ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಕೈಲ್ ಪೊವ್‌ದ್

Last Updated 12 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಮೈಸೂರು: ವಿವಿಧ ಕ್ರೀಡೆ, ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಕೈಲ್ ಪೊವ್‌ದ್ (ಆಯುಧ ಪೂಜೆ) ಅನ್ನು ಕೊಡವರು ಭಾನುವಾರ ವಿಜೃಂಭಣೆಯಿಂದ ಆಚರಿಸಿದರು.

ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜ ಏರ್ಪಡಿಸಿದ್ದ `ಕೈಲ್ ಪೊವ್‌ದ್~ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಕೋವಿ, ಕತ್ತಿ  ಸೇರಿದಂತೆ ಇತರ ಆಯುಧಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರಿಗೆ ಕಿರಿಯರು ಕಾಲು ಮುಟ್ಟಿ  ನಮಸ್ಕರಿಸಿದರು. ಪರಸ್ಪರ ಉಭಯ ಕುಶಲೋಪರಿ ಕೇಳುತ್ತಾ, ಸಂತೋಷ ಸಂಭ್ರಮದಿಂದ ವಿಚಾರ ವಿನಮಯ ಮಾಡಿಕೊಂಡರು.

ನಂತರ ಹಾಸನ ಸೆಷನ್ಸ್ ನ್ಯಾಯಾಧೀಶ ಕೊಕ್ಕೆಂಗಡ ಬಿ.ಚಂಗಪ್ಪ ಮಾತನಾಡಿ, ಕೊಡವ ಸಾಂಪ್ರದಾಯಿಕ ಹಬ್ಬವಾದ ಕೈಲ್ ಪೊವ್‌ದ್ ಅನ್ನು ನಿರಂತರವಾಗಿ ಆಚರಿಸುವ ಮೂಲಕ ಕೊಡವರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮೈಸೂರಿನ ಕೊಡವ ಸಮಾಜ ಮಾಡುತ್ತಿದೆ. ಕೊಡಗು ಸಮಾಜಕ್ಕೆ ಭವ್ಯ ಪರಂಪರೆ, ವಿಶಿಷ್ಟ ಸಂಸ್ಕೃತಿ ಇದೆ. ಇಂತಹ ಆಚರಣೆಗಳಿಂದ ಯುವ ಜನಾಂಗದವರಿಗೆ ಕೊಡವರ ಹಿನ್ನೆಲೆ, ವೈಶಿಷ್ಟ್ಯವನ್ನು ತಿಳಿಸುವಲ್ಲಿ ಸಹಕಾರಿಯಾಗಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಡಾ.ಪುಟ್ಟಪ್ಪ, ಪಟ್ಟಡ ಚೆಟ್ಟಿ ಚಾ, ಕೆ.ಸಿ.ಪೂವಯ್ಯ, ಬಿ.ಟಿ.ಮುತ್ತಮ್ಮ ಅವರನ್ನು ಸನ್ಮಾನಿಸಲಾಯಿತು.  ಪ್ರತಿಭಾನ್ವಿತ ಕೊಡವ ವಿದ್ಯಾರ್ಥಿಗಳಿಗೆ 24 ವಿವಿಧ ಸ್ಕಾಲರ್‌ಷಿಪ್‌ಗಳನ್ನು ವಿತರಿಸಿದರು.

ನಂತರ ನಡೆದ ಕೇರ್ ಬಲಿಪ (ಹಗ್ಗ-ಜಗ್ಗಾಟ), ಗುಂಡು ಎಸೆತ, ಓಟ, ಅದೃಷ್ಟ ಪರೀಕ್ಷೆ, ವಾಲಗತಾಟ್ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಿದರು. ಸಾಂಸ್ಕೃತಿಕ ಸ್ಪರ್ಧೆಗಳ ನೃತ್ಯ ವಿಭಾಗದಲ್ಲಿ  ದಂಪತಿ ನೃತ್ಯ ಆಕರ್ಷಕವಾಗಿದ್ದು, ಗಮನ ಸೆಳೆಯಿತು. ಮೈಸೂರಿನ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಸಾಂಪ್ರದಾಯಿಕ ಹಬ್ಬದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮೈಸೂರು ಕೊಡವ ಸಮಾಜದ ಅಧ್ಯಕ್ಷ ಕಟ್ಟೇರ ಎ.ಕಾರ್ಯಪ್ಪ, ಉಪಾಧ್ಯಕ್ಷ ನಡಿಕೇರಿಯಂಡ ಪಿ.ಕಾಳಪ್ಪ, ಖಜಾಂಚಿ ನಾಯಕಂಡ ಸಿ.ಪೊನ್ನಪ್ಪ, ಕಾರ್ಯದರ್ಶಿ ಅಮ್ಮಾಟಂಡ ಕೆ.ಚಿಣ್ಣಪ್ಪ, ಜಂಟಿ-ಕಾರ್ಯದರ್ಶಿ ಕೀತಿಯಂಡ ಕಾವ್ಯ ಕುಟ್ಟಪ್ಪ  ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT