ರೈತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆದು ಟ್ರ್ಯಾಕ್ಟರ್ ವಾಪಸು ಕೊಡಬೇಕು. ಉಳುಮೆ ಮಾಡಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದರೆ ಡಿಸಿಎಫ್ ಕಚೇರಿ ಮುಂದೆ ಧರಣಿ ನಡೆಸುತ್ತೇನೆ
ಎಸ್.ಎನ್.ನಾರಾಯಣಸ್ವಾಮಿ ಶಾಸಕ
ನ್ಯಾಯಬದ್ಧವಾಗಿರುವ ಜಮೀನನ್ನು ಒಬ್ಬ ಎಂಎಲ್‌ಸಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೆ ಒಳಗಾಗಿರುವ ಜನರ ಸಮಸ್ಯೆಗೆ ಸ್ಪಂದಿಸುವುದು ಹೇಗೆ?
ಇಂಚರ ಗೋವಿಂದರಾಜು ವಿಧಾನ ಪರಿಷತ್ ಸದಸ್ಯ
ಅರಣ್ಯ ಜಮೀನ ಒತ್ತುವರಿ ತೆರವು ಮಾಡಿದರೆ ನಮಗೇನು ಕಿರೀಟ ಸಿಗಲ್ಲ. ನಮ್ಮ ಮೇಲೆ ಒತ್ತಡ ಹಾಕಬೇಡಿ. ಕಾನೂನಿನಂತೆ ನಾವು ನಡೆಯುತ್ತೇವೆ. ಬೇಕಾದರೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ
ಸರೀನಾ ಸಿಕ್ಕಲಿಗರ್ ಡಿಸಿಎಫ್
ಒತ್ತುವರಿ ತೆರವು ವಿಚಾರದಲ್ಲಿ ರೈತರು ಪ್ರತಿಭಟನೆ ಮಾಡಿದಾಗ ನಾನು ಸಭೆ ನಡೆಸಿದ್ದೆ. ರೈತರನ್ನು ಒಕ್ಕಲೆಬ್ಬಿಸಬಾರದೆಂದು ಸೂಚನೆ ನೀಡಿದ್ದೆ. ಏಕೆಂದರೆ ಕೆಲವೆಡೆ ಜಂಟಿ ಸರ್ವೆ ಆಗಿರಲಿಲ್ಲ