ಭಾನುವಾರ, ಫೆಬ್ರವರಿ 28, 2021
31 °C

ಕಡೆ ಶನಿವಾರ: ದೇವಾಲಯದಲ್ಲಿ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲಾರ: ಶ್ರಾವಣ ಮಾಸದ ಕಡೆ ಶನಿವಾರದ ಅಂಗವಾಗಿ ಇಲ್ಲಿನ ವಿವಿಧ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ ನಡೆಯಿತು.

ದೇವಸ್ಥಾನಗಳನ್ನು ಹೂವು, ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಜತೆಗೆ ದೇವಸ್ಥಾನಗಳಿಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಕಿಲೋ ಮೀಟರ್‌ಗಟ್ಟಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಪೂಜೆ ಆರಂಭವಾಯಿತು. ದೇವಾಲಯ ಸಂಪರ್ಕಿಸುವ ರಸ್ತೆಗಳ ಆರಂಭದಲ್ಲಿ ಬೃಹತ್ ಕಮಾನು ನಿರ್ಮಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಭಗವಧ್ವಜ ಹಾಕಲಾಗಿತ್ತು. ದೇವಾಲಯದ ರಾಜಗೋಪುರ, ಮುಖದ್ವಾರದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು.

ಬಾಲಾಜಿ ಮತ್ತು ವೆಂಕಟರಮಣಸ್ವಾಮಿ ದೇವಾಲಯಕ್ಕೆ ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ಜನದಟ್ಟಣೆ ಕಾರಣಕ್ಕೆ ದೇವಾಲಯದ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಕ್ಷೀರಾಭಿಷೇಕ: ಬಜರಂಗದಳ ಕಾರ್ಯಕರ್ತರು ವೆಂಕಟರಮಣಸ್ವಾಮಿ ದೇವರಿಗೆ 108 ಲೀಟರ್ ಕ್ಷೀರಾಭಿಷೇಕ ಮಾಡಿದರು. ಬೆಳಿಗ್ಗೆ ವಿವಿಧ ಭಕ್ತ ಮಂಡಳಿಗಳಿಂದ ವಿಷ್ಣು ಸಹಸ್ರನಾಮ, ಅನ್ನಮಯ್ಯ ಕೀರ್ತನೆ ಗಾಯನ ನಡೆಯಿತು. ಭಕ್ತರಿಗೆ ಸಿಹಿ ಪೊಂಗಲ್, ಪುಳಿಯೊಗರೆ ಪ್ರಸಾದ ವಿತರಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.