಿತಿ ಭೇಟಿ

3: ಶನಿವಾರಸಂತೆ ಸಮೀಪದ ಹುಲುಕೋಡು ತೋಟದಲ್ಲಿ ಮೇಸ್ತ್ರಿಗಳ ಹಲ್ಲೆಯಿಂದ ದಾವಣಗೆರೆ  ಮೂಲದ ಕಾರ್ಮಿಕನ ಸಾವು. ಭಾಗಮಂಡಲ– ಚೆಟ್ಟಿಮಾನಿ ಸೇತುವೆಗೆ ಹಾನಿಯಿಂದ ಭಾರಿ ವಾಹನಗಳ ಸಂಚಾರ ನಿಷೇಧಿಸಿದ ಜಿಲ್ಲಾಡಳಿತ. ಅದೇ ದಿವಸ ಜಿಲ್ಲೆಗೆ ವಿಧಾನ ಪರಿಷತ್‌ ಸರ್ಕಾರಿ ಭರವಸೆ ಸಮಿತಿಯ ಭೇಟಿ
5: ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎ.ಟಿ. ರಾಮಸ್ವಾಮಿ ಜಿಲ್ಲೆಗೆ ಭೇಟಿ
6: ಸಿದ್ದಾಪುರ ಸಮೀಪದ ಗುಹ್ಯಾ ಗ್ರಾಮದಲ್ಲಿ ಮಸೀದಿ ಉದ್ಘಾಟನೆ 
7: ಜನರಲ್‌್ ತಿಮ್ಮಯ್ಯ ಹುಟ್ಟಿದ ಮನೆ ‘ಸನ್ನಿಸೈಡ್‌’ನಲ್ಲಿ ₹ 5.50 ಕೋಟಿ ವೆಚ್ಚದಲ್ಲಿ ‘ಮ್ಯೂಸಿಯಂ’ ನಿರ್ಮಾಣಕ್ಕೆ ಚಾಲನೆ
28: ಫೀಲ್ಡ್‌್ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರ 117ನೇ ಜನ್ಮ ದಿನ ಆಚರಣೆ

4 ಫೆಬ್ರುವರಿ
ಅರಳಿದ ‘ಕಮಲ’

5: ಭಾಗಮಂಡಲದಲ್ಲಿ ಕುಂಭಮೇಳ ನಡೆಸಲು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆಯ ವಿರೋಧ
8: ಸೇವೆ ಕಾಯಂಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರ ಬೃಹತ್‌ ಪ್ರತಿಭಟನೆ
10: ನಗರಸಭೆ ಸಾಮಾನ್ಯ ಸಭೆ– ಮಹದೇವಪೇಟೆ ರಸ್ತೆ ವಿಸ್ತರಣೆ ಗದ್ದಲ, ಪೌರಾಯುಕ್ತೆಯಾಗಿದ್ದ ಪುಷ್ಪಾವತಿ ವರ್ಗಾವಣೆಗೆ ನಿರ್ಣಯ
21: ಕೊಡವ ಭಾಷೆಯನ್ನು ಪಠ್ಯಕ್ರಮಕ್ಕೆ ಸೇರಿಸಲು ಆಗ್ರಹಿಸಿ, ಕೊಡವ ನ್ಯಾಷನಲ್‌ ಕೌನ್ಸಿಲ್‌ನಿಂದ ಪ್ರತಿಭಟನೆ
23: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ– ಮತ್ತೆ ಜಿಲ್ಲಾ ಪಂಚಾಯಿತಿನಲ್ಲಿ ‘ಅರಳಿದ ಕಮಲ’
28: ಕನ್ನಡ ಸಾಹಿತ್ಯ ಪರಿಷತ್‌್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಲೋಕೇಶ್‌ ಸಾಗರ್‌ ಆಯ್ಕೆ
4 ಮಾರ್ಚ್ ಕೃಷಿಮೇಳ
3: ಕುಶಾಲನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಜ್ಯಮಟ್ಟದ ಕೃಷಿಮೇಳ ಆರಂಭ
10: ಮಡಿಕೇರಿಯಲ್ಲಿ ದಲಿತ ವಚನಕಾರರ ಜಯಂತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಎಲ್‌. ಹನುಮಂತಯ್ಯ ಭಾಗಿ
13: ‘ಸೇವ್‌್ ಕಾವೇರಿ; ಸೇವ್‌್ ಕೊಡಗು’ ಬೈಕ್‌ ಜಾಥಾ ಮಡಿಕೇರಿಗೆ ಆಗಮನ
14: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸೋಲು, ಕಾಂಗ್ರೆಸ್‌ ಕಚೇರಿಯಲ್ಲಿ ಗಲಾಟೆ
18: ಕರ್ನಾಟಕ ದ್ರಾಕ್ಷಾರಸ ಮಂಡಳಿ, ತೋಟಗಾರಿಕೆ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ‘ದ್ರಾಕ್ಷಾರಸ ಉತ್ಸವ’ಕ್ಕೆ ಚಾಲನೆ
31: ಕೇರಳ ಸಬ್‌ ಏರಿಯಾದ ಜಿಒಸಿ ಮೇಜರ್‌್ ಜನರಲ್‌್ ಕೆ.ಎಸ್‌. ನಿಜ್ಜಾರ್‌ ಅವರು ಸನ್ನಿಸೈಡ್‌ಗೆ ಭೇಟಿ

4 ಏಪ್ರಿಲ್
ಹಾಕಿ ಉತ್ಸವ

10: ಕೊಡವ ಕುಟುಂಬಗಳ 20ನೇ ವರ್ಷದ ಹಾಕಿ ಉತ್ಸವಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಚಾಲನೆ
18: ನಾಪೋಕ್ಲು ಜನರಲ್‌್ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಂದಲ್ಲಿ ‘ಮುಕ್ಕಾಟಿರ ಕ್ರಿಕೆಟ್‌್ ಕಪ್‌್ ಟೂರ್ನಿ’ಗೆ ಚಾಲನೆ
28: ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಬಿ.ಎ. ಹರೀಶ್‌, ಉಪಾಧ್ಯಕ್ಷರಾಗಿ ಲೋಕೇಶ್ವರಿ ಗೋಪಾಲ್‌ ಆಯ್ಕೆ. ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಭೇಟಿ
30: ಚೇರಂಗಾಲದಲ್ಲಿ ‘ಯುದ್ಧ ಸ್ಮಾರಕ’ ಉದ್ಘಾಟನೆ

4 ಮೇ
ಬರ ದರ್ಶನ

1: ಕೊಡಗು ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವ ಸಂಪುಟದ ಉಪ ಸಮಿತಿ ಸದಸ್ಯರು ಭೇಟಿ. ಸಚಿವರಾದ ದಿನೇಶ್‌್ ಗುಂಡೂರಾವ್‌, ಟಿ.ಬಿ. ಜಯಚಂದ್ರ, ಡಾ.ಎಚ್‌.ಸಿ. ಮಹದೇವಪ್ಪ, ಮಹಾದೇವಪ್ರಸಾದ್ ವಿವಿಧೆಡೆ ಸಂಚಾರ
6: ಮಡಿಕೇರಿಯ ದೇವರಾಜ ಅರಸು ಭವನದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ವಾದ್ಯ ಪರಿಕರ ವಿತರಣೆ
9: ಶಾಂತೆಯಂಡ ಹಾಕಿ ಪಂದ್ಯಾವಳಿಯ ಸಮಾರೋಪ, ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಅತಿಥಿ
12: ಬೋಯಿಕೇರಿಯಲ್ಲಿ ಮರಳು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು
15: ಕೊಡಗು ಜಿಲ್ಲೆಯಾದ್ಯಂತ ಭಾರಿ ಮಳೆ, ಜಿಲ್ಲಾ ಪೊಲೀಸ್‌ ಕಚೇರಿ ಮೇಲ್ಭಾಗದಲ್ಲಿ ಅಳವಡಿಸಿದ್ದ ಶೀಟ್‌ಗಳು ಹಾರಿ ಹೋಗಿ ಅಪಾರ ನಷ್ಟ
16: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ವಿರಾಜಪೇಟೆ ಸೇಂಟ್‌ ಆನ್ಸ್‌್ ಪ್ರೌಢಶಾಲೆ ನಿಹಾರಿಕಾ ಜಿಲ್ಲೆಗೆ ಪ್ರಥಮ
18: ಕಂದಾಯ ಇಲಾಖೆ ಸಂಸದೀಯ ಕಾರ್ಯದರ್ಶಿ ಆಗಿದ್ದ ಪ್ರಮೋದ್‌ ಮಧ್ವರಾಜ್‌್ ಜಿಲ್ಲೆಗೆ ಭೇಟಿ
19: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೊಡಗು ಜಿಲ್ಲೆಯನ್ನು ಬರ ಪೀಡಿತವೆಂದು ಘೋಷಣೆಗೆ ನಿರ್ಣಯ
21: ಗೋಣಿಕೊಪ್ಪಲು ಬಳಿ ಅಬ್ಬೂರು ಪೈಸಾರಿ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಗುಡಿಸಲು ತೆರವು 
24: ಪಂಚಭಾಷಾ ಅಕಾಡೆಮಿಗಳ ‘ಸಾಹಿತ್ಯ ಸಾಂಸ್ಕೃತಿಕ ಸಮ್ಮಿಲನ’, ಆಕರ್ಷಿಸಿದ ಮೆರವಣಿಗೆ. ಹಿರಿಯ ಸಾಹಿತಿ ಡಾ.ಹಂ.ಪ. ನಾಗರಾಜಯ್ಯ ಅತಿಥಿ
30: ಪೊಲೀಸರ ಪ್ರತಿಭಟನೆಗೆ ವಿವಿಧ ಸಂಘಟನೆಗಳ ಬೆಂಬಲ

4 ಜೂನ್‌
ನೂತನ ಎಸ್‌ಪಿ

2: ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆಗಿ ಪಿ.ರಾಜೇಂದ್ರ ಪ್ರಸಾದ್‌್ ಅಧಿಕಾರ ಸ್ವೀಕಾರ
7: ‘ದೇವಟಿ ಪರಂಬು’ ಎನ್ನಲಾದ ಸ್ಥಳದಲ್ಲಿ ಶಿಲಾಶಾಸನ ಧ್ವಂಸ, ಭಾಗಮಂಡಲದಲ್ಲಿ ಭಾರಿ ಪ್ರತಿಭಟನೆ
8: ಅಬ್ಬಿಫಾಲ್ಸ್‌ ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
14: ವಿಧಾನ ಪರಿಷತ್‌ ಸದಸ್ಯೆಯಾಗಿ ಆಯ್ಕೆಯಾದ ವೀಣಾ ಅಚ್ಚಯ್ಯ       ಅವರ ತವರು ಜಿಲ್ಲೆ ಕೊಡಗಿಗೆ ಮೊದಲ ಭೇಟಿ
15: ತಲಕಾವೇರಿಗೆ ಕಾವೇರಿ ಬಚಾವೋ ಆಂದೋಲನ ಸಮಿತಿ ಸದಸ್ಯರ ಭೇಟಿ– ಪಾದಯಾತ್ರೆಗೆ ಚಾಲನೆ ಆರಂಭ
29: ಕೊಡಗಿನಾದ್ಯಂತ ಭಾರಿ ಮಳೆ, ಭಾಗಮಂಡಲ ಜಲಾವೃತ

4 ಆಗಸ್ಟ್‌
ಸೈನಿಕರ ಸಮಾವೇಶ

7: ಮಡಿಕೇರಿಯಲ್ಲಿ ನಿವೃತ್ತ ಸೈನಿಕ ಸಮಾವೇಶ, ಭೂಸೇನಾ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಸುಹಾಗ್‌್ ಅತಿಥಿ – ಮಾಜಿ ಸೈನಿಕರಿಗೆ ಕೌಶಲ ಪ್ರಮಾಣ ಪತ್ರದ ಭರವಸೆ
14: ಕುಶಾಲನಗರದ ಗುಡ್ಡೆಹೊಸೂರು ಸಮೀಪ ಆಟೊ ಚಾಲಕ ಪ್ರವೀಣ್‌ ಪೂಜಾರಿ ಕೊಲೆ
22: ಮಂಡ್ಯದಲ್ಲಿ ಪಾಕಿಸ್ತಾನದ ಪರವಾಗಿ ಹೇಳಿಕೆ ಕೊಟ್ಟಿದ್ದ ನಟಿ ರಮ್ಯಾ ವಿರುದ್ಧ ಸೋಮವಾರಪೇಟೆ  ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು
26: ಕುಶಾಲನಗರ ಸಮೀಪದ ಗುಡ್ಡೆಹೊಸೂರು ಸಮೀಪ ನಡೆದ ಆಟೊ ಚಾಲಕ ಕೊಲೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿಗಳ ಬಂಧನ

4 ಸೆಪ್ಟೆಂಬರ್‌
‘ಬಿ’ ರಿಪೋರ್ಟ್‌ ಗದ್ದಲ

3: ‘ಕೈಲ್‌ ಪೋಳ್ದ್‌್’ ಆಚರಣೆ
7:  ತಮಿಳುನಾಡಿಗೆ ನೀರು– ಕಾವೇರಿ ತವರಿನಲ್ಲಿ ಪ್ರತಿಭಟನೆಯ ಕಾವು
10: ನಗರಸಭೆ ಚುನಾವಣೆ– ಅಧ್ಯಕ್ಷರಾಗಿ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷರಾಗಿ ಟಿ.ಎಸ್‌. ಪ್ರಕಾಶ್‌ ಆಯ್ಕೆ
12: ಮಡಿಕೇರಿ ತಾಲ್ಲೂಕಿನ ಕಗ್ಗೊಡ್ಲು ಸಮೀಪ ಜಾನುವಾರು ಸಾಗಣೆ ವಾಹನದ ಮೇಲೆ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಸ್ವರೂಪದ ಗಾಯ
13: ಕುಶಾಲನಗರದ ಹೋಂಸ್ಟೇಯೊಂದರಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪ ಮೇಲೆ ತುಮಕೂರು ಜಿಲ್ಲೆ ತುರುವೇಕೆರೆ ಜೆಡಿಎಸ್‌್ ಶಾಸಕ ಎಂ.ಟಿ. ಕೃಷ್ಣಪ್ಪ ಅವರ ಪುತ್ರ ಕೆ. ರಾಜೀವ್‌್ ಸೇರಿದಂತೆ ನಾಲ್ವರ ಬಂಧನ
15: ಭಾಗಮಂಡಲದಲ್ಲಿ ಮಳೆಗಾಗಿ ಹಮ್ಮಿಕೊಂಡಿದ್ದ ಪರ್ಜನ್ಯ ಯಾಗ ಮುಕ್ತಾಯ
16: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಜಿಲ್ಲೆಗೆ ಭೇಟಿ, ಅರ್ಜಿ ವಿಲೇವಾರಿ ವಿಳಂಬ ಮಾಡಿದ ಅಧಿಕಾರಿಗಳಿಗೆ ತರಾಟೆ
17: ಸಚಿವ ಕೆ.ಜೆ. ಜಾರ್ಜ್‌, ಪ್ರಸಾದ್‌, ಮೋಹಂತಿ ದೋಷಮುಕ್ತಗೊಳಿಸಿ, ಸಿಐಡಿ ಮಡಿಕೇರಿ ನ್ಯಾಯಾಲಯಕ್ಕೆ ‘ಬಿ– ರಿಪೋರ್ಟ್‌್’ ಸಲ್ಲಿಕೆ
19: ಸ್ವಚ್ಛತೆಯಲ್ಲಿ ಕೊಡಗು ಜಿಲ್ಲೆಗೆ ದೇಶದಲ್ಲೇ 11ನೇ ಸ್ಥಾನ
26: ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಅಧ್ಯಕ್ಷ ಜೆ.ಆರ್‌. ಲೋಬೋ ಭೇಟಿ
27: ಭಾಗಮಂಡಲ ಹಾಗೂ ತಲಕಾವೇರಿಗೆ ಆದಿಚುಂಚನಗಿರಿಯ ನಿರ್ಮಾಲನಂದನಾಥ ಸ್ವಾಮೀಜಿ ಭೇಟಿ, ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ
4 ಅಕ್ಟೋಬರ್‌ ದಸರಾ, ತೀರ್ಥೋದ್ಭವ
2: ಕರಗೋತ್ಸವದ ಮೂಲಕ ‘ಮಡಿಕೇರಿ ದಸರಾ’ಕ್ಕೆ ಚಾಲನೆ
8: ಕುಶಾಲನಗರದ ಹಾರಂಗಿ ಜಲಾಶಯಕ್ಕೆ ಕೇಂದ್ರದ ಅಧ್ಯಯನ ತಂಡ ಭೇಟಿ, ನೀರಿನಮಟ್ಟ ಪರಿಶೀಲನೆ
10: ಶನಿವಾರಸಂತೆಯಲ್ಲಿ ಗ್ರಾಹಕನಿಗೆ ಗುಂಡಿಟ್ಟು ಕೊಲೆ ಮಾಡಿದ ಸರ್ವೀಸ್‌ ಸ್ಟೇಷನ್‌್ ಮಾಲೀಕ, ಮೂವರ ಬಂಧನ
12: ದಶಮಂಟಪಗಳ ವೈಭವದ ಮೆರವಣಿಗೆಯ ಮೂಲಕ ಮಡಿಕೇರಿ ದಸರಾಕ್ಕೆ ತೆರೆ
18: ಜೀವನದಿ ಕಾವೇರಿಗೆ ತೀರ್ಥೋದ್ಭವದ ಸಂಭ್ರಮ, ಬೆಳಿಗ್ಗೆ 6.28ಕ್ಕೆ ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದ ಕಾವೇರಿ
28: ನಾಲ್ಕನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ. ಚಿನ್ನಸ್ವಾಮಿ ನಗರಸಭೆ, ಜಿಲ್ಲಾ ಪಂಚಾಯಿತಿಗೆ ಭೇಟಿ
4 ನವೆಂಬರ್‌ ಟಿಪ್ಪು ಜಯಂತಿ ಗದ್ದಲ
10: ಪರ– ವಿರೋಧದ ನಡುವೆ ಶಾಂತಿಯುತವಾಗಿ ನಡೆದ ಟಿಪ್ಪು ಜಯಂತಿ, ಶಾಸಕರು ಸೇರಿ 150  ಕಾರ್ಯಕರ್ತರ ಬಂಧನ, ಬಿಡುಗಡೆ
17: ಕೊಡವ ಕುಲಶಾಸ್ತ್ರ ಅಧ್ಯಯನ ಆರಂಭ
23: ಕಾವೇರಿ ನದಿ ದಿನದಿಂದ ದಿನಕ್ಕೆ ಕಲುಷಿತಗೊಳ್ಳುತ್ತಿರುವ ಆತಂಕಕಾರಿ ಅಂಶ ಬೆಳಕಿಗೆ, ‘ಸಿ’ ಗುಣಮಟ್ಟಕ್ಕೆ ಕುಸಿದ ಕಾವೇರಿ ನೀರು
24: ಮಡಿಕೇರಿಯ ಗಾಂಧಿ ಮೈದಾನದಲ್ಲಿ 26ನೇ ಕೊಡವ ನ್ಯಾಷನಲ್‌ ಡೇ. ಭಾಗಮಂಡಲ ವ್ಯಾಪ್ತಿಯಲ್ಲಿ ನಕ್ಸಲ್‌್ ತಂಡ ಪ್ರತ್ಯಕ್ಷ ಶಂಕೆ, ಜಿಲ್ಲೆಯಲ್ಲಿ ಆತಂಕ.
28, 29: ವಿರಾಜಪೇಟೆ ತಾಲ್ಲೂಕಿನಲ್ಲಿ 7ನೇ ಕನ್ನಡ ಸಾಹಿತ್ಯ ಸಮ್ಮೇಳನ

4 ಡಿಸೆಂಬರ್‌
ದಿಡ್ಡಳ್ಳಿ ಪ್ರಕರಣ

3: ಸೋಮವಾರಪೇಟೆ ತಾಲ್ಲೂಕಿನ ಐಗೂರಿನಲ್ಲಿ ಕುರಾನ್‌ ಸುಟ್ಟ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ
7: ಮೀಸಲು ಅರಣ್ಯ ಒತ್ತುವರಿ ಆರೋಪ; ಗುಡಿಸಲು ತೆರವು ಖಂಡಿಸಿ ದಿಡ್ಡಳ್ಳಿಯಲ್ಲಿ ಅರೆ ಬೆತ್ತಲೆ ಪ್ರತಿಭಟನೆ ನಡೆಸಿದ ಆದಿವಾಸಿ ಮಹಿಳೆ ಹಾಗೂ ಪುರುಷ, ಇದು ರಾಜ್ಯದಾದ್ಯಂತ ದೊಡ್ಡ ಸುದ್ದಿ ಆಯಿತು. ಇದೇ ದಿವಸ ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಆಶ್ರಯದಲ್ಲಿ ಮಡಿಕೇರಿಯಲ್ಲಿ ಸಂಗಮ, ಸಂಭ್ರಮ ಕಾರ್ಯಕ್ರಮ
12: ಗೋಣಿಕೊಪ್ಪಲಿನಲ್ಲಿ ನಡೆದ ರಾಜ್ಯಮಟ್ಟದ ‘ಪೊಮ್ಮಕ್ಕಡ ಸಾಂಸ್ಕೃತಿಕ ನಮ್ಮೆ’
13: ಜಿಲ್ಲೆಯಾದ್ಯಂತ ಬರದ ನಡುವೆಯೂ ‘ಹುತ್ತರಿ’ ಆಚರಣೆ
16: ಬರ ಅಧ್ಯಯನಕ್ಕೆ ಸಚಿವ ಸಂಪುಟ ಉಪ ಸಮಿತಿ ಭೇಟಿ
17: ಕೊಡವರ ಕುಲಶಾಸ್ತ್ರ ಸಮೀಕ್ಷೆ ಸ್ಥಗಿತಕ್ಕೆ ಮುಖ್ಯಮಂತ್ರಿ ಆದೇಶ, ನ್ಯಾಯಾಲಯದ ಮೆಟ್ಟಿಲೇರಲು ಕೊಡವ ನ್ಯಾಷನಲ್‌ ಕೌನ್ಸಿಲ್‌್ ನಿರ್ಧಾರ
18: ದಿಡ್ಡಳ್ಳಿ ಒಕ್ಕಲೆಬ್ಬಿಸಿದ ಪ್ರಕರಣ– ತೀವ್ರ ಸ್ವರೂಪ ಪಡೆದ ದಿಡ್ಡಳ್ಳಿಯ ಆದಿವಾಸಿಗಳ ಪ್ರತಿಭಟನೆ
21: ಕೇರಳದಿಂದ ದಿಡ್ಡಳ್ಳಿಗೆ 10 ಮಂದಿ ನಕ್ಸಲರು ಬಂದಿರುವ ಶಂಕೆ ಹಿನ್ನೆಲೆ – ಮಾಲ್ದಾರೆ, ಚನ್ನಂಗಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
23: ದಿಡ್ಡಳ್ಳಿ ಆದಿವಾಸಿಗಳ ‘ಮಡಿಕೇರಿ ಚಲೋ’, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ದಿಡ್ಡಳ್ಳಿಗೆ ಬೇಟಿ, ಸಂಧಾನ ಮಾತುಕತೆ ಸಫಲ, ಪ್ರತಿಭಟನೆ ಕೈಬಿಟ್ಟ ನಿರಾಶ್ರಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT