ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ನೊಸಗೆರೆ ಗ್ರಾಮ ಸಭೆ

Last Updated 15 ಜನವರಿ 2022, 7:29 IST
ಅಕ್ಷರ ಗಾತ್ರ

ಮಾಲೂರು: ತಾಲ್ಲೂಕಿನ ನೊಸಗೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ದೀಪಿಕಾ ಮೋಹನ್ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು.

ಸಭೆಯಲ್ಲಿ ವಸತಿ ಸೌಕರ್ಯ ಸೇರಿದಂತೆ ವಿವಿಧ ಇಲಾಖೆಯ ಸವಲತ್ತುಗಳಿಗಾಗಿ ಫಲಾನುಭವಿಗಳು ಅರ್ಜಿ ಸಲ್ಲಿಸಿದರು.

ಅಧ್ಯಕ್ಷೆ ದೀಪಿಕಾ ಮೋಹನ್ ಮಾತನಾಡಿ, 15ನೇ ಹಣಕಾಸು ಯೋಜನೆ, ಎಂಎನ್‌ಆರ್‌ಇಜಿ ಯೋಜನೆ ಸೇರಿದಂತೆ ಸರ್ಕಾರದಿಂದ ಬರುವ ಅನುದಾನ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಸರ್ಕಾರದಿಂದ ಮನೆ ಇಲ್ಲದ ನಿರ್ಗತಿಕರಿಗೆ 40 ಮನೆಗಳು ಮಂಜೂರಾಗಿದ್ದು, ವಸತಿ ಸೌಕರ್ಯಕ್ಕೆ ಅರ್ಜಿ ಹಾಕಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಗ್ರಾ.ಪಂ. ಉಪಾಧ್ಯಕ್ಷ ಎನ್.ವಿ. ಈಶ್ವರ್, ನೋಡಲ್ ಅಧಿಕಾರಿ ಬಿ.ಎಂ. ರಾಘವೇಂದ್ರ, ಸದಸ್ಯರಾದ ಅಶೋಕ್ ಕುಮಾರ್, ರಮೇಶ್, ಪ್ರಶಾಂತ್, ಎಚ್.ಆರ್. ರಮೇಶ್, ವಿ. ನಾರಾಯಣಸ್ವಾಮಿ, ಕೆ. ಚಂದ್ರಶೇಖರ್, ರವಿಕುಮಾರ್, ಕೆ.ಎ. ಲಾವಣ್ಯ, ಸರಸಮ್ಮ, ರತ್ನಮ್ಮ, ಜಯಶ್ರೀ, ಲಕ್ಷ್ಮಿಕಾಂತ, ಸರಸ್ವತಿ, ಆಶಿಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT