ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ಮಂಡಿಕಲ್‌ನಲ್ಲಿ ಚೌಡೇಶ್ವರಿ ರಥೋತ್ಸವ

Published 26 ಫೆಬ್ರುವರಿ 2024, 5:09 IST
Last Updated 26 ಫೆಬ್ರುವರಿ 2024, 5:09 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಮಂಡಿಕಲ್‌ನಲ್ಲಿ ಚೌಡೇಶ್ವರಿ ದೇವಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ರಥೋತ್ಸವ ಪ್ರಯುಕ್ತ ದೇವರ ಮೂರ್ತಿಗೆ ವಿಶೇಷವಾದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಅಭಿಷೇಕ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.

ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಸಾವಿರಾರು ಭಕ್ತರು ರಥೋತ್ಸವದ ಮೇಲೆ ಬಾಳೆಹಣ್ಣು, ಹೂವು, ತುಳಸಿ, ದವನ ಹಾಗೂ ಉಪ್ಪನ್ನು ಎರಚುವ ಮೂಲಕ ಭಕ್ತರು ತಮ್ಮ ಕೋರಿಕೆ ಹಾಗೂ ಹರಿಕೆ ತೀರಿಸಿದರು.

ಸೇವಾಕರ್ತರು ಭಕ್ತರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ಹಾಗೂ ಅನ್ನಸಂತರ್ಪಣೆ ಮಾಡಿದರು.

ಧ್ರುವ ಚಾರಿಟಬಲ್ ಟ್ರಸ್ಟ್ ವತಿಯಿಂದ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷದ ತಾಲ್ಲೂಕು ಕಾರ್ಯದರ್ಶಿ ಮಂಡಿಕಲ್ ಮಂಜುನಾಥ್ ಅವರಿಂದ ಅವರು ಎರಡು ಸಾವಿರ ಮಂದಿಗೆ ಮಜ್ಜಿಗೆ ಹಾಗೂ ತಂಪು ಪಾನಿಯ ವಿತರಿಸಿದರು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಮಂಜುನಾಥ್, ವಿ.ಆದಿನಾರಾಯಣ , ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್. ಆರ್. ರಾಜೇಂದ್ರಗೌಡ, ಗುಜ್ಜನಹಳ್ಳಿ ಮಂಜುನಾಥ್, ಉಮಾಶಂಕರ್, ಮಂಡಿಕಲ್ ಜಗದೀಶ್, ಚೌಡಪ್ಪ , ರಾಜಣ್ಣ , ರವಿ, ಮಂಡಿಕಲ್ ಮಂಜುನಾಥ್, ಉತ್ತನೂರು ಸುಬ್ರಮಣಿ, ಮುನಿವೆಂಕಟಪ್ಪ, ಕೆ.ವಿ.ವೆಂಕಟರಮಣಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT