ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಗಣೇಶ ವಿಸರ್ಜನೆ ವೇಳೆ ಗುಂಪು ಘರ್ಷಣೆ

Published : 11 ಸೆಪ್ಟೆಂಬರ್ 2024, 13:28 IST
Last Updated : 11 ಸೆಪ್ಟೆಂಬರ್ 2024, 13:28 IST
ಫಾಲೋ ಮಾಡಿ
Comments

ಬಂಗಾರಪೇಟೆ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಾರಹಳ್ಳಿ ವೃತ್ತದಲ್ಲಿ ನೃತ್ಯ ಮಾಡುವ ವಿಚಾರ ಸಂಬಂಧ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ. ಈ ಘಟನೆಯಲ್ಲಿ ನಾಲ್ವರಿಗೆ ಗಾಯಗೊಂಡಿದ್ದಾರೆ. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಟ್ಟಣದ ಅಮರಾವತಿ ಬಡಾವಣೆಯ ವಿನಾಯಕ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಬುಧವಾರ ವಿಸರ್ಜನೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಇದೇ ವೇಳೆ ಬಂಗಾರಪೇಟೆ ರೈಲ್ವೆ ಕ್ವಾಟ್ರಸ್‌ನ ಪಲವತಿಮ್ಮನಹಳ್ಳಿಯ ಯುವಕರ ಗಣೇಶ ಮೆರವಣಿಗೆಯು ಕಾರಹಳ್ಳಿ ವೃತ್ತದ ಅಯ್ಯಪ್ಪ ದೇವಸ್ಥಾನದ ಬಳಿ ಬಂದಿತು. ಈ ವೇಲೆ ರೈಲ್ವೆ ಕ್ವಾಟ್ರಸ್ ಯುವಕನೊಬ್ಬ ಅಮರಾವತಿ ಬಡಾವಣೆಯ ಯುವಕರ ಬಳಗದ ಗಣೇಶ ಮೆರವಣಿಗೆಯಲ್ಲಿ ಬಂದು ತಾನು ನೃತ್ಯ ಮಾಡಬೇಕು. ತಾನು ಹೇಳಿದಂತೆ ತಮಟೆ ಬಡಿಯಲು ಒತ್ತಾಯಿಸಿದ್ದ.

ಇದಕ್ಕೆ ಅಮರಾವತಿ ಬಡಾವಣೆ ಯುವಕರು ಅಡ್ಡಿಪಡಿಸಿದರು. ಇದು ಮಾತಿಗೆ ಮಾತು ಬೆಳೆಯುತ್ತಿದ್ದಂತೆ ರೈಲ್ವೆ ಕ್ವಾಟ್ರಸ್ ಯುವಕರು ಬಂದು ಅಮರಾವತಿ ಯುವಕರ ಮೇಲೆ ಹಲ್ಲೆ ನಡೆಸಿದ್ದು, ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು, ಗಲಾಟೆಯನ್ನು ತಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT