ಭಾನುವಾರ, ಜುಲೈ 3, 2022
23 °C

ಸಮುದಾಯದ ಮೇಲೂ ಸಿನಿಮಾ ಪ್ರಭಾವ ಇದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರದಲ್ಲಿ ಶನಿವಾರ ರಾತ್ರಿ ನಡೆದ ಸನ್‌ಶೈನ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಎಂ.ಸೀತಮ್ಮ ಹಾಗೂ ಚಲನಚಿತ್ರ ನಿರ್ದೇಶಕ ಮಾನ್ಸೋರೆ ಅವರನ್ನು ಸನ್ಮಾನಿಸಲಾಯಿತು.

ಕೋಲಾರ: ‘ಜನ ಸಮುದಾಯದ ಬೆಳವಣಿಗೆಯಲ್ಲಿಯೂ ಸಿನಿಮಾ ಪ್ರಭಾವವಿದೆ’ ಎಂದು ಚಲನಚಿತ್ರ ನಿರ್ದೇಶಕ ಮನ್ಸೋರೆ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ರಾತ್ರಿ ಸನ್‌ಶೈನ್ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ‘ಹುಟ್ಟಿನಿಂದ ಸಾವಿನವರೆವಿಗೂ ಸಿನಿಮಾ ನಂಟು ಜನರ ಜೊತೆ ತಳಕುಹಾಕಿಕೊಂಡಿರುತ್ತದೆ’ ಎಂದರು.

‘250 ಭಾಷೆಗಳಲ್ಲಿ ಪ್ರತಿ ವರ್ಷ 10 ಸಾವಿರ ಸಿನಿಮಾಗಳು ತಯಾರಾಗುತ್ತಿದ್ದು, ಈ ಪೈಕಿ ಭಾರತದಲ್ಲಿಯೇ ಸುಮಾರು 2 ಸಾವಿರ ಸಿನಿಮಾಗಳು ತಯಾರಾಗುತ್ತಿವೆ. ವಿಶ್ವದಲ್ಲಿ ಸಿನಿಮಾ ಕಲೆ ವಿಸ್ತಾರವಾಗಿ ಹರಡಿವೆ’ ಎಂದು ತಿಳಿಸಿದರು.

‘ತಯಾರಾಗುವ ಶ್ರೇಷ್ಟ ಚಲನಚಿತ್ರಗಳು ಕನ್ನಡ ಶೈಲಿಯ ಮೂಲಕ ಸಾಮಾನ್ಯ ಕನ್ನಡಿಗರನ್ನು ತಲುಪಬೇಕು. ಸದ್ಯಕ್ಕೆ ಬೆಂಗಳೂರು ಹಾಗೂ ನಗರ ಕೇಂದ್ರಿತವಾಗಿದ್ದು, ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆಯಾಗಬೇಕು’ ಎಂದರು.

‘ಜಿಲ್ಲೆಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರನ್ನು ಗುರುತಿಸುವ ಕೆಲಸವಾಗುತ್ತಿಲ್ಲ, 2014 ಮತ್ತು 2015ರ ಸಾಲಿನಲ್ಲಿ ಸತತವಾಗಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಜಿಲ್ಲೆಯ ನಿರ್ದೇಶಕರ ಚಲನಚಿತ್ರಗಳು ಪಡೆದುಕೊಂಡವು ಎನ್ನುವುದೇ ಹೆಗ್ಗಳಿಕೆ. ಆದರೆ, ಈ ಬಗ್ಗೆ ಜಿಲ್ಲೆಯ ಜನರಿಗೆ ಅರಿವಿಲ್ಲ’ ಎಂದು ವಿಷಾದಿಸಿದರು.

‘ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಕಾರ್ಯಕ್ರಮಗಳನ್ನು ಹಬ್ಬಗಳಂತೆ ಒಟ್ಟಾಗಿ ಸೇರಿ ಆಚರಿಸಿದಾಗ ಅರ್ಥ ಸಿಗುತ್ತದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

‘ಜಿಲ್ಲೆಯಲ್ಲಿ ಕಲೆ ಹಾಗೂ ಸಾಹಿತ್ಯ ಕಾರ್ಯಕ್ರಮಗಳನ್ನು ಬೆಳೆಸಲು ಜನತೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.
ನಿವೃತ್ತ ಮುಖ್ಯ ಶಿಕ್ಷಕಿ ಎಂ.ಸೀತಮ್ಮ ಹಾಗೂ ಚಲನಚಿತ್ರ ನಿರ್ದೇಶಕ ಮಾನ್ಸೋರೆ ಅವರನ್ನು ಟ್ರಸ್ಟ್‌ವತಿಯಿಂದ ಸನ್ಮಾನಿಸಲಾಯಿತು.

ಬೆಂಗಳೂರಿನ ಕಲಾ ಮೈತ್ರಿ ವೇದಿಕೆಯ ಕಲಾವಿದರು ಮಂಟೇಸ್ವಾಮಿ ಕಥಾ ಪ್ರಸಂಗ ನಾಟಕ ಪ್ರದರ್ಶನ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು