ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ಆಲಂಕಾರಿಕ ಹೆಂಚಿಗೆ ಹೆಚ್ಚಿದ ಬೇಡಿಕೆ

ಕುಂಬಾರರ ಸಂಪ್ರದಾಯಿಕ ಹೆಂಚಿಗೆ ಕುಸಿದ ಬೇಡಿಕೆ
Published 22 ಫೆಬ್ರುವರಿ 2024, 5:30 IST
Last Updated 22 ಫೆಬ್ರುವರಿ 2024, 5:30 IST
ಅಕ್ಷರ ಗಾತ್ರ

ಮಾಲೂರು: ಒಂದು ಕಾಲದಲ್ಲಿ ಮಾಲೂರು ಹೆಂಚಿನ ಕಾರ್ಖಾನೆಗಳಿಗೆ ಹೆಸರಾಗಿತ್ತು. ಸಾವಿರಾರು ಜನರಿಗೆ ಉದ್ಯೋಗವೂ ಒದಗಿಸಿತ್ತು. ಹೆಂಚಿನ ಕಾರ್ಖಾನೆಗಳು ತಾಲೂಕಿನ ಆರ್ಥಿಕತೆಗೂ ಊರುಗೋಲಾಗಿತ್ತು. ಈಗ ಇಟ್ಟಿಗೆ ಕಾರ್ಖಾನೆಗಳು ಅಲಂಕಾರಿಕಾ ಟೈಲ್ಸ್ ತಯಾರಿಕೆ ಕಾರ್ಖಾನೆಗಳಾಗಿ ಮಾರ್ಪಡಾಗಿವೆ.

ಈ ಹಿಂದೆ ಹೆಂಚು ತಯಾರು ಮಾಡುತ್ತಿದ್ದ ಕುಂಬಾರ ಸಮುದಾಯ ಈಗ ಮತ್ತೆ ಅಲಂಕಾರಿಕಾ ಹೆಂಚು ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಹಳೆ ಬೇರು ಹೊಸ ಚಿಗರು ಎಂಬಂತೆ ಹಳೆ ಕಸಬುಗೆ ಮರುಜೀವ ಬಂದಿದೆ.

ಮಾಲೂರಿನಲ್ಲಿ ಕುಂಬಾರ ಸಮದಾಯ 1865ರ ಸುಮಾರಿಗೆ ಹೆಂಚಿನ ಕಾರ್ಖಾನೆಗಳನ್ನು ಆರಂಭಿಸಿದರು. ಪಟ್ಟಣದ ರೈಲ್ವೆ ಸ್ಟೇಷನ್ ಹೊರವಲಯದಲ್ಲಿ ಆರಂಭವಾದ ಪ್ರತಿಯೊಂದು ಹಂಚಿನ ಕಾರ್ಖಾನೆಯಲ್ಲಿಯೂ ಇಟ್ಟಿಗೆಯಿಂದ ಕಟ್ಟಲಾದ ಸುಮಾರು 100 ಅಡಿ ಎತ್ತರದ ಒಂದು ಚಿಮಿಣಿ ಇರುತ್ತಿತ್ತು. ಹಸಿ ಆವೆ ಮಣ್ಣಿನಿಂದ ಮಾಡಿದ ಹೆಂಚು, ಇಟ್ಟಿಗೆ ಇತ್ಯಾದಿಗಳನ್ನು ಕಟ್ಟಿಗೆಯಿಂದ ಸುಡುವಾಗ ಆ ಚಿಮಿಣಿ ಮೂಲಕ ಹೊಗೆ ಆಕಾಶಕ್ಕೆ ಏರಿ ಹೋಗುತ್ತಿತ್ತು.

ಈಗಿನ ಕೈಗಾರಿಕೆ ಪ್ರಾಂಗಣ ಸ್ಥಾಪನೆ ಅಗುವುದಕ್ಕೂ ಮುನ್ನ ಹೆಂಚಿನ ಕಾರ್ಖಾನೆಗಳು ಆರಂಭವಾಗಿ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದವು. ಹೆಂಚುಗಳಿಗೆ ಬೇಡಿಕೆ ಕಡಿಮೆಯಾದಂತೆ ಹೆಂಚಿನ ಕಾರ್ಖಾನೆಗಳು ಇಟ್ಟಿಗೆ ಕಾರ್ಖಾನೆಗಳಾಗಿ ಪರಿವರ್ತನೆಗೊಂಡಿವೆ. ಅಲ್ಲದೇ ನೀಲಗಿರಿ ಬೆಳೆಯನ್ನು ಸರ್ಕಾರ ತೆರವುಗೊಳಿಸುವಂತೆ ಸೂಚಿಸದ ನಂತರ ಬಹತೇಕ ರೈತರು ಹಾಗೂ ಇತರರು ತಮ್ಮ ಭೂಮಿಗಳಲ್ಲಿ ಇಟ್ಟಿಗೆ ಕಾರ್ಖಾನೆಗಳನ್ನು ಆರಂಭಿಸಿದರು.

ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಕಾರ್ಖಾನೆಗಳು ಇದ್ದವು. ಇತ್ತೀಚೆಗೆ ಹಲವು ಕಾರಣಗಳಿಂದ ಇಟ್ಟಿಗೆಗಳಿಗೆ ಬೇಡಿಕೆ ಕಡಿಮೆಯಾದಂತೆ ಇದೀಗ ಅಲಂಕಾರಿಕಾ ಹೆಂಚು ತಯಾರಿಕೆಯಲ್ಲಿ ಕೆಲ ಉದ್ಯಮಿಗಳು ತೊಡಗಿಸಿಕೊಂಡಿದ್ದಾರೆ.

ಹೆಂಚು ರೀತಿಯಲ್ಲೇ ಅಲಂಕಾರಿಕಾ ಹೆಂಚು ಕೂಡ ತಯಾರು ಮಾಡಲಾಗುತ್ತದೆ. ಇದಕ್ಕೆ ಜೇಡಿ ಮಣ್ಣು ಬಹಳ ಮುಖ್ಯ. ಸ್ಥಳೀಯವಾಗಿ ಕೆಲ ಕೆರೆಗಳಲ್ಲಿ ಸಿಗುತ್ತದೆ. ಜೇಡಿ ಮಣ್ಣನ್ನು ಯಂತ್ರಗಳ ಮೂಲಕ ಪಕ್ವವಾಗಿಸಿ ಯಂತ್ರಗಳ ಮೂಲಕ ತಿಳಿ ಪೌಡರ್‌ ಮಾಡಿ ಅಗತ್ಯಕ್ಕೆ ತಕ್ಕಂತೆ ಬಾಕ್ಸ್‌ಗಳಲ್ಲಿ ತುಂಬಿಸಿ ವಿವಿಧ ರೀತಿಯ ಚಿತ್ರಗಳನ್ನು ಒಳಗೊಂಡಂತೆ ಯಂತ್ರದ ಸಹಾಯದಿಂದ ಅಲಂಕಾರಿಕಾ ಹೆಂಚುಗಳನ್ನು ತಯಾರ ಮಾಡಲಾಗುತ್ತದೆ.

ಸಿಮೆಂಟ್ ಛಾವಣಿ ಮೇಲೆ ಅಲಂಕಾರಿಕಾ ಹೆಂಚು ಹಾಕವುದು ಈಗಿನ ಟ್ರೆಂಡ್. ಒಂದು ಹೆಂಚು ₹18ರಿಂದ 20 ನೀಡಿ ಖರೀದಿಸುತ್ತಾರೆ. ಬೆಂಗಳೂರು, ತಮಿಳುನಾಡಿನ ಹೊಸೂರು ಸೇರಿದಂತೆ ವಿವಿಧ ಕಡೆ ಅಲಂಕಾರಿಕಾ ಹೆಂಚುಗಳಿಗೆ ಬೇಡಿಕೆ ಇದೆ ಎನ್ನುತ್ತಾರೆ ಉದ್ಯಮಿ ಶ್ರೀನಿವಾಸ್. 

ಅಲಂಕಾರಿಕ ಹೆಂಚು
ಅಲಂಕಾರಿಕ ಹೆಂಚು
ಅಲಂಕಾರಿಕ ಹೆಂಚು ತಯಾರು ಮಾಡಿರುವುದು
ಅಲಂಕಾರಿಕ ಹೆಂಚು ತಯಾರು ಮಾಡಿರುವುದು
ಅಲಂಕಾರಿಕಾ ಹೆಂಚು ತಯಾರಿಕೆ ಯಂತ್ರ
ಅಲಂಕಾರಿಕಾ ಹೆಂಚು ತಯಾರಿಕೆ ಯಂತ್ರ
ಅಲಂಕಾರಿಕ ಟೈಲ್ಸ್ ಗೂಡಿಗೆ ಹಾಕಿ ಸುಡುವ ಮುನ್ನ ಬಿಸಿಲಿಗೆ ಒಣಗಿಸುತ್ತಿರುವುದು
ಅಲಂಕಾರಿಕ ಟೈಲ್ಸ್ ಗೂಡಿಗೆ ಹಾಕಿ ಸುಡುವ ಮುನ್ನ ಬಿಸಿಲಿಗೆ ಒಣಗಿಸುತ್ತಿರುವುದು
ಅಲಂಕಾರಿಕಾ ಹೆಂಚು ತಯಾರಿಕೆ ಯಂತ್ರ
ಅಲಂಕಾರಿಕಾ ಹೆಂಚು ತಯಾರಿಕೆ ಯಂತ್ರ
ಶ್ರೀನಿವಾಸ್ ಹನುಮಾನ್ ಅಲಂಕಾರಿಕಾ ಟೈಲ್ಸ್ ರ್ಕಾಖಾನೆ ಮಾಲೀಕ
ಶ್ರೀನಿವಾಸ್ ಹನುಮಾನ್ ಅಲಂಕಾರಿಕಾ ಟೈಲ್ಸ್ ರ್ಕಾಖಾನೆ ಮಾಲೀಕ

ಇಟ್ಟಿಗೆಗಿಂತ ಅಲಂಕಾರಿಕ ಹೆಂಚುಗಳಿಗೆ ಬೇಡಿಕೆ ಇದೆ. ಮನೆಗಳನ್ನು ನೂತನವಾಗಿ ನಿರ್ಮಾಣ ಮಾಡುವ ಬಹತೇಕರು ಅಲಂಕಾರಿಕಾ ಹೆಂಚು ಬಳಸುತ್ತಾರೆ. ಎಎಲ್‌ಕೆ.

–ಶ್ರೀನಿವಾಸ್ ಹನುಮಾನ್ ಅಲಂಕಾರಿಕ ಹೆಂಚು ಕಾರ್ಖಾನೆ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT