ಅಧಿಕ ಉಷ್ಣಾಂಶದಿಂದ ಸಾಗಾಣಿಕೆಯ ವೇಳೆ ಕ್ಯಾಬೇಜ್ ಕೊಳೆತು ನಾಶವಾಗುವ ಕಾರಣ, ಇತರೆ ರಾಜ್ಯಗಳಿಗೆ ಸಾಗಾಣಿಕೆಯನ್ನು ನಿಲ್ಲಿಸಲಾಗಿದೆ. ಇದರಿಂದ ಬೇಡಿಕೆಗಿಂತ ಪೂರೈಕೆ ಅಧಿಕವಾಗಿ ರಾಜ್ಯದಲ್ಲಿ ಕ್ಯಾಬೇಜ್ ಬೆಲೆಯ ತೀವ್ರ ಕುಸಿತ ಕಂಡಿದೆ. ಮೇಲಿನ ಅಧಿಕಾರಿಗಳಿಗೆ ವರದಿ ನೀಡಿ, ರೈತರಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು.
-ಶಿವಾರೆಡ್ಡಿ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ
ಔಷಧಿ, ಬೀಜ, ಗೊಬ್ಬರದ ವೆಚ್ಚ ಸೇರಿ ಎಕರೆಗೆ ₹30ರಿಂದ ₹40 ಸಾವಿರ ಖರ್ಚು ಬರುತ್ತದೆ. ಎಲೆಕೋಸು ಬೆಲೆ ಕೆ.ಜಿಗೆ ₹1 ಕನಿಷ್ಠ ಬೆಲೆಗೆ ತಲುಪಿದೆ. ಕಟಾವು ಮಾಡುವ ಕೂಲಿಗೂ ಸಾಲುತ್ತಿಲ್ಲ. ಆದ್ದರಿಂದ ರೈತರು ಟ್ರ್ಯಾಕ್ಟರ್‌ಗಳನ್ನು ಬಳಸಿ ಕ್ಯಾಬೇಜ್‌ಗಳನ್ನು ಹೊಲದಲ್ಲಿಯೇ ನಾಶಪಡಿಸುತ್ತಿದ್ದಾರೆ.
-ಸುಬ್ರಮಣಿ, ಮಿಟ್ಟಹಳ್ಳಿ ರೈತ
ಕಾಮಸಮುದ್ರ ಮುಖ್ಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಬಳಸಿ ಕ್ಯಾಬೇಜ್ ಬೆಳೆಯನ್ನು ಹೊಲದಲ್ಲಿಯೇ ನಾಶಪಡಿಸುತ್ತಿರುವ ಮಿಟ್ಟಹಳ್ಳಿ ಗ್ರಾಮದ ರೈತ ಸುಬ್ರಮಣಿ