ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ನಿಯಮಗಳು ಸಡಿಲ, ಗುಂಪಾಗಿ ಆಟ

Last Updated 8 ಏಪ್ರಿಲ್ 2020, 16:53 IST
ಅಕ್ಷರ ಗಾತ್ರ

ಕೆಜಿಎಫ್‌: ಕೊರೊನಾ ಸೋಂಕು ಹರಡದಂತೆ ನಿಷೇಧಾಜ್ಞೆ ವಿಧಿಸಲಾಗಿದ್ದರೂ, ಜನ ಲೆಕ್ಕಿಸದೆ ಮುಕ್ತವಾಗಿ ನಗರದಲ್ಲಿ ಓಡಾಡಲು ಪ್ರಾರಂಭಿಸಿದ್ದಾರೆ.

ಜನ ಮತ್ತು ವಾಹನ ಸಂಚಾರಕ್ಕೆ ಲಾಕ್‌ಡೌನ್‌ ನಿಮಿತ್ತ ನಿರ್ಬಂಧ ವಿಧಿಸಿದ ಸಂದರ್ಭದಲ್ಲಿ ಕೆಲವು ದಿನಗಳು ಪೊಲೀಸರು ಮತ್ತು ನಗರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಈ ಕಟ್ಟುನಿಟ್ಟಿನ ಕ್ರಮಗಳನ್ನು
ಸಡಿಲಗೊಳಿಸಿದ್ದಾರೆ.

ಪೊಲೀಸ್ ಬ್ಯಾರಿಕೇಡ್‌ಗಳು ಕೇವಲ ಹೆಸರಿಗೆ ಸೀಮಿತವಾಯಿತು. ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಗೆ ಸೂರಜ್‌ಮಲ್‌ ವೃತ್ತ ಮತ್ತು ರಾಬರ್ಟಸನ್‌ಪೇಟೆ–ಆಂಡರ್ಸನ್‌ಪೇಟೆ ಮುಖ್ಯ ರಸ್ತೆಗಳಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡಿ ದಂಡ ವಿಧಿಸುವ ಕೆಲಸಕ್ಕೆ ಮಾತ್ರ ಪೊಲೀಸರು ಸೀಮಿತರಾಗಿದ್ದಾರೆ. ಸ್ವಯಂಸೇವಕರು ಎಂಬ ಹೆಸರಿನಲ್ಲಿ ಪೊಲೀಸರು ಕೊಟ್ಟ ಪಾಸುಗಳನ್ನು ಹಿಡಿದುಕೊಂಡ ಯುವಕರ ದಂಡು ವಿನಾಕಾರಣ ನಗರದಲ್ಲಿ ಸಂಚರಿಸುತ್ತಿದೆ ಎಂಬ ದೂರುಗಳು ಕೇಳಿ
ಬಂದಿವೆ.

ಮುಖಗವಸು ಹಾಕದೆ ಇದ್ದರೂ ಪ್ರಕರಣ ದಾಖಲು ಮಾಡುತ್ತಿದ್ದ ಪೊಲೀಸರು ನಂತರ ಅದನ್ನು ಕೈಬಿಟ್ಟರು. ಅಂಗಡಿಯಲ್ಲಿ ಟೀ ಮಾರುತ್ತಿದ್ದ ಮತ್ತು ಅರಳೀಮರದ ಕೆಳಗೆ ಹರಟೆ ಹೊಡೆಯುತ್ತಿದ್ದ ಗುಂಪಿನ ಮೇಲೆ ಪ್ರಕರಣವನ್ನು ದಾಖಲು ಮಾಡಿದ ನಂತರ ಪುನಃ ಪ್ರಕರಣ ದಾಖಲು ಮಾಡಲಿಲ್ಲ. ಮೈನಿಂಗ್ ಪ್ರದೇಶದಲ್ಲಿ ಯುವಕರು ಗುಂಪು ಗುಂಪಾಗಿ ವಾಲಿಬಾಲ್‌, ಕ್ರಿಕೆಟ್‌ ಆಡುತ್ತಿದ್ದಾರೆ. ಮರದ ಕೆಳಗೆ ಗುಂಪಾಗಿ ಕುಳಿತು ಕೇರಂ ಆಡುತ್ತಿದ್ದಾರೆ.

ಸಾರ್ವಜನಿಕ ಕಟ್ಟಡಗಳಲ್ಲಿ ವಿವಿಧ ಕ್ರೀಡೆಗಳಲ್ಲಿ ತೊಡಗಿದ್ದಾರೆ. ಆದರೆ ಅವರನ್ನು ನಿಯಂತ್ರಿಸುವ ಕೆಲಸ ನಡೆಯುತ್ತಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಇಲ್ಲವೆ ದಂಡ ವಿಧಿಸುವ ಪ್ರಕ್ರಿಯೆಯನ್ನು ಕಡಿಮೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT