ಮುಳಬಾಗಿಲು: ಮನೆಯ ಒಲೆಯಲ್ಲಿ ಇಟ್ಟಿದ್ದ ತೆಂಗಿನ ಗರಿಗಳ ಮೂಲಕ ಬೆಂಕಿ ವ್ಯಾಪಿಸಿ ಮಹಿಳೆಯೊಬ್ಬರು ತಾಲ್ಲೂಕಿನ ಅಣ್ಣೆಹಳ್ಳಿ ಗ್ರಾಮದಲ್ಲಿ ಶನಿವಾರ ಸಾವನ್ನಪ್ಪಿದ್ದಾರೆ.

ಅಣ್ಣೆಹಳ್ಳಿ ಗ್ರಾಮದ ಮಾರಕ್ಕ (75) ಮೃತರು. ಮಾರಕ್ಕ ಫೆ.5 ರಂದು ಅಡುಗೆ ಮಾಡಲೆಂದು ಒಲೆಯಲ್ಲಿ ಒಣಗಿದ ತೆಂಗಿನ ಗರಿಗಳನ್ನು ಇಟ್ಟು ಒಲೆ ಅಂಟಿಸಿ ಹಿಂದೆ ತಿರುಗಿದ್ದಾರೆ. ಆಗ ಆಕಸ್ಮಿಕವಾಗಿ ಸೀರೆಗೆ ಬೆಂಕಿ ತಗುಲಿ ಕೈ ಕಾಲು ಸುಟ್ಟು ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಮೃತರಿಗೆ ಐದು ಮಂದಿ ಮಕ್ಕಳಿದ್ದಾರೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.